Andhra Pradesh elections 2024: ಆಂಧ್ರಪ್ರದೇಶದ ಚುನಾವಣಾ ಮೈತ್ರಿ ಲೆಕ್ಕಾಚಾರ ಬಯಲು
ಅಮರಾವತಿ, ಫೆಬ್ರವರಿ.18: ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ, ಆಂಧ್ರಪ್ರದೇಶದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ, ಟಿಡಿಪಿ ಹಾಗೂ ಜನಸೇನಾ ಮೈತ್ರಿ ಬಹುತೇಕ ಖಚಿತವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಮಂಡಳಿಯ ಎರಡು ದಿನಗಳ ಸಭೆ ಇದರ ಮೇಲೆ ಬೆಳಕು ಚೆಲ್ಲಿದೆ.
ಇತ್ತೀಚಿನ ವರದಿಯಂತೆ ಆಂಧ್ರಪ್ರದೇಶದಲ್ಲಿ ಬಿಜೆಪಿ, ಟಿಡಿಪಿ ಹಾಗೂ ಜನಸೇನಾ ಮೈತ್ರಿ ಬಹುತೇಕ ಖಚಿತವಾಗಿದೆ ಎಂದು ವರದಿಯಾಗಿದೆ. ತೆಲುಗು ದೇಶಂ ಪಕ್ಷವು 30 ವಿಧಾನಸಭಾ ಹಾಗೂ 10 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಮತ್ತು ಪವನ್ ಕಲ್ಯಾಣ್ ಅವರ ಜನಸೇನಾಗೆ ಬಿಟ್ಟುಕೊಡಬಹುದು ಎಂಬ ವರದಿಗಳು ಬರುತ್ತಿವೆ.

ತೆಲುಗು ದೇಶಂ ಪಕ್ಷ ಬಿಟ್ಟುಕೊಡುವ 30 ವಿಧಾನಸಭಾ ಸ್ಥಾನಗಳಲ್ಲಿ 7 ರಿಂದ 10 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಬಹುದು, ಉಳಿದ ಸ್ಥಾನಗಳನ್ನು ನಟ ಪವನ್ ಕಲ್ಯಾಣ್ ಅವರ ಜನಸೇನಾಗೆ ಬಿಟ್ಟುಕೊಡಬಹುದು ಎಂದು ಅಂದಾಜಿಸಲಾಗಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ 10 ಸ್ಥಾನಗಳಲ್ಲಿ ಬಿಜೆಪಿ ಏಳು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮೂರು ಸ್ಥಾನಗಳನ್ನು ಜನಸೇನಾಗೆ ಬಿಟ್ಟುಕೊಡಲಿದೆ.
ಇನ್ನು, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ವಿಷಯಕ್ಕೆ ಸಂಬಂಧಿಸಿ 2018 ರಲ್ಲಿ ಎನ್‌ಡಿಎ ತೊರೆದಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತೆ ಎನ್‌ಡಿಎಗೆ ಮರಳುವುದು ಖಚಿತ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನೆರಡು ಮೂರು ದಿನಗಳಲ್ಲಿ ಘೋಷಣೆ ಕೂಡ ಬರಬಹುದು. ಈ ಹಿನ್ನೆಲೆಯಲ್ಲಿಯೇ ಚುನಾವಣಾ ಮೈತ್ರಿ ಮತ್ತು ಕ್ಷೇತ್ರಗಳ ಹಂಚಿಕೆ ನಡೆಯುತ್ತಿದೆ.
"ರಾಷ್ಟ್ರೀಯ ಮಂಡಳಿಯು ಮೈತ್ರಿ ಬಗ್ಗೆ ವಿವರವಾಗಿ ಚರ್ಚಿಸುವುದಿಲ್ಲ. ಬಿಜೆಪಿ ಸಂಸದೀಯ ಮಂಡಳಿಯು ಇಂತಹ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ, ರಾಷ್ಟ್ರೀಯ ಕೌನ್ಸಿಲ್ ಸಭೆಯ ನಾಯಕತ್ವವು ಮೈತ್ರಿಯ ಸುಳಿವುಗಳನ್ನು ಬಿಡಬಹುದು. ಸಭೆಯಲ್ಲಿ ಪ್ರಾಥಮಿಕವಾಗಿ ಎನ್‌ಡಿಎ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನಸಾಮಾನ್ಯರಿಗೆ ಕೊಂಡೊಯ್ಯುವ ವಿಧಾನಗಳನ್ನು ಚರ್ಚಿಸಲಾಗುತ್ತದೆ" ಎಂದು ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ರಾಜ್ಯ ಬಿಜೆಪಿ ನಾಯಕರು, ವಿಶೇಷವಾಗಿ ತಮ್ಮ ಮಿತ್ರ ಪಕ್ಷವಾದ ಜನಸೇನಾ ಪಕ್ಷ (ಜೆಎಸ್‌ಪಿ) ತೆಲುಗು ದೇಶಂ ಪಕ್ಷದೊಂದಿಗೆ (ಟಿಡಿಪಿ) ಜೊತೆಗೆ ಸಾಗಲು ನಿರ್ಧರಿಸಿದ್ದಾರೆ. ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು (ವೈಎಸ್ಆರ್ಸಿಪಿ) ಸೋಲಿಸಲು ಪಣ ತೊಟ್ಟಿದ್ದಾರೆ. ಆದರೂ ಕೂಡ ಈ ಮೈತ್ರಿಯಲ್ಲಿ ಅಪಸ್ವರ ಎದ್ದು ಕಾಣುತ್ತಿದೆ.
ಟಿಡಿಪಿಯನ್ನು ಅಧಿಕಾರಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಬಿಜೆಪಿ ರಾಜ್ಯ ಘಟಕದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಟಿಡಿಪಿಯೊಂದಿಗಿನ ಮೈತ್ರಿ ಸಹಾಯ ಮಾಡುವುದಿಲ್ಲ ಎಂದು ಹಲವರು ಅಭಿಪ್ರಾಯಪಡುತ್ತಾರೆ. ಏಕೆಂದರೆ ಇದರಿಂದ ರಾಜ್ಯದಲ್ಲಿ ಪಕ್ಷದ ತನ್ನದೇ ಆದ ಬೆಳವಣಿಗೆಯ ಭವಿಷ್ಯವನ್ನು ಅಡ್ಡಿಪಡಿಸುತ್ತದೆ.
ಇದಲ್ಲದೇ, 2019 ರ ಚುನಾವಣೆಗೆ ಮುಂಚಿತವಾಗಿ ಎನ್‌ಡಿಎಯಿಂದ ದೂರವಾಗಲು ಟಿಡಿಪಿಯ ನಿರ್ಧಾರ ಮತ್ತು ಬಿಜೆಪಿಯ ವಿರುದ್ಧ ಆ ಪಕ್ಷ ಮಾಡಿರುವ ಕಟುವಾದ ದಾಳಿಯನ್ನು ಉಲ್ಲೇಖಿಸಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷವು ತನ್ನ ಸ್ವಂತ ಬಲದ ಮೇಲೆ ತನ್ನ ಮತಗಳು ಮತ್ತು ಸ್ಥಾನಗಳ ಪಾಲನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಬಿಜೆಪಿ ನಾಯಕರು ವಾದಿಸುತ್ತಾರೆ.
ಟಿಡಿಪಿ-ಜೆಎಸ್‌ಪಿ ಜೊತೆಗಿನ ಮೈತ್ರಿಯು 2014ರಂತೆಯೇ ಬಿಜೆಪಿಗೆ ಕನಿಷ್ಠ ಒಂದೆರಡು ಸ್ಥಾನಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಆ ಚುನಾವಣೆಯಲ್ಲಿ ಬಿಜೆಪಿ ಕೈಕಲೂರು, ತಾಡೆಪಲ್ಲಿಗುಡೆಂ, ವಿಶಾಖಪಟ್ಟಣಂ ಉತ್ತರ ಮತ್ತು ರಾಜಮಂಡ್ರಿ ಸಿಟಿ ಎಂಬ ನಾಲ್ಕು ವಿಧಾನಸಭಾ ಸ್ಥಾನಗಳನ್ನು ಗೆದ್ದಿತ್ತು. ಆದರೆ, ಈಗ ಈ ಸ್ಥಾನಗಳನ್ನು ಉಳಿಸಿಕೊಂಡಿಲ್ಲ.ಇದು 2019 ರಲ್ಲಿ ಖಾಲಿಯಾಗಿದೆ.
ಟಿಡಿಪಿ ರಾಷ್ಟ್ರೀಯ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಮತ್ತು ಜೆಎಸ್ಪಿ ಮುಖ್ಯಸ್ಥ ಪವನ್ ಕಲ್ಯಾಣ್ ಅವರೊಂದಿಗೆ ನಾಯಕತ್ವವು ಶೀಘ್ರದಲ್ಲೇ ಮತ್ತೊಂದು ಸುತ್ತಿನ ಚರ್ಚೆ ನಡೆಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಚಂದ್ರಬಾಬು ನಾಯ್ಡು ಅವರು ಕಳೆದ ಎರಡು ವರ್ಷಗಳಿಂದ ಬಿಜೆಪಿಯೊಂದಿಗೆ ಸೇರಲು ಪ್ರಯತ್ನಿಸುತ್ತಿದ್ದರೆ, ಪವನ್ ಕಲ್ಯಾಣ್ ಅವರು ವೈಎಸ್‌ಆರ್‌ಸಿಪಿಯನ್ನು ಸೋಲಿಸಲು ಬಿಜೆಪಿಯನ್ನು ಜೆಎಸ್‌ಪಿ-ಟಿಡಿಪಿ ಮೈತ್ರಿಗೆ ತರಲು ಪ್ರಯಾಸದಿಂದ ಕೆಲಸ ಮಾಡುತ್ತಿದ್ದಾರೆ.
-
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ












Click it and Unblock the Notifications