ಆಂಧ್ರಪ್ರದೇಶ ರೈಲು ಅಪಘಾತ: 13 ಸಾವು, 50 ಗಾಯಾಳು, ರಕ್ಷಣಾ ಕಾರ್ಯದ 10 ಅಂಶಗಳು, ಮಾಹಿತಿ
Andhra Pradesh Train Accident: ಹೈದರಾಬಾದ್, ಅಕ್ಟೋಬರ್ 30: ಆಂಧ್ರಪ್ರದೇಶದ ಹೌರಾ-ಚೆನ್ನೈ ಮಾರ್ಗದಲ್ಲಿ ಭಾನುವಾರ ಪ್ಯಾಸೆಂಜರ್ ರೈಲುಗಳು ಡಿಕ್ಕಿ ಸಂಭವಿಸಿದೆ. ಘಟನೆಯಿಂದಾಗಿ ಒಟ್ಟು ಸುಮಾರು 50 ಮಂದಿ ಗಾಯಗೊಂಡಿದ್ದರೆ, ಮೃತರ ಸಂಖ್ಯೆ 13ಕ್ಕೆ ತಲುಪಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ.
ಎರಡು ಪ್ಯಾಸೆಂಜರ್ ರೈಲುಗಳು ಹಳಿಗಳ ಮೇಲೆಯೆ ಉರುಳಿವೆ. ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಈ ಮಾರ್ಗದಲ್ಲಿನ ಕೆಲವು ರೈಲುಗಳ ಸಂಚಾರ ರದ್ದಾಗಿದೆ. ಈ ಅವಘಡ ಕುರಿತ ಪ್ರಮುಖ ಹತ್ತು ಅಂಶಗಳು ಇಲ್ಲಿವೆ.

ರೈಲು ದುರಂತ 10 ಅಂಶಗಳು
1. ವಿಶಾಖಪಟ್ಟಣ-ಪಲಾಸ ನಡುವಿನ ವಿಶೇಷ ಪ್ಯಾಸೆಂಜರ್ ರೈಲು ಸಿಗ್ನಲ್ ಇಲ್ಲದ ಕಾರಣ ಅಳಮಂಡ ಮತ್ತು ಕಂಟಕಪಲ್ಲಿ ನಡುವಿನ ಮುಖ್ಯ ಮಾರ್ಗದಲ್ಲಿ ನಿಂತಿತ್ತು. ಈ ವೇಳೆ ಅದೇ ರೈಲಿನ ಹಿಂಭಾಗಕ್ಕೆ ವೈಜಾಗ್-ರಾಯಗಡ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ.
2. ವಿಶಾಖಪಟ್ಟಣಂ-ಪಲಾಸ ರೈಲಿನ ಕೊನೆಯ ಎರಡು ಕೋಚ್‌ಗಳು ಹಾಗೂ ವಿಶಾಖಪಟ್ಟಣಂ-ರಾಯಗಡ ಪ್ಯಾಸೆಂಜರ್ ರೈಲಿನ ಇಂಜಿನ್ ಹಳಿ ತಪ್ಪಿವೆ ಎಂದು ಪೂರ್ವ ಕರಾವಳಿ ರೈಲ್ವೆಯ ಸಿಪಿಆರ್‌ಒ ಬಿಸ್ವಜಿತ್ ಸಾಹು ಮಾಹಿತಿ ನೀಡಿದ್ದಾರೆ.
3. ಭಾನುವಾರ ರಾತ್ರಿ ನಡೆದ ಘಟನೆಯಲ್ಲಿ ಈವರೆಗೆ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರ ಬೆಳಗ್ಗೆ ರಕ್ಷಣಾ ಪ್ರಯತ್ನಗಳನ್ನು ಪೂರ್ಣಗೊಳ್ಳುವ ಭರವಸೆ ಇದೆ. ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ.ದೀಪಿಕಾ ತಿಳಿಸಿದ್ದಾರೆ.

4. ರೈಲು ದುರಂತದಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹದಿನೆಂಟು ರೈಲುಗಳನ್ನು ರದ್ದು ಮಾಡಲಾಗಿದೆ. 22 ರೈಲುಗಳ ಮಾರ್ಗ ಬದಲಾಯಿಸಲಾಗಿದೆ ಎಂದು ಬಿಸ್ವಜಿತ್ ಸಾಹು ತಿಳಿಸಿದರು. ವೈಜಾಗ್-ರಾಯಗಡ ಲೋಕೋ ಪೈಲಟ್‌ನ ತಪ್ಪಿನಿಂದಾಗಿ ಈ ಅಪಘಾತ ಸಂಭವಿಸಿದೆ. ಸಿಗ್ನಲಿಂಗ್ ಲೊಕೊ ಪೈಲಟ್ ಗಮನಕ್ಕೆ ಬಂದಿಲ್ಲ ಎಂದು ರೈಲ್ವೆ ಮೂಲಗಳು ತಿಳಿಸಿವೆ.
5. ಘಟನೆಯಲ್ಲಿ ರೈಲ್ವೆ ಕೋಚ್‌ಗಳು ಹಳಿ ತಪ್ಪಿವೆ. ಮಾರ್ಗದ ಸುತ್ತಲೂ ನೆರೆದಿರುವುದನ್ನು ತೋರಿಸಿದೆ. ಹಳಿತಪ್ಪಿರುವ ಮತ್ತು ಹಾನಿಗೆ ಈಡಾದ ಕೋಚ್ ಗಳನ್ನು ಹೊರತುಪಡಿಸಿ, ಎಲ್ಲವನ್ನು ಮಧ್ಯರಾತ್ರಿಯೇ ತೆರವುಗೊಳಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸಿದ್ದಾರೆ.
6. ಮೃತರ ಕುಟುಂಬಕ್ಕೆ ₹10 ಲಕ್ಷ ಆರ್ಥಿಕ ನೆರವು ನೀಡುವುದಾಗಿ ರೈಲ್ವೆ ಸಚಿವರು ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರಿಗೆ ₹2.5 ಲಕ್ಷ ಮತ್ತು ಸಣ್ಣಪುಟ್ಟ ಗಾಯಗಳಾಗಿರುವ ಪ್ರಯಾಣಿಕರಿಗೆ ₹50 ಸಾವಿರ ನೀಡಲಾಗುವುದು ಎಂದರು.
7. ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50 ಸಾವಿರ ನೆರವು ನೀಡುವುದಾಗಿ ಘೋಷಿಸಿದ್ದಾರೆ.
8. ರೈಲ್ವೆ ಸಚಿವ ವೈಷ್ಣವ್ ಅವರು ಮುಖ್ಯಮಂತ್ರಿ YSR ಜಗನ್ ಮೋಹನ್ ರೆಡ್ಡಿ ಅವರೊಂದಿಗೂ ಮಾತನಾಡಿದ್ದಾರೆ. ಅಪಘಾತದ ಬಗ್ಗೆ ಸಿಎಂ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಆದೇಶಿಸಿದ್ದಾರೆ. ಘಟನೆ ಬಗ್ಗೆ ಅಪ್ಡೇಟ್ ನೀಡುವಂತೆ ಕೇಳಿದ್ದಾರೆ.
9. ಭಾರತೀಯ ರೈಲ್ವೆಯು ನವದೆಹಲಿಯ ವಾರ್ ರೂಮ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಪೂರ್ವ ಕರಾವಳಿ ರೈಲ್ವೆಯು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. (ಭುವನೇಶ್ವರ - 0674-2301625, 2301525, 2303069, ಮತ್ತು ವಾಲ್ಟೇರ್ 0891-2885914) ಈ ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಲಾಗಿದೆ.
10. ಒಡಿಶಾದಲ್ಲಿ ಐದು ತಿಂಗಳ ಹಿಂದೆ ಬಹುದೊಡ್ಡ ರೈಲು ದುರಂತ ನಡೆದಿತ್ತು. ಒಟ್ಟು ಮೂರು ರೈಲುಗಳ ಅನೇಕ ಪ್ರಮಾಣಿಕರು ಪ್ರಾಣ ಬಿಟ್ಟಿದ್ದಾರೆ. ಅಪಘಾತದಲ್ಲಿ 280 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು. ಜೂನ್ 2 ರಂದುಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಅಪಘಾತಕ್ಕೀಡಾಗಿತ್ತು. ಈ ದುರಂತ ಇತ್ತೀಚಿನ ವರ್ಷಗಳಲ್ಲಿ ನಡೆದ ಬಹುದೊಡ್ಡ ದುರಂತ ಎನ್ನಲಾಗಿದೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ












Click it and Unblock the Notifications