ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣಾಚಲ ಪ್ರದೇಶ: ಕಪ್ಪು ಬಣ್ಣಕ್ಕೆ ತಿರುಗಿದ ನದಿಯಲ್ಲಿ ಸಾವಿರಾರು ಮೀನುಗಳ ಸಾವು

|
Google Oneindia Kannada News

ನವದೆಹಲಿ, ಅಕ್ಟೋಬರ್ 30: ಅರುಣಾಚಲ ಪ್ರದೇಶದ ನದಿಯೊಂದು ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದ್ದು, ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಕಮೆಂಗ್ ನದಿಯ ಮೇಲ್ಮೈಯಲ್ಲಿ ತೇಲುತ್ತಿರುವ ಮೀನುಗಳನ್ನು ತಿನ್ನದಂತೆ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಪೂರ್ವ ಕಮೆಂಗ್ ಜಿಲ್ಲೆಯಲ್ಲಿನ ನದಿಯು ಕಪ್ಪು ಬಣ್ಣಕ್ಕೆ ತಿರುಗಲು ಒಟ್ಟಾಗಿ ಕರಗಿದ ಪದಾರ್ಥಗಳೇ (ಟಿಡಿಎಸ್) ಹೆಚ್ಚು ಕಾರಣ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಟಿಡಿಎಸ್ ಜಲಚರಗಳ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಜಿಲ್ಲಾ ಮೀನುಗಾರಿಕೆ ಅಧಿಕಾರಿಗಳನ್ನು ಉಲ್ಲೇಖಿಸಿದ್ದಾರೆ. ಹೆಚ್ಚಿನ ಪ್ರಮಾಣದ ಟಿಡಿಎಸ್‌ನಿಂದಾಗಿ ನೀರಿನ ಅಡಿಯಲ್ಲಿರುವ ಮೀನುಗಳಿಗೆ ಗೋಚರತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಹವಾಮಾನ ವೈಪರೀತ್ಯದಿಂದ ಭಾರತ, ಚೀನಾ ಬಹಳಷ್ಟು ಬಳಲಿದೆ: ವಿಶ್ವಸಂಸ್ಥೆ ವರದಿ ಹವಾಮಾನ ವೈಪರೀತ್ಯದಿಂದ ಭಾರತ, ಚೀನಾ ಬಹಳಷ್ಟು ಬಳಲಿದೆ: ವಿಶ್ವಸಂಸ್ಥೆ ವರದಿ

ಕಮೆಂಗ್ ನದಿಯಲ್ಲಿನ ಟಿಡಿಎಸ್ ಪ್ರಮಾಣವು ಪ್ರತಿ ಲೀಟರ್‌ಗೆ 6,800 ಮಿಗ್ರಾಂ ಆಗಿತ್ತು, ಇದು ಪ್ರತಿ ಲೀಟರ್‌ಗೆ ಸಾಮಾನ್ಯ ಶ್ರೇಣಿಯಲ್ಲಿ 300-1,200 ಮಿಗ್ರಾಂಗಿಂತ ಹೆಚ್ಚಾಗಿದೆ ಎಂದು ಜಿಲ್ಲಾ ಮೀನುಗಾರಿಕೆ ಅಭಿವೃದ್ಧಿ ಅಧಿಕಾರಿ (ಡಿಎಫ್‌ಡಿಒ) ಹಾಲಿ ತಾಜೋ ಹೇಳಿದ್ದಾರೆ.

 Arunachal River Suddenly Turned Black and Leading To Death Of Thousands Of Fish: Locals Blames China

ಚೀನಾ ವಿರುದ್ಧ ಸ್ಥಳೀಯರ ಆರೋಪ:

ಕಮೆಂಗ್ ನದಿಯಲ್ಲಿ ಒಟ್ಟಾಗಿ ಕರಗಿದ ಪದಾರ್ಥಗಳ ಪ್ರಮಾಣ ಹೆಚ್ಚಾಗುವುದಕ್ಕೆ ಚೀನಾ ಕಾರಣ ಎಂದು ಸ್ಥಳೀಯ ಸೆಪ್ಪಾ ಗ್ರಾಮದ ನಿವಾಸಿಗಳು ಆರೋಪಿಸಿದ್ದಾರೆ. ನೆರೆಯ ದೇಶವು ಗಡಿಯುದ್ದಕ್ಕೂ ನಡೆಸುತ್ತಿರುವ ನಿರ್ಮಾಣ ಚಟುವಟಿಕೆಗಳಿಂದಾಗಿ TDS ಮಟ್ಟವು ಅಪಾಯಕಾರಿ ಮಟ್ಟವನ್ನೂ ಮೀರಿದೆ ಎಂದು ಹೇಳುತ್ತಿದ್ದಾರೆ. "ಇದು ಕೆಲವು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ನದಿಯಿಂದ ಜಲಚರಗಳು ಸಂಪೂರ್ಣವಾಗಿ ನಾಶವಾಗುತ್ತವೆ" ಎಂದು ಪಿಟಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಮೆಂಗ್ ನದಿಯ ನೀರಿನ ಬಣ್ಣ ಹಠಾತ್ ಬದಲಾವಣೆ ಮತ್ತು ಹೆಚ್ಚಿನ ಪ್ರಮಾಣದ ಮೀನುಗಳ ಸಾವಿನ ಹಿಂದಿನ ಕಾರಣವನ್ನು ಕಂಡುಹಿಡಿಯಲು ತಜ್ಞರ ಸಮಿತಿಯನ್ನು ತಕ್ಷಣವೇ ರಚಿಸಬೇಕೆಂದು ಸೆಪ್ಪಾ ಪೂರ್ವ ಶಾಸಕ ತಪುಕ್ ಟಾಕು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಈ ವಾರದ ಆರಂಭದಲ್ಲಿ, ಭಾರತವು ಅರುಣಾಚಲ ಪ್ರದೇಶದ ಗಡಿಯಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಹೆಚ್ಚಿದ ಚಟುವಟಿಕೆಗಳನ್ನು ಮತ್ತು ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಿತ್ತು.

ಭಾರತೀಯ ಸೇನೆಯು ಲುಂಗ್ರೋ ಲಾ, ಝಿಮಿತಾಂಗ್ ಮತ್ತು ಬಮ್ ಲಾಗಳಲ್ಲಿ PLA ಯ ಹೆಚ್ಚಿದ ಕಾರ್ಯಾಚರಣೆಯ ಗತಿಯನ್ನು ಪತ್ತೆಹಚ್ಚಿದೆ, ಇವು ಪೂರ್ವ ವಲಯದಲ್ಲಿ ಚೀನಾದ ಆಕ್ರಮಣದ ಸಂದರ್ಭದಲ್ಲಿ ಐತಿಹಾಸಿಕ ಪ್ರಾಮುಖ್ಯತೆಯ ಪ್ರದೇಶಗಳಾಗಿವೆ ಎಂದು ಹಿಂದೂಸ್ತಾನ್ ಟೈಮ್ಸ್ ಮಾಹಿತಿಯಲ್ಲಿ ಉಲ್ಲೇಖಿಸಲಾಗಿತ್ತು.

ಭಾರತ-ಚೀನಾ ಗಡಿಯಲ್ಲಿ ಹೆಚ್ಚಿನ ಭದ್ರತೆ:

PLA ಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಸೇನೆಯು ಉಪಗ್ರಹಗಳು, ದೀರ್ಘ-ಶ್ರೇಣಿಯ ಮಾನವರಹಿತ ವೈಮಾನಿಕ ವಾಹನಗಳು, ರಾಡಾರ್‌ಗಳ ಉನ್ನತ ಜಾಲ ಮತ್ತು ಹೈಟೆಕ್ ರಾತ್ರಿ ದೃಷ್ಟಿ ವ್ಯವಸ್ಥೆಗಳನ್ನು ಬಳಸಿತು. ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳು ಮತ್ತು ಲುಂಗ್ರೋ ಲಾ, ಝಿಮಿತಾಂಗ್ ಮತ್ತು ಬಮ್ ಲಾ ಸೆಕ್ಟರ್‌ಗಳಾದ್ಯಂತ ರಸ್ತೆ ತೆರೆದಿಡಲು ಹೆಚ್ಚಿನ ಸಂಖ್ಯೆಯಲ್ಲಿ ಅಗೆಯುವ ಯಂತ್ರಗಳು ಮತ್ತು ಬುಲ್ಡೋಜರ್‌ಗಳ ತರಿಸಲಾಗಿತ್ತು. ಈ ಕಾರಣದಿಂದಾಗಿ ಕಣ್ಗಾವಲು ವಾಹನಗಳ ಚಲನೆಯನ್ನು ಹೆಚ್ಚಿಸಲಾಗಿತ್ತು.

English summary
Arunachal River Suddenly Turned Black and Leading To Death Of Thousands Of Fish: Locals Blames China for the Incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X