ಕುಸಿದಿರುವ ಜಿಡಿಪಿ ಸದ್ಯಕ್ಕೆ ಎದ್ದೇಳುವ ಲಕ್ಷಣಗಳೇ ಕಾಣಿಸುತ್ತಿಲ್ಲ

ಬೆಂಗಳೂರು, ಸೆಪ್ಟೆಂಬರ್ 1: ಕುಂಠಿತಗೊಂಡಿರುವ ಭಾರತೀಯ ಆರ್ಥಿಕತೆ ಸದ್ಯಕ್ಕೆ ಚೇತರಿಸಿಕೊಳ್ಳುವ ಲಕ್ಷಣಗಳಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಏಪ್ರಿಲ್ ನಿಂದ ಜೂನ್ ವರೆಗಿನ ಮೊದಲ ತ್ರೈಮಾಸಿಕದ ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಬೆಳವಣಿಗೆ ದರವು ಶೇ 5.7ಕ್ಕೆ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ. ಜನವರಿಯಿಂದ ಮಾರ್ಚ್ ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿ ಶೇ 6.1ರಷ್ಟಿತ್ತು. ಅದೀಗ ಮತ್ತೂ ಕುಸಿತ ಕಂಡು, ಅಂದರೆ ಶೇ 0.4ರಷ್ಟು ಇಳಿಕೆಯಾಗಿ 5.7 ತಲುಪಿದೆ. 2014ರ ಜೂನ್-ಮಾರ್ಚ್ ನಡಿವಿನ ಜಿಡಿಪಿ ಕುಸಿತದ ನಂತರ ಇದೇ ಮೊದಲ ಬಾರಿಗೆ ಇಷ್ಟು ಕೆಳಮಟ್ಟಕ್ಕೆ ಜಿಡಿಪಿ ಇಳಿಕೆಯಾಗಿದೆ.

At present, the GDP does not seem to increase

ಕನಿಷ್ಠ ಮುಂದಿನ ತ್ರೈಮಾಸಿಕದವರಗೆ ಜಿಡಿಪಿ ಬೆಳವಣಿಗೆ ದರದಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳಿಲ್ಲ. ಜಿಡಿಪಿ ಕುಸಿತ ಹೀಗೆ ಮುಂದುವರಿಯಲಿದೆ ಎನ್ನಲಾಗಿದೆ.

ಇನ್ನು ಸದ್ಯಕ್ಕೆ ಜಿಎಸ್ಟಿ ಕೂಡಾ ಜಾರಿಗೆ ಬಂದಿದ್ದು ಆರ್ಥಿಕತೆಯ ಸ್ಥಿರತೆಯನ್ನೇ ಇದು ಅಲ್ಲಾಡಿಸಿದೆ. ಇದರ ಪ್ರಭಾವ ಮುಂದಿನ ಎರಡು ತ್ರೈಮಾಸಿಕಗಳ ಮೇಲೆ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದಾರೆ.

"ಜಿಡಿಪಿ ಬೆಳವಣಿಗೆ ಮೇಲೆ ಜಿಎಸ್ಟಿ ನಕಾರಾತ್ಮಕ ಪರಿಣಾಮ ಬೀರಲಿದೆ," ಎಂದು ಆರ್ಥಿಕ ತಜ್ಞೆ ಅಂಜಲಿ ವರ್ಮಾ 'ರಾಯ್ಟರ್' ಸುದ್ದಿಸಂಸ್ಥೆಗೆ ಅಭಿಪ್ರಾಯ ತಿಳಿಸಿದ್ದಾರೆ.

"ಖಾಸಗಿ ಹೂಡಿಕೆಗಳು ಹೆಚ್ಚುತ್ತಿಲ್ಲ. ಈ ಕಾರಣಕ್ಕೆ ನಾವು ಜಿಎಸ್ಟಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ," ಎಂದು ಹಿರಿಯ ಸಂಶೋಧಕಿ ಮಿಹಿರ್ ಶರ್ಮಾ ಎನ್ಡಿಟಿವಿಗೆ ತಿಳಿಸಿದ್ದಾರೆ.

ಇನ್ನು ಕೈಗಾರಿಕಾ ಉದ್ಯಮಿಗಳ ಒಕ್ಕೂಟ 'ಅಸೋಚಾಮ್' ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಸರಕಾರ ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಸೋಚಾಮ್ ಒತ್ತಾಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+