ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚಿರತೆ ಮೃತ, ಐದು ತಿಂಗಳಲ್ಲಿ 7 ನೇ ಸಾವು
ಭೋಪಾಲ್, ಜುಲೈ. 11: ದಕ್ಷಿಣ ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಇರಿಸಲಾಗಿದ್ದ ಮತ್ತೊಂದು ಚಿರತೆ ತೇಜಸ್ ಮಂಗಳವಾರ ಸಾವನ್ನಪ್ಪಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ತೇಜಸ್‌ಗಿಂತ ಮೊದಲು, ಮೂರು ಚಿರತೆಗಳು ಮತ್ತು ಮೂರು ಮರಿಗಳು ಈಗಾಗಲೇ ಉದ್ಯಾನದಲ್ಲಿ ಪ್ರಾಣ ಕಳೆದುಕೊಂಡಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಗಂಡು ಚಿರತೆಯ ಕುತ್ತಿಗೆಯ ಮೇಲ್ಭಾಗದಲ್ಲಿ ಗಾಯದ ಗುರುತುಗಳನ್ನು ನಿಗಾ ತಂಡ ಪತ್ತೆ ಮಾಡಿದೆ. ಆದರೆ, ಚಿರತೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಾವನ್ನಪ್ಪಿದೆ.

"ಇತ್ತೀಚಿನ ಘಟನೆಯಲ್ಲಿ, 11/07/2023 ರಂದು ಬೆಳಗ್ಗೆ ಸುಮಾರು 11:00 ಗಂಟೆಗೆ, ಮೇಲ್ವಿಚಾರಣಾ ತಂಡವು ತೇಜಸ್ (ಬೊಮಾ ಸಂಖ್ಯೆ 6) ಎಂಬ ಗಂಡು ಚಿರತೆಯ ಕುತ್ತಿಗೆಯ ಮೇಲ್ಭಾಗದಲ್ಲಿ ಗಾಯದ ಗುರುತುಗಳನ್ನು ಪತ್ತೆಹಚ್ಚಿದೆ. ತಕ್ಷಣವೇ ಪಾಲ್ಪುರ್ ಪ್ರಧಾನ ಕಚೇರಿಯಲ್ಲಿದ್ದ ವನ್ಯಜೀವಿ ಪಶುವೈದ್ಯರಿಗೆ ಮಾಹಿತಿ ನೀಡಿದ್ದಾರೆ. ವನ್ಯಜೀವಿ ಪಶುವೈದ್ಯರು ಸ್ಥಳಕ್ಕೆ ತೆರಳಿ ತೇಜಸ್ ಚಿರತೆಯನ್ನು ಪರೀಕ್ಷಿಸಿದರು, ಪ್ರಾಥಮಿಕ ವೀಕ್ಷಣೆಯ ನಂತರ ಗಾಯಗಳು ತೀವ್ರವಾಗಿರುವುದನ್ನು ಕಂಡುಬಂದಿತ್ತು" ಎಂದು ಅಧಿಕಾರಿಯೊಬ್ಬರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
"ಚಿಕಿತ್ಸೆ ನೀಡಲು ಅನುಮತಿ ಪಡೆದು ತೇಜಸ್‌ಗೆ ಪ್ರಥಮ ಚಿಕಿತ್ಸೆ ನೀಡಲು ಮತ್ತು ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆಗಳೊಂದಿಗೆ ಪಶುವೈದ್ಯರ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ದುರದೃಷ್ಟವಶಾತ್, ಸರಿಸುಮಾರು ಮಧ್ಯಾಹ್ನ 2:00 ಗಂಟೆಗೆ, ತೇಜಸ್ ಗಂಡು ಚಿರತೆ ಸ್ಥಳದಲ್ಲಿ ಸತ್ತು ಬಿದ್ದಿದೆ. ತೇಜಸ್‌ಗೆ ಆದ ಗಾಯಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯು ಸಾವಿನ ಕಾರಣವನ್ನು ತಿಳಿಸಲಿದೆ" ಎಂದು ಹೇಳಿದೆ.

ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇನ್ನೂ ಎರಡು ಚಿರತೆಗಳನ್ನು ಕಾಡಿಗೆ ಬಿಡುಗಡೆ ಮಾಡಿದ ಗಂಟೆಗಳ ನಂತರ ಈ ಘಟನೆ ವರದಿಯಾಗಿದೆ. ಎರಡು ಚಿರತೆಗಳ ಸೇರ್ಪಡೆ ಮತ್ತು ಈಗ ತೇಜಸ್ ಸಾವಿನೊಂದಿಗೆ, ಕಾಡಿನಲ್ಲಿ ಈ ಪ್ರಾಣಿಗಳ ಒಟ್ಟು ಸಂಖ್ಯೆ 11 ಕ್ಕೆ ತಲುಪಿದೆ. ಸೋಮವಾರ, ಕೆಎನ್‌ಪಿಯಲ್ಲಿ ಪ್ರಭಾಷ್ ಮತ್ತು ಪಾವಕ್ ಎಂಬ ಎರಡು ಗಂಡು ಚಿರತೆಗಳನ್ನು ಕಾಡಿಗೆ ಬಿಡಲಾಯಿತು ಎಂದು ಶಿಯೋಪುರದ ವಿಭಾಗೀಯ ಅರಣ್ಯಾಧಿಕಾರಿ ಪಿ ಕೆ ವರ್ಮಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಇವುಗಳನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದೆ.
ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ಒಳಗೊಂಡ ಎಂಟು ನಮೀಬಿಯಾ ಚಿರತೆಗಳನ್ನು ಕೆಎನ್‌ಪಿಗೆ ಕರೆತಂದು, ಕಳೆದ ವರ್ಷ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಆವರಣಗಳಲ್ಲಿ ಬಿಡುಗಡೆ ಮಾಡಿದ್ದರು. ಭಾರತದಲ್ಲಿ ಜಾತಿಗಳನ್ನು ಮರುಪರಿಚಯಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಭಾಗವಾಗಿ ಇವುಗಳನ್ನು ತರಲಾಗಿತ್ತು. ಈ ವರ್ಷ ಫೆಬ್ರವರಿ 18 ರಂದು ದಕ್ಷಿಣ ಆಫ್ರಿಕಾದಿಂದ ಕೆಎನ್‌ಪಿಗೆ ಹನ್ನೆರಡು ಇನ್ನೂ ಏಳು ಗಂಡು ಮತ್ತು ಐದು ಹೆಣ್ಣು ಚಿರತೆಗಳನ್ನು ತರಲಾಗಿತ್ತು.












Click it and Unblock the Notifications