TTDevasthanams : ತಿರುಪತಿ ದೇವಸ್ಥಾನದಿಂದ ಆಪ್‌ ಬಿಡುಗಡೆ, ಭಕ್ತರಿಗೆ ಇಲ್ಲಿದೆ ಮಾಹಿತಿ

ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನವು ಜೀಯೋ ಪ್ಲಾಟ್‌ಫಾರ್ಮ್‌ ಬೆಂಬಲದೊಂದಿಗೆ ಹೊಸ ಮೊಬೈಲ್ ಅಪ್ಲಿಕೇಶನ್ "ಶ್ರೀ ಟಿಟಿ ದೇವಸ್ತಾನಮ್ಸ್" ಅನ್ನು ಬಿಡುಗಡೆ ಮಾಡಿದೆ.

ಅಮರಾವತಿ, ಜನವರಿ 27: ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನವು ಜೀಯೋ ಪ್ಲಾಟ್‌ಫಾರ್ಮ್‌ ಬೆಂಬಲದೊಂದಿಗೆ ಹೊಸ ಮೊಬೈಲ್ ಅಪ್ಲಿಕೇಶನ್ "ಶ್ರೀ ಟಿಟಿ ದೇವಸ್ತಾನಮ್ಸ್" ಅನ್ನು ಬಿಡುಗಡೆ ಮಾಡಿದೆ.

ಈ ಹೊಸ ಮೊಬೈಲ್ ಅಪ್ಲಿಕೇಶನ್ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ತಡೆರಹಿತ ತೀರ್ಥಯಾತ್ರೆಯ ಅನುಭವವನ್ನು ಒದಗಿಸುತ್ತದೆ. ಜಿಯೋ ಕಂಪೆನಿಯೊಂದಿಗೆ ಹಲವಾರು ಕೋಟಿ ರೂಪಾಯಿಗಳನ್ನು ವ್ಯಯಿಸಿ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ದೇಣಿಗೆ ನೀಡಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ದರ್ಶನ ಟಿಕೆಟ್ ಬುಕಿಂಗ್, ವಸತಿ ಬುಕಿಂಗ್, ಇ-ಹುಂಡಿ ಮುಂತಾದ ವಿವಿಧ ಯಾತ್ರಿ ಸೇವೆಗಳು ವೆಂಕಟೇಶ್ವರನ ಭಕ್ತರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಜಿಯೋ ಪ್ಲಾಟ್‌ಫಾರ್ಮ್‌ಗಳ ಪ್ರತಿನಿಧಿಗಳು ಟಿಟಿಡಿಯ ಮೊಬೈಲ್ ಅಪ್ಲಿಕೇಶನ್‌ನ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಶುಕ್ರವಾರದಂದು ದೇವಸ್ತಾನಮ್ಸ್ ಮ್ಯಾನೇಜ್‌ಮೆಂಟ್‌ಗೆ ಪ್ರಸ್ತುತಪಡಿಸಿದ್ದಾರೆ.

App released by Tirupati tirumala temple, know more

ದೇವಸ್ತಾನದ ಅಧಿಕಾರಿಗಳು ಜಿಯೋ ಪ್ರತಿನಿಧಿಗಳನ್ನು ಅಭಿನಂದಿಸಿದರು. ವಿಶ್ವ ದರ್ಜೆಯ ಮೊಬೈಲ್ ಅಪ್ಲಿಕೇಶನ್ ಅನ್ನು ಹೊರತರಲು ಬೆಂಬಲವನ್ನು ನೀಡಿದ್ದಕ್ಕಾಗಿ ರಿಲಯನ್ಸ್‌ ಗ್ರೂಪ್‌ಗೆ ಧನ್ಯವಾದ ಅರ್ಪಿಸಿದರು. ಕಳೆದ ಸೆಪ್ಟೆಂಬರ್‌ನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ, ವ್ಯವಸ್ಥಾಪಕ ಮುಕೇಶ್‌ ಅಂಬಾನಿ ಅವರು ತಿರುಪತಿ ತಿರುಮಲದಲ್ಲಿರುವ ವೆಂಕಟೇಶ್ವರನ ಪುರಾತನ ಬೆಟ್ಟದ ದೇವಾಲಯಕ್ಕೆ 1.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು.

ಸೆಪ್ಟೆಂಬರ್‌ನಲ್ಲಿ ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುಕೇಶ್ ಅಂಬಾನಿ, ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ ವೆಂಕಟ ಧರ್ಮ ರೆಡ್ಡಿ ಅವರಿಗೆ 1.5 ಕೋಟಿ ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಿದ್ದರು. ಈ ವೇಳೆ ದೇವಾಲಯದಲ್ಲಿ ಆನೆಗಳಿಗೆ ಆಹಾರವನ್ನು ನೀಡಿದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಜನವರಿ 19 ರಂದು ಆಂಟಿಲಿಯಾದಲ್ಲಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಅವರ ನಿಶ್ಚಿತಾರ್ಥದ ಬಳಿಕ ಗುರುವಾರ ತಿರುಮಲ ಬೆಟ್ಟಗಳ ಮೇಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

App released by Tirupati tirumala temple, know more

ಗುರುವಾರ ಮುಂಜಾನೆ ಈ ಜೋಡಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅನಂತ್ ಬಿಳಿ ಸಾಂಪ್ರದಾಯಿಕ ಉಡುಪನ್ನು ಧರಿಸಿದ್ದು, ರಾಧಿಕಾ ಹಸಿರು ಸಲ್ವಾರ್ ಚೂಡಿಧಾರ್‌ ಹಾಕಿಕೊಂಡು ಕಾಣಿಸಿಕೊಂಡಿದ್ದರು. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ, ನಿಶ್ಚಿತಾರ್ಥ ರಾಧಿಕಾ ಮರ್ಚೆಂಟ್ ಜೊತೆಗೆ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+