ಜಗಳ ಬಿಡಿಸಲು ಬಂದು ಜಗಳಕ್ಕೆ ನಿಂತ ಫುಡ್ ಡೆಲಿವರಿ ಬಾಯ್
ಭುವನೇಶ್ವರ ಏಪ್ರಿಲ್ 1: ಸಾಮಾನ್ಯವಾಗಿ ರಸ್ತೆ-ಪಾರ್ಕ್ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಜಗಳ ಗಲಾಟೆ ಕಂಡುಬಂದರೆ ಅದನ್ನು ತಡೆಯಲು ಜನ ಮುಂದಾಗುತ್ತಾರೆ. ವಾಗ್ವಾದ ವಿಕೋಪಕ್ಕೆ ತಿರುಗದಂತೆ ನೋಡಿಕೊಳ್ಳಲು ಮುಂದಾಗುತ್ತಾರೆ. ಆದರೆ ಇಲ್ಲೊಬ್ಬ ಫುಡ್ ಡೆಲಿವರಿ ಬಾಯ್ ಜಗಳ ಬಿಡಿಸಲು ಹೋಗಿ ತಾನೇ ಜಗಳಕ್ಕೆ ನಿಂತ ಘಟನೆ ನಡೆದಿದೆ. ಮಾತ್ರವಲ್ಲದೆ ಯುವತಿಗೆ ಮನಬಂದಂತೆ ಥಳಿಸಿದ್ದಾನೆ.
ಪ್ರೇಮಿಗಳ ನಡುವಿನ ವಿವಾದ ಬಗೆಹರಿಸಲು ಬಂದ ಫುಡ್ ಡೆಲಿವರಿ ಬಾಯ್ ಸ್ವತ: ಜಗಳಕ್ಕೆ ನಿಂತ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಮಾತ್ರವಲ್ಲದೆ ಜಗಳ ಬಿಡಿಸಲು ಮುಂದಾದ ಫುಡ್ ಡೆಲಿವರಿ ಬಾಯ್ ಯುವತಿಗೆ ಥಳಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭುವನೇಶ್ವರದ ಇಂದಿರಾ ಪಾರ್ಕ್‌ಗೆ ಆಗಮಿಸಿದ ದಂಪತಿ ಪರಸ್ಪರ ಜಗಳವಾಡುತ್ತಿದ್ದರು.
ಯುವತಿಯು ಯುವಕನಿಗೆ ಜಗಳ ಮಾಡಿ ಕಿರುಕುಳ ನೀಡುತ್ತಿರುವುದು ವಿಡಿಯೋ ದೃಶ್ಯಾವಳಿಯಲ್ಲಿ ಕಾಣಬಹುದು. ಈ ದೃಶ್ಯಾವಳಿಯಲ್ಲಿ ಯುವತಿ ಯುವಕನ ಮೇಲೆ ಕಲ್ಲು ಎಸೆಯುತ್ತಿರುವ ದೃಶ್ಯವೂ ಇದೆ. ಜೊತೆಗೆ ಆಕೆ ಯುವಕನಿಗೆ ಥಳಿಸುತ್ತಾಳೆ. ಇವರಿಬ್ಬರ ಹೊಡೆದಾಟ ಕಂಡು ಜನ ದೌಡಾಯಿಸುತ್ತಾರೆ. ಜೊತೆಗೆ ಇವರ ಜಗಳವನ್ನು ಜನರು ಫೋನ್‌ನಲ್ಲಿ ರೆಕಾರ್ಡ್ ಮಾಡಲು ಮುಂದಾಗುತ್ತಾರೆ. ಇದನ್ನು ಕಂಡು ಯುವತಿ ಮತ್ತೆ ಆಕ್ರೋಶ ವ್ಯಕ್ತಪಡಿಸುತ್ತಾಳೆ. ಬಾಲಕಿಯು ಜನರಿಂದ ಫೋನ್ ಕಸಿದುಕೊಳ್ಳಲು ಪ್ರಯತ್ನಿಸುತ್ತಾಳೆ.

ಈ ವೇಳೆ ಫುಡ್ ಡೆಲಿವರಿ ಬಾಯ್ ಬರುತ್ತಾನೆ. ಘಟನೆಯಲ್ಲಿ ಮಧ್ಯಸ್ಥಿಕೆ ವಹಿಸಲು ಯತ್ನಿಸುತ್ತಾನೆ. ಬಳಿಕ ಯುವತಿ ಡೆಲಿವರಿ ಬಾಯ್ ಜೊತೆ ಜಗಳವಾಡುತ್ತಾಳೆ. ಡೆಲಿವರಿ ಬಾಯ್ ವಿರುದ್ಧವೂ ಯುವತಿ ಅವಾಚ್ಯ ಶಬ್ದ ಬಳಸಿದ್ದಾಳೆ. ಅಷ್ಟರಲ್ಲಿ ಡೆಲಿವರಿ ಬಾಯ್ ತಾಳ್ಮೆ ಕಳೆದುಕೋಂಡು ಯುವತಿಗೆ ಥಳಿಸಿದ್ದಾನೆ.
Girl direct volley of expletives, beat up Boyfriend in full public glare outside #IG Park in #Bhubaneswar pic.twitter.com/7ZVUrfz7Wd
— Mohammad Suffian (@iamsuffian) March 31, 2022
ಈ ವೇಳೆ ಗುಂಪು ಮಧ್ಯ ಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಲು ಯತ್ನಿಸಿದೆ. ನಂತರ ಇವರಿಬ್ಬರೂ ಪೊಲೀಸರಿಗೆ ದೂರು ನೀಡಿಲ್ಲ. ವಿಡಿಯೋ ವೈರಲ್ ಆದ ಬಳಿಕ ಇಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಭುವನೇಶ್ವರ ಡಿಸಿಪಿ ಉಮಾ ಶಂಕರ್ ತಿಳಿಸಿದ್ದಾರೆ.












Click it and Unblock the Notifications