ಗೋವಾ: ಮತ್ತೊಂದು ಹೈಪ್ರೊಫೈಲ್ ಲೈಂಗಿಕ ಹಗರಣ

Sexual Harassment in Goa- Jawaharlal Nehru University student lodged complaint
ಪಣಜಿ, ನ.23- ತೆಹಲ್ಕಾ ಪತ್ರಿಕೆಯ ಸಂಪಾದಕ ತರುಣ್ ತೇಜಪಾಲ್ ತಮ್ಮ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ ರಾದ್ಧಾಂತ ಮಾಡಿಕೊಂಡಿರುವ ಬೆನ್ನಿಗೇ ಸರಿಸುಮಾರು ಅದೇ ಸಮಯದಲ್ಲಿ ಗೋವಾದಲ್ಲಿ ಮತ್ತೊಂದು ಹೈಪ್ರೊಫೈಲ್ ಲೈಂಗಿಕ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ, ಗೋವಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಿತ್ರೋತ್ಸವದಲ್ಲಿ (IFFI) ಹಿರಿಯ ಅಧಿಕಾರಿಯೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನವದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ದೂರು ನೀಡಿದ್ದಾರೆ.

ನನ್ನ ಜತೆ ಅಶ್ಲೀಲವಾಗಿ ಅಸಭ್ಯವಾಗಿ ನಡೆದುಕೊಂಡ ಸದರಿ ಹಿರಿಯ ಅಧಿಕಾರಿ ಸೆಕ್ಸ್ ಬಯಕೆಯನ್ನು ವ್ಯಕ್ತಪಡಿಸಿದರು ಎಂದು 25 ವರ್ಷದ ಬಾಧಿತ ಯುವತಿ IFFI ನಿರ್ದೇಶಕ ಶಂಕರ್ ಮೋಹನ್ ಅವರಿಗೆ Sexual Harassment of Women at Workplace (Prevention, Prohibition and Redressal) Act, 2013 ಅನುಸಾರ ದೂರು ನೀಡಿದ್ದಾರೆ.

ನವೆಂಬರ್ 16ರ ರಾತ್ರಿ ಈ ಘಟನೆ ನಡೆದಿದೆ. ಆ ಹಿರಿಯ ಅಧಿಕಾರಿ ಸೆಕ್ಸ್ ಬಯಕೆ ವ್ಯಕ್ತಪಡಿಸುತ್ತಾ ನನ್ನನ್ನು ಪುಸಲಾಯಿಸಿದರು ಎಂದು Jawaharlal Nehru University ವಿದ್ಯಾರ್ಥಿನಿ ಅಲವತ್ತುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+