ಕಾಶ್ಮೀರದಲ್ಲಿ ಉಗ್ರರಿಂದ ಭೂ ಸೇನೆ ಸೈನಿಕನ ಅಪಹರಣ

ಕಾಶ್ಮೀರ, ಜೂನ್ 14: ಜಮ್ಮು ಮತ್ತು ಕಾಶ್ಮೀರ ಜಿಲ್ಲೆಯ ಪುಲ್ವಾಮಾದಲ್ಲಿ ಸೈನಿಕರೊಬ್ಬರನ್ನು ಉಗ್ರರು ಅಪಹರಿಸಿದ್ದಾರೆ. ರಮ್ಜಾನ್ ಕದನ ವಿರಾಮದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಅಪಹರಣಕ್ಕೊಳಗಾದ ಸೈನಿಕರನ್ನು ಔರಂಗಜೇಬ್ ಎಂದು ಗುರುತಿಸಲಾಗಿದೆ. ಇವರು ಪೂಂಚ್ ನಿವಾಸಿಯಾಗಿದ್ದಾರೆ.

ಭಾರತೀಯ ಸೇನೆ ರಮ್ಜಾನ್ ಹಿನ್ನೆಲೆಯಲ್ಲ ಕದನ ವಿರಾಮ ಘೋಷಿಸಿದ ನಂತರ ಕಣಿವೆಯಲ್ಲಿ ಕಲ್ಲು ತೂರಾಟ ಮತ್ತು ಹಿಂಸಾಚಾರದಲ್ಲಿ ಭಾರೀ ಇಳಿಮುಖವಾಗಿದೆ. ಆದರೆ ಹಲವು ಸಂದರ್ಭದಲ್ಲಿ ಸೈನಿಕರ ಮೇಲೆ ಉಗ್ರರು ಮಾತ್ರ ದಾಳಿ ನಡೆಸುತ್ತಲೇ ಇದ್ದಾರೆ.

Army man abducted in Pulwama, massive search on

ಇಂದು ಬೆಳಿಗ್ಗೆ ಇದೇ ಪುಲ್ವಾಮಾದ ಗ್ಯಾಂಗೂನಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್ ಪಿಎಸ್ ಪಡೆಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಇನ್ನು ಕಳೆದ ಎರಡು ದಿನಗಳಲ್ಲಿ ಬಂಡಿಪೋರಾ ಮತ್ತು ಶೋಪಿಯಾನ್ ಲ್ಲೂ ಎನ್ಕೌಂಟರ್ ಗಳೂ ನಡೆದಿವೆ.

ಇದರ ಜೊತೆಗೆ ಭಾರತದ ಗಡಿಯೊಳಕ್ಕೆ ನುಸುಳುವ ಹಲವು ವಿಫಲ ಯತ್ನಗಳನ್ನೂ ಭಯೋತ್ಪಾದಕರು ನಡೆಸಿದ್ದಾರೆ. ಹೀಗೆ ರಮ್ಜಾನ್ ಮಾಸದಲ್ಲಿ ಭಾರತೀಯ ಸೇನೆ ಕದನ ವಿರಾಮ ಘೋಷಿಸಿದರೂ ಉಗ್ರರು ಮಾತ್ರ ತಣ್ಣಗಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+