ದೇಶಿಯ ವಿಮಾನ ಸೇವೆ ಆರಂಭ; ರಾಜ್ಯಕ್ಕೆ ಆಗಮಿಸಿದರೆ ಕ್ವಾರಂಟೈನ್

ಗೌಹಾತಿ, ಮೇ 21 : ಲಾಕ್ ಡೌನ್ ಪರಿಣಾಮ ಭಾರತದಲ್ಲಿ ವಿಮಾನಗಳ ಸಂಚಾರ ಸಂಪೂರ್ಣವಾಗಿ ರದ್ದಾಗಿದೆ. ಆದರೆ, ಮೇ 25ರಿಂದ ದೇಶಿಯ ವಿಮಾನಗಳ ಹಾರಾಟವನ್ನು ಆರಂಭಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ.

ದೇಶಿಯ ವಿಮಾನಗಳ ಮೂಲಕ ವಿವಿಧ ರಾಜ್ಯಗಳಿಗೆ ಸಂಚಾರ ನಡೆಸುವ ಜನರಿಗೆ ಕ್ವಾರಂಟೈನ್‌ ಇದೆಯೇ? ಅಥವ ವಿಮಾನ ನಿಲ್ದಾಣದಿಂದ ಅವರ ಮನೆಗೆ ಹೋಗಲು ಅವಕಾಶ ಸಿಗಲಿದೆಯೇ? ಎಂಬುದು ಇನ್ನೂ ಗೊಂದಲಕ್ಕೆ ಕಾರಣವಾಗಿದೆ.

ಗುರುವಾರ ಅಸ್ಸಾಂ ಸರ್ಕಾರ ಈ ಕುರಿತು ಆದೇಶವೊಂದನ್ನು ಹೊರಡಿಸಿದೆ. ವಿಮಾನಗಳ ಮೂಲಕ ರಾಜ್ಯಕ್ಕೆ ಆಗಮಿಸುವವರನ್ನು ಕ್ವಾರಂಟೈನ್‌ಗೆ ಹಾಕಲಾಗುತ್ತದೆ ಎಂದು ಹೇಳಿದೆ. ಇದರಿಂದಾಗಿ ಸಂಚಾರ ನಡೆಸುವ ಪ್ರಯಾಣಿಕರು ಒಮ್ಮೆ ಆಲೋಚಿಸಬೇಕು.

Assam To Quarantine Passengers Arriving In Flights

ರಾಜ್ಯದ ಆರೋಗ್ಯ ಸಚಿವ ಹಿಮಂತ್ ಬಿಸ್ವಾಸ್ ಶರ್ಮಾ ಈ ಕುರಿತು ಮಾಹಿತಿ ನೀಡಿದ್ದಾರೆ. "ವಿಮಾನದಲ್ಲಿ ಆಗಮಿಸುವ ಜನರಿಗೆ ಕ್ವಾರಂಟೈನ್ ಮಾಡಲು ಸರ್ಕಾರ ತೀರ್ಮಾನಿಸಿದೆ" ಎಂದು ಹೇಳಿದ್ದಾರೆ. ಆದರೆ, ಬೇರೆ ರಾಜ್ಯಗಳು ಇದುವರೆಗೂ ಯಾವುದೇ ಘೋಷಣೆ ಮಾಡಿಲ್ಲ.

"ದೇಶಿಯ ವಿಮಾನದಲ್ಲಿ ಸಂಚಾರ ನಡೆಸುವವರು 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಿಲ್ಲ" ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ಹೇಳಿದ್ದಾರೆ.

ರಸ್ತೆ, ರೈಲಿನ ಮೂಲಕ ವಿವಿಧ ರಾಜ್ಯಗಳಿಗೆ ಬೇರೆ ರಾಜ್ಯದಿಂದ ಆಗಮಿಸುವ ಜನರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ, ವಿಮಾನ ಸೇವೆಗೆ ಈ ನಿಯಮ ಅನ್ವಯವಾಗುದಿಲ್ಲ. ಆದರೆ, ಕೆಲವು ರಾಜ್ಯ ಸರ್ಕಾರಗಳು ಕ್ವಾರಂಟೈನ್ ಮಾಡುವ ತೀರ್ಮಾನ ಕೈಗೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+