ಅಪ್ರಾಪ್ತೆಯ ಅತ್ಯಾಚಾರ ಮಾಡಿ, ರೈಲಿನಿಂದ ಎಸೆದ ಪಾಪಿಗಳು

Posted By:
Subscribe to Oneindia Kannada

ಪಾಟ್ನಾ(ಬಿಹಾರ), ಜೂನ್ 19: 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಜೀವಚ್ಛವದಂತಾಗಿದ್ದ ಆಕೆಯನ್ನು ರೈಲ್ವೇ ಹಳಿಯ ಮೇಲೆ ಬಿಸಾಡಿದ ಹೃದಯವಿದ್ರಾವಕ ಘಟನೆ ಬಿಹಾರ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ 34 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಈ ಘಟನೆ ನಿರ್ಭಯಾ ಪ್ರಕರಣವನ್ನೇ ಹೋಲುವಂತಿದ್ದು, ಆಕೆಯ ಮೇಲೆ ಆರರಿಂದ ಏಳು ಜನ ಅತ್ಯಾಚಾರ ನಡೆಸಿದ್ದಾರೆ. ಆಕೆಯ ದೇಹದ ಮೇಲೆಲ್ಲ ಸಾಕಷ್ಟು ಗಾಯಗಳಾಗಿದ್ದು, ಸದ್ಯಕ್ಕೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಆಕೆಯನ್ನು ಮೊದಲು ಆಸ್ಪತ್ರೆಗೆ ಕರೆದೊಯ್ದಾಗ, ಆಸ್ಪತ್ರೆಗೆ ಸೇರಿಸಿಕೊಳ್ಳುವುದಕ್ಕೆ ಸಿಬ್ಬಂದಿಗಳೇ ಲಂಚ ಕೇಳಿದ ಘಟನೆಯೂ ನಡೆದಿದೆ.

ಕನಕಪುರ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆಟೋ ಚಾಲಕನ ಬಂಧನ

ಒಟ್ಟಿನಲ್ಲಿ ಅಪ್ರಾಪ್ತೆಯೊಬ್ಬಳನ್ನು ಕೊಂಚವೂ ಮಾನವೀಯತೆಯಿಂದ ಕಾಣದೆ ಮೃಗಗಳಂತೆ ವರ್ತಿಸಿದ ಆ ಆರೇಳು ಜನರ ವರ್ತನೆ, ನಂತರ ಆಸ್ಪತ್ರೆಯ ಸಿಬ್ಬಂದಿ ವರ್ತಿಸಿದ ರೀತಿ ಎಲ್ಲವೂ ನಾಗರಿಕ ಸಮಾಜ ತಲೆತಗ್ಗಿಸುವಂಥ ಘಟನೆಯೇ ಆಗಿದೆ.

ಘಟನೆಯ ವಿವರ

ಘಟನೆಯ ವಿವರ

ಈ ಘಟನೆ ನಡೆದಿದ್ದು ಶನಿವಾರ ಅಂದರೆ ಜೂನ್ 17 ರಂದು. ಮನೆಯಿಂದ ಆಗಷ್ಟೆ ಆಚೆಬಂದಿದ್ದ ಆಕೆಯನ್ನು ಹಿಂದಿನಿಂದ ಬಂದ ಕೆಲವು ದುಷ್ಕರ್ಮಿಗಳು ಕಣ್ಣು ಬಾಯಿ ಕಟ್ಟಿ ಎಳೆದೊಯ್ದಿದ್ದಾರೆ. ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದು ಆಕೆಯ ಮೇಲೆ ಒಬ್ಬರಾದೊಡನೆ ಒಬ್ಬರು ಅತ್ಯಾಚಾರ ನಡೆಸಿದ್ದಾರೆ.

ನೆರಮನೆಯವರೇ ಅಪರಾಧಿಗಳು

ನೆರಮನೆಯವರೇ ಅಪರಾಧಿಗಳು

ಅತ್ಯಾಚಾರ ನಡೆಸಿದ ಆರೇಳು ಜನರಲ್ಲಿ ಇಬ್ಬರು ಸಂತ್ರಸ್ತೆಯ ನೆರೆ ಮನೆಯವರು ಮತ್ತು ಒಬ್ಬ ಆಕೆಯ ಶಾಲೆಯಲ್ಲೇ ಓದುತ್ತಿರುವ, ಆಕೆಗಿಂತ ಚಿಕ್ಕ ಹುಡುಗ! ಅತ್ಯಾಚಾರ ನಡೆಸಿದ ನಂತರ ಅರೆಪ್ರಜ್ಞಾವಸ್ಥೆಯಲ್ಲಿದ್ದ ಆಕೆಯನ್ನು ರೈಲೊಂದರಲ್ಲಿ ಕರೆದೊಯ್ದು, ಆಕೆಗೆ ಪ್ರಜ್ಞೆ ಬರುತ್ತಿದ್ದಂತೆಯೇ ಆಕೆಯನ್ನು ರೈಲಿನಿಂದ ಬಿಸಾಡಲಾಗಿದೆ. ನಂತರ ಆಕೆ ಮತ್ತೆ ಪ್ರಜ್ಞೆ ಕಳೆದುಕೊಂಡಿದ್ದಾಳೆ.

ಜೀವಚ್ಛವವಾಗಿದ್ದ ಬಾಲಕಿ

ಜೀವಚ್ಛವವಾಗಿದ್ದ ಬಾಲಕಿ

ಬಾಲಕಿಯ ಮನೆಯವರು ಶನಿವಾರ (ಜೂನ್ 17) ಅಪರಾಹ್ನ 3 ಗಂಟೆಯ ಹೊತ್ತಿಗೆ ಬಾಲಕಿ ನಾಪತ್ತೆಯಾಗಿದ್ದಾಳೆಂದು ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ 12 ಗಂಟೆಯ ನಂತರ ಜೀವಚ್ಛವದಂತಾಗಿದ್ದ ಆಕೆ ರೈಲ್ವೇ ಹಳಿಯ ಮೇಲೆ ಬಿದ್ದಿರುವ ಮಾಹಿತಿ ಸಿಕ್ಕಿದೆ. ಸದ್ಯಕ್ಕೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಈಗಾಗಲೇ ಅತ್ಯಾಚಾರಿಗಳ ಬಗ್ಗೆ ಪೊಲೀರಿಗೆ ಅಗತ್ಯ ಮಾಹಿತಿಗಳನ್ನೆಲ್ಲ್ ಆಕೆ ನೀಡಿದ್ದಾಳೆ.

ಆಸ್ಪತ್ರೆಯಲ್ಲಿ ಇನ್ನೊಂದು ಥರದ ಹಿಂಸೆ!

ಆಸ್ಪತ್ರೆಯಲ್ಲಿ ಇನ್ನೊಂದು ಥರದ ಹಿಂಸೆ!

ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿಯನ್ನು ಪಾಟ್ನಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಿಸಲೆಂದು ಕರೆದೊಯ್ದಾಗ, ಆಕೆಯನ್ನು ಅಡ್ಮಿಟ್ ಮಾಡಿಕೊಳ್ಳೋದಕ್ಕೆ ಆಸ್ಪತ್ರೆ ಸಿಬ್ಬಂದಿಗಳು ಲಂಚ ಕೇಳಿದ ಘಟನೆಯೂ ನಡೆದಿದೆ. ಆಕೆಯನ್ನು ತುರ್ತು ನಿಗಾ ಘಟಕದ ನೆಲದ ಮೇಲೆಯೇ ಹಲವು ಘಂಟೆಗಳ ಕಾಲ ಮಲಗಿಸಲಾಗಿತ್ತು ಎಂಬ ಆಘಾತಕಾರಿ ವರದಿಯೂ ಲಭಿಸಿದೆ. ಈ ಕಾರಣದಿಂದ ಆಸ್ಪತ್ರೆಯ ವಿರುದ್ಧವೂ ಕ್ರಮಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತವಾಗಿದೆ.

ನಿತೀಶ್ ಕುಮಾರ್ ಪ್ರತಿಕ್ರಿಯೆ

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಇದು ಅತ್ಯಂತ ನೀಚ ಕೃತ್ಯ. ಇಂಥ ಕೃತ್ಯ ಎಸಗಿದವರನ್ನು ಶೀಘ್ರವೇ ಬಂಧಿಸಿ, ಅಪರಾಧಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
There happened an incident same like Nirbhaya case in Bihar. 6-7 men raped a minor girl in patna, Bihar on June 17th, saturday. The girl has beaten cruelly by those inhuman men and now she has admitted to a local hospital. Her condition is still critical, hospital sources told.
Please Wait while comments are loading...