Andhra Pradesh: ದೇವಸ್ಥಾನ ಕೆಡವಲು ಅರ್ಚಕನಿಂದಲೇ ಬಿಗ್ ಪ್ಲ್ಯಾನ್: ಹನುಮನನ್ನು ಕಾಪಾಡಿದ ವರುಣ!
ದೇವರಿಗೆ ಪೂಜೆ ಮಾಡುವ ಅರ್ಚಕನೊಬ್ಬ ದೇವಸ್ಥಾನವನ್ನು ಕೆಡವಲು ಪ್ರಯತ್ನಿಸಿದ ಅಚ್ಚರಿಯ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ. ದೇವಸ್ಥಾನ ಧ್ವಂಸಗೊಳಿಸುವ ದುಷ್ಕೃತ್ಯದ ಹಿಂದೆ ಅರ್ಚಕನ ಕೈವಾಡ ಇರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ದೇವಸ್ಥಾನವನ್ನು ಸ್ಫೋಟಕಗಳಿಂದ ಸ್ಫೋಟಿಸಲು ಅರ್ಚಕ ಹರಿನಾಥ್ ಇತರ ಐವರ ಜೊತೆ ಸೇರಿ ಸಂಚು ರೂಪಿಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಹೌದು.. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ತಂಬಳ್ಳಪಲ್ಲಿ ಕ್ಷೇತ್ರದ ಮುಳಕಲಚೆರುವು ಮಂಡಲದ ಕದಿರಿನಾಥುನಿ ಕೋಟಾ ಬಳಿಯ ಅಭಯಾಂಜನೇಯ ಸ್ವಾಮಿ ದೇವಸ್ಥಾನವನ್ನು ಸೋಮವಾರ (ಅಕ್ಟೋಬರ್ 14) ರಾತ್ರಿ ಧ್ವಂಸಗೊಳಿಸಲಾಗಿದೆ. ಸ್ಫೋಟಕಗಳಿಂದ ದೇವಸ್ಥಾನವನ್ನು ಕೆಡವಲು ಯತ್ನಿಸಲಾಗಿದೆ.

ಆದರೆ ಭಾರೀ ಮಳೆಯಿಂದಾಗಿ ಸ್ಫೋಟಕಗಳು ಸರಿಯಾಗಿ ಸ್ಫೋಟಗೊಳ್ಳದ ಕಾರಣ ದೇವಸ್ಥಾನ ಸಂಪೂರ್ಣವಾಗಿ ಧ್ವಂಸಗೊಳ್ಳದೆ ನಿಂತಿರುವುದು ಕಂಡು ಬಂದಿದೆ. ದೇವಾಲಯ ಸ್ಪೋಟದ ತೀವ್ರತೆಗೆ ಒಂದು ಬದಿಗೆ ವಾಲಿದೆ. ಈ ಘಟನೆಯನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತು ಕೂಲಂಕುಷವಾಗಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಿಕಂದರಾಬಾದ್‌ನ ಮೋಂಡಾ ಮಾರುಕಟ್ಟೆ ಬಳಿಯ ಮುತ್ಯಾಲಮ್ಮ ದೇವಸ್ಥಾನದ ಮೇಲೆ ದಾಳಿ ನಡೆದ ಘಟನೆ ತೆಲುಗು ರಾಜ್ಯಗಳಲ್ಲಿ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಈ ಘಟನೆಯಿಂದ ಆಕ್ರೋಶದ ಜ್ವಾಲೆ ಹೊತ್ತಿ ಉರಿಯುತ್ತಿರುವಾಗಲೇ ಜಿಲ್ಲೆಯ ಅನ್ನಮಯ್ಯನ ಆಂಜನೇಯಸ್ವಾಮಿ ದೇವಸ್ಥಾನದ ಮೇಲಿನ ದಾಳಿಗೆ ಹಿಂದೂ ಧಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಬಿಜೆಪಿ ಮುಖಂಡರು ತೀವ್ರ ಆಕ್ರೊಶ ವ್ಯಕ್ತಪಡಿಸಿದ್ದಾರೆ. ದೇವಸ್ಥಾನ ಕೆಡವಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆದೇಶದ ಮೇರೆಗೆ ಅನ್ನಮಯ್ಯ ಜಿಲ್ಲಾ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿ ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ದೇವಸ್ಥಾನಕ್ಕೆ ಬರುವ ಹಣದ ವಿಚಾರವಾಗಿ ದೇವಸ್ಥಾನದ ಅರ್ಚಕ ವಿದ್ಯಾಸಾಗರ್ ಹಾಗೂ ಮತ್ತೊಬ್ಬ ಅರ್ಚಕ ಹರಿನಾಥ್ ನಡುವೆ ಜಗಳ ನಡೆದಿದೆ. ಈ ಕ್ರಮದಲ್ಲಿ ಹರಿನಾಥ ದೇವಾಲಯವನ್ನು ಧ್ವಂಸ ಮಾಡಿರುವುದು ಬಯಲಾಗಿದೆ. ಇದಕ್ಕಾಗಿಹ ರಿನಾಥ್ ಕೆಲವರ ಜೊತೆ ಸೇರಿ ಪ್ಲಾನ್ ಮಾಡಿದ್ದೇನೆ ಎನ್ನುವುದ ತನಿಖೆಯಿಂದ ಬಯಲಾಗಿದೆ.
ಘಟನೆಯಲ್ಲಿ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅನ್ನಮಯ್ಯ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ಅವರಿಂದ ಒಂದು ಕಾರು, ಸ್ಫೋಟಕ ಮತ್ತು ಕಬ್ಬಿಣದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕದಿರಿನಾಥ ಕೋಟೆಯಲ್ಲಿ ಕನುಗೊಂಡ ರಾಯಸ್ವಾಮಿ ದೇವಾಲಯವನ್ನು 16 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ದೇವಾಲಯದ ಮುಂಭಾಗದಲ್ಲಿರುವ ಬಂಡೆಯ ಮೇಲೆ ಅಭಯಾಂಜನೇಯ ಸ್ವಾಮಿಯ ಶಿಲ್ಪವನ್ನು ಕೆತ್ತಲಾಗಿದೆ. ಒಂದು ವರ್ಷದ ಹಿಂದೆ, ಕೆಲವು ಪುಂಡರು ಅಭಯಾಂಜನೇಯ ದೇವರ ವಿಗ್ರಹವನ್ನು ಕಣ್ಣಿಗೆ ಬಟ್ಟೆ ಕಟ್ಟಿ ಗುಪ್ತ ನಿಧಿಗಳಿಗಾಗಿ ಅಗೆದಿದ್ದರು. ಆ ನಂತರ ಅಲ್ಲಿ ದೇವಾಲಯವನ್ನು ನಿರ್ಮಿಸಿ ಅದರಲ್ಲಿ ಆಂಜನೇಯ ಸ್ವಾಮಿಯ ವಿಗ್ರಹವನ್ನು ಸ್ಥಾಪಿಸಲಾಯಿತು.
ಅಕ್ಟೋಬರ್ 14ರ ಮಧ್ಯರಾತ್ರಿಯ ನಂತರ ಆರೋಪಿಗಳು ಸ್ಫೋಟಕಗಳನ್ನು ಇಟ್ಟು ದೇವಸ್ಥಾನವನ್ನು ಕೆಡವಲು ಯತ್ನಿಸಿದ್ದಾರೆ. ಆದರೆ ಧಾರಾಕಾರ ಮಳೆಯಿಂದಾಗಿ ಸ್ಫೋಟಕಗಳು ಸರಿಯಾಗಿ ಸ್ಫೋಟಗೊಂಡಿಲ್ಲ. ಹೀಗಾಗಿ ದೇವಾಲಯದ ಗೋಡೆಯ ಕೆಳಭಾಗವನ್ನು ಸುತ್ತಿಗೆ, ಗುದ್ದಲಿ ಮತ್ತು ಇತರ ಉಪಕರಣಗಳಿಂದ ಅಗೆಯಲಾಗಿದೆ. ಇದರಿಂದ ದೇವಸ್ಥಾನ ಒಂದು ಕಡೆ ವಾಲಿ ಹೋಗಿದೆ. ಧಾರಾಕಾರ ಮಳೆಗೆ ದೇವಸ್ಥಾನವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಆಗದೆ ದುಷ್ನರ್ಮಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ದೇವಸ್ಥಾನ ಗುಡ್ಡಗಾಡು ಪ್ರದೇಶದಲ್ಲಿ ಇರುವುದರಿಂದ ಬೆಳಗಿನ ಜಾವದವರೆಗೂ ಈ ವಿಚಾರ ಸ್ಥಳೀಯರೊಬ್ಬರಿಗೂ ಗೊತ್ತಿರಲಿಲ್ಲ. ಮರುದಿನ ಬೆಳಗ್ಗೆ ಮಾಹಿತಿ ಪಡೆದ ಮುಳಕಲಚೆರುವು ಎಸ್‌ಎಸ್‌ಐ ಗಾಯತ್ರಿ ಅವರು ಸ್ಥಳ ಪರಿಶೀಲನೆ ನಡೆಸಿದರು. ದೇವಸ್ಥಾನದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಘಟನೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಇದನ್ನು ಸಮ್ಮಿಶ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.












Click it and Unblock the Notifications