ಆತ್ಮಹತ್ಯೆ ಮಾಡಿಕೊಂಡ ಯೋಧನ ಕುಟುಂಬಕ್ಕೆ ಕೇಜ್ರಿವಾಲ್ 1 ಕೋಟಿ ಪರಿಹಾರ

Written By: Ramesh
Subscribe to Oneindia Kannada

ಹರಿಯಾಣ, ನವೆಂಬರ್. 04 : ಏಕ ಶ್ರೇಣಿ ಏಕ ರೀತಿಯ ಪಿಂಚಣಿ ಯೋಜನೆಯ ಅನುಷ್ಠಾನದಲ್ಲಿನ ವಿಳಂಬಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಮಾಜಿ ಯೋಧ ಸುಬೇದಾರ್ ರಾಮ್ ಕಿಶನ್ ಗ್ರೇವಲ್ ಅವರ ಕುಟುಂಬಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ 1 ಕೋಟಿ ರು. ಪರಿಹಾರ ಘೋಷಿಸಿದ್ದಾರೆ.

ಗುರುವಾರ ಹರಿಯಾಣದ ಭಿವಾನಿಯಲ್ಲಿನ ಮೃತ ಯೋಧನ ನಿವಾಸಕ್ಕೆ ತೆರಳಿ ಅವರ ಶೋಕತಪ್ತ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ನಂತರ ಗರೆವಾಲ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ದೆಹಲಿ ಸರ್ಕಾರದಿಂದ 1 ಕೋಟಿ ರುಗಳು ನೀಡುವುದಾಗಿ ಭರವಸೆ ನೀಡಿದರು. [ರಕ್ಷಣಾ ಸಚಿವರು ಮನವಿ ಕೇಳಲಿಲ್ಲ: ನಿವೃತ್ತ ಯೋಧ ಆತ್ಮಹತ್ಯೆ]

Arvind Kejriwal Offers Rs 1 Crore Compensation to Ex-Jawan's Family

ಗರೆವಾಲ್ ಕುಟುಂಬದವರಿಗೆ ಸಾಂತ್ವನ ಹೇಳಿದ ಕೇಜ್ರಿವಾಲ್, ಮೃತ ಯೋಧನ ಕುಟುಂಬದವರನ್ನು ಪ್ರಧಾನಿ ಮೋದಿ ಭೇಟಿಯಾಗಬೇಕಿತ್ತು. [OROP: ಮಾಜಿ ಸೈನಿಕನ ಶವದ ಮುಂದೆ ಹೀಗೊಂದು ಹೊಲಸು ರಾಜಕೀಯ]

ಯಾವ ದರ್ಪದ ಮನೋಭಾವದಿಂದಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರದಿಂದ ಕೆಳಗಿಳಿಯಿತೋ ಅದೇ ದರ್ಪದ ಫ‌ಲವಾಗಿ ಬಿಜೆಪಿ ಕೂಡ ಅಧಿಕಾರದಿಂದ ಕೆಳಗಿಳಿಯಲಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.

ಇದೀಗ ಸಂಪೂರ್ಣ ದೇಶವೇ ಒಆರ್ಒಪಿ ಜಾರಿಗೊಳಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದೆ. ನಾವು ಕೂಡಾ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತೇವೆ ಎಂದರು. ಹರಿಯಾಣದ ಭಿವಾನಿ ಜಿಲ್ಲೆಯ ಬುಮ್ಲಾ ಗ್ರಾಮದಲ್ಲಿ ನವೆಂಬರ್ 01 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Delhi Chief Minister Arvind Kejriwal on Thursday announced Rs 1 crore financial assistance to the family of a retired soldier who killed himself demanding the OROP's implementation.
Please Wait while comments are loading...