ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರ ಬಗ್ಗೆ ಮೋಹನ್ ಭಾಗ್ವತ್ ಹೇಳಿಕೆಗೆ ಓವೈಸಿ ತಿರುಗೇಟು

|
Google Oneindia Kannada News

''ಸಿಎಎ, ಎನ್ ಆರ್ ಸಿ ವಿರೋಧಿಸುವವರು ನಮ್ಮ ಮುಸಲ್ಮಾನ ಭ್ರಾತೃಗಳಲ್ಲಿ ವಿಷ ಬಿತ್ತುವ ಯೋಜನೆ ರೂಪಿಸಿ, ಮುಸಲ್ಮಾನ ಜನಸಂಖ್ಯೆಯನ್ನು ನಿಯಂತ್ರಿಸಲು ಈ ಕಾನೂನನ್ನು ರಚಿಸಲಾಗಿದೆ ಎಂಬ ಮಿಥ್ಯವನ್ನು ಸಾರಲಾಗಿದೆ'' ಎಂದು ವಿಜಯ ದಶಮಿ ದಿನದ ಭಾಷಣದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ಹೇಳಿದ್ದರು.

ಎಎಂಐಎಂಐ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ. ನಾವು(ಮುಸ್ಲಿಮರು) ತಪ್ಪು ಮಾರ್ಗದರ್ಶನಕ್ಕೆ ಒಳಪಡಲು ಮಕ್ಕಳಲ್ಲ. ಸಿಎಎ+ ಎನ್ ಆರ್ ಸಿ ಬಗ್ಗೆ ಬಿಜೆಪಿ ಸತ್ಯಾಸತ್ಯತೆ ಹೊರಹಾಕಲಿ ಎಂದಿದ್ದಾರೆ.

ಧಾರ್ಮಿಕ ಆಚರಣೆಯ ಆಧಾರಿತ ನಾಗರಿಕ ಹಕ್ಕಿನ ಪ್ರಶ್ನೆ ಬಂದರೆ ನಮ್ಮ ಹೋರಾಟ ಸದಾ ಜಾರಿಯಲ್ಲಿರುತ್ತದೆ. ಮುಸ್ಲಿಮರ ಬಗ್ಗೆ ಅಲ್ಲದಿದ್ದರೆ ಕಾನೂನಿನಲ್ಲಿ ಧರ್ಮದ ಬಗ್ಗೆ ಇರುವ ಉಲ್ಲೇಖಗಳನ್ನು ತೆಗೆದು ಹಾಕುತ್ತೀರಾ? ಭಾರತೀಯರು ಎಂಬುದನ್ನು ಸಾಬೀತುಪಡಿಸಲು ಕಾನೂನಿನ ಮೊರೆ ಹೋಗಬೇಕಾದರೆ ನಮ್ಮ ಪ್ರತಿಭಟನೆ ಇದೇ ರೀತಿ ಮುಂದುವರೆಯಲಿದೆ ಎಂದು ಓವೈಸಿ ಹೇಳಿದ್ದಾರೆ.

ಶಕ್ತಿ, ವ್ಯಾಪ್ತಿಯಲ್ಲಿ ಚೀನಾ ಮೀರಿಸಿ ಭಾರತ ಬೆಳೆಯಲಿ: ಭಾಗ್ವತ್ ಶಕ್ತಿ, ವ್ಯಾಪ್ತಿಯಲ್ಲಿ ಚೀನಾ ಮೀರಿಸಿ ಭಾರತ ಬೆಳೆಯಲಿ: ಭಾಗ್ವತ್

Asaduddin Owaisi responds to Mohan Bhagwat take on Muslims misguided on CAA

ಈ ಪ್ರತಿಭಟನೆ ಸಂದರ್ಭದಲ್ಲಿ ಮೌನ ವಹಿಸಿದ ಕಾಂಗ್ರೆಸ್, ಆರ್ ಜೆಡಿ ಹಾಗೂ ಇತರೆ ಪಕ್ಷಗಳ ನಿಲುವನ್ನು ನಾವು ಮರೆತಿಲ್ಲ. ಸೀಮಾಂಚಲದವರನ್ನು ನುಸುಳುಕೋರರು ಎಂದಿರುವ ಬಿಜೆಪಿ ವಿರುದ್ಧ ದನಿಯೆತ್ತದ ಆರ್ ಜೆಡಿ- ಐಎನ್ ಸಿಯ ಮೌನವನ್ನು ನೋಡಿದ್ದೇವೆ ಎಂದು ಓವೈಸಿ ಜಾಡಿಸಿದ್ದಾರೆ.

ಸಿಎಎ, ಎನ್ ಆರ್ ಸಿ ಹಾಗೂ ಮುಸ್ಲಿಮರ ಬಗ್ಗೆ ಭಾಗ್ವತ್:
ಪೌರತ್ವ ಕಾಯಿದೆ ಧರ್ಮವನ್ನು ವಿರೋಧಿಸುವುದಿಲ್ಲ ನಮ್ಮ ನೆರೆಯ ದೇಶಗಳಲ್ಲಿ ನಮ್ಮ ಸಹೋದರ ಸಹೋದರಿಯರಿಗೆ ನೀಡಲಾಗುವ ಕಿರುಕುಳ, ಉಪದ್ರವಗಳಿಗೆ ಹೆದರಿ ನಮ್ಮ ದೇಶಕ್ಕೆ ವಲಸೆ ಬಂದು ಇಲ್ಲಿ ಆಶ್ರಯ ಪಡೆಯುವವರಿಗೆ ಪೌರತ್ವ ನೀಡುವ ಕಾರ್ಯಕ್ಕೆ ಈ ಕಾಯಿದೆಯಿಂದ ಸಾಧ್ಯವಾಯಿತು. ಈ ನೆರೆಯ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿರುವುದು ತಿಳಿದಿರುವ ವಿಷಯವೇ. ಪೌರತ್ವ ಕಾಯಿದೆಗೆ ಮಾಡಿರುವ ಈ ತಿದ್ದುಪಡಿ ಯಾವುದೇ ಧರ್ಮವನ್ನು ವಿರೋಧಿಸುವುದಿಲ್ಲ. ವಿದೇಶಿಗರಿಗೆ ನಮ್ಮ ಸಂವಿಧಾನದ ಅಡಿಯಲ್ಲಿ ನೀಡಲಾಗುವ ಪೌರತ್ವದಲ್ಲಿ ಯಾವುದೇ ಬದಲಾವಣೆಯನ್ನು ಈ ತಿದ್ದುಪಡಿಯಿಂದ ಮಾಡಲಾಗಿಲ್ಲ.

Recommended Video

Corona ಓಡಿಸೋ ಸಮಯ ದೂರ ಇಲ್ಲಾ | Corona Vaccine | Oneindia Kannada

ಆದರೆ ಈ ಹೊಸ ಕಾನೂನನ್ನು ವಿರೋಧಿಸುವವರು ನಮ್ಮ ಮುಸಲ್ಮಾನ ಭ್ರಾತೃಗಳಲ್ಲಿ ವಿಷ ಬಿತ್ತುವ ಯೋಜನೆ ರೂಪಿಸಿ, ಮುಸಲ್ಮಾನ ಜನಸಂಖ್ಯೆಯನ್ನು ನಿಯಂತ್ರಿಸಲು ಈ ಕಾನೂನನ್ನು ರಚಿಸಲಾಗಿದೆ ಎಂಬ ಮಿಥ್ಯವನ್ನು ಸಾರಿದರು. ಪ್ರತಿಭಟನೆಯ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಕಾರ್ಯದಲ್ಲಿ ಅವಕಾಶವಾದಿಗಳು ಈ ಸೂಕ್ಷ್ಮ ಪರಿಸ್ಥಿತಿಯನ್ನು ಬಳಸಿಕೊಂಡರು. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಸಾಮಾಜಿಕ ಸ್ವಾಸ್ಥ್ಯಕ್ಕೂ ಅಪಾಯವುಂಟಾಯಿತು. ಈ ಸಮಸ್ಯೆಯ ಮೂಲವನ್ನು ಹುಡುಕಿ ಬಗೆಹರಿಸುವ ಮುನ್ನವೇ ಕೊರೋನಾ ಮಹಾಮಾರಿ ಒಳನುಸುಳಿ ಸಮಸ್ತ ನಿಯಂತ್ರಣ ತೆಗೆದುಕೊಂಡಿತು. ದಂಗೆಕೋರರು, ಅವಕಾಶವಾದಿಗಳು ಸಂಘರ್ಷದ ಕಿಚ್ಚನ್ನು ಹೊತ್ತಿಸಬೇಕೆಂದು ಹವಣಿಸುತ್ತಿದ್ದಾರೆ. ಸಾಮೂಹಿಕ ಪ್ರಜ್ಞೆಯಿಂದಾಗಿಯೋ ಅಥವಾ ಮಾಧ್ಯಮಗಳಲ್ಲಿ ಕರೋನಾದ ಅತಿಯಾದ ಚರ್ಚೆಗಳಿಂದಾಗಿ ಇಂತಹ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಸುದ್ದಿಗಳಿಗೆ ಪ್ರಾಮುಖ್ಯತೆ ಸಿಗುತ್ತಿಲ್ಲ.

English summary
Asaduddin Owaisi, president of the AIMIM, reacted sharpely to the Vijaya Dashmi speech of RSS chief Mohan Bhagwat and said Muslims are not kid to be 'misguided' on CAA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X