ಭಾರತ ರತ್ನ ಅಬ್ದುಲ್ ಕಲಾಂ ಸ್ಫೂರ್ತಿದಾಯಕ ನುಡಿಮುತ್ತುಗಳು
ನವದೆಹಲಿ, ಅಕ್ಟೋಬರ್. 15: ಭಾರತದ ಕ್ಷಿಪಣಿ ಪಿತಾಮಹ, ವಿಜ್ಞಾನಿ ಅಬ್ದುಲ್ ಕಲಾಂ ಅವರ ಜೀವನ ಸಾಧನೆಗಳ ಬಗ್ಗೆ ಹೇಳುವುದು ಏನೂ ಉಳಿದಿಲ್ಲ. ಭಾಷಣ ಮಾಡುತ್ತಲೇ ವಿಧಿವಶರಾದ ಕಲಾಂ ಅವರ ಜನ್ಮದಿನ ಅಕ್ಟೋಬರ್ 15.ತನ್ನಿಮಿತ್ತ ಅವರ ಕೆಲವು ನುಡಿಮುತ್ತುಗಳನ್ನು ಓದಿ ಸ್ಫೂರ್ತಿ ಪಡೆದುಕೊಳ್ಳೋಣ.
ಪೀಪಲ್ಸ್ ಪ್ರೆಸಿಟೆಂಟ್ ಎಂದು ಜನರಿಂದಲೇ ಕರೆಸಿಕೊಂಡ ಕಲಾಂ ವ್ಯಕ್ತಿತ್ವಕ್ಕೆ ಮಾರು ಹೋಗದವರೇ ಇಲ್ಲ. ಕಲಾಂ ಅವರ ಪ್ರತಿಯೊಂದು ಮಾತುಗಳು ಯುವಪೀಳಿಗೆಗೆ ಹೊಸ ದಿಕ್ಕನ್ನು ತೋರಿಸುತ್ತದೆ.

ಕಲಾಂ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಕೋಟ್ ಗಳನ್ನು ಮೆಲುಕು ಹಾಕದಿದ್ದರೆ ಹೇಗೆ?[ಬಾಣಸಿಗ ಕಂಡ ಭಾರತ ರತ್ನ ಕಲಾಂ]
* ಒಂದು ದೇಶ ಭ್ರಷ್ಟಾಚಾರ ಮುಕ್ತವಾದರೆ ಆ ದೇಶದಲ್ಲಿ ಸುಂದರ ಚಿಂತನೆಗಳನ್ನು ಕಾಣಬಹುದು. ಸಮಾಜವನ್ನು ಮೂವರು ಮಾತ್ರ ನಿರ್ಮಾಣ ಮಾಡಬಲ್ಲರು, ಅವರೆಂದರೆ ತಂದೆ,ತಾಯಿ ಮತ್ತು ಗುರು.
* ನಿಮ್ಮ ಗುರಿಯೆಡೆಗೆ ಸಾಗಬೇಕು ಎಂದಾದರೆ ಒಂದೆ ದೃಷ್ಟಿಯ ಯೋಚನೆ ಧ್ಯೆಯ ಬೆನ್ನ ಹಿಂದೆ ಇರಲಿ
* ಮಹಾನ್ ವ್ಯಕ್ತಿಗಳ ಮಹಾನ್ ಕನಸುಗಳು ಒಂದಕ್ಕಿಂತ ಒಂದನ್ನು ಮೀರಿಸುತ್ತಲೇ ಸಾಗುತ್ತವೆ.
* ಯಾರೂ ಪರಿಶ್ರಮ ಜೀವಿಯೋ ಆತನಿಗೆ ದೇವರು ಸದಾ ಸಹಾಯ ಮಾಡುತ್ತಾನೆ.[ಕಲಾಂ ಆಡಿದ ಕೊನೆ ಘಳಿಗೆಯ ಮಾತುಗಳೇನು?]
* ಕಷ್ಟಗಳು ಬಂದಾಗ ಮಾತ್ರ ಸುಖ ಏನು ಎಂಬುದರ ಅರಿವಾಗಲು ಸಾಧ್ಯ
* ಇವತ್ತಿನ ನಮ್ಮ ಇಂದಿನ ದಿನವನ್ನು ತ್ಯಾಗ ಮಾಡಿದರೆ ನಮ್ಮ ಮಕ್ಕಳ ನಾಳೆಗೆ ಸುಂದರ ಬದುಕು ಕಟ್ಟಿಕೊಡಲು ಸಾಧ್ಯ.












Click it and Unblock the Notifications