ಮುಂದಿನ ರಕ್ಷಣಾ ಸಚಿವರಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇಮಕ?
ಅಮಿತ್ ಶಾ ಅವರಿಗೆ ರಕ್ಷಣಾ ಸಚಿವ ಪಟ್ಟ. ಬಿಜೆಪಿ ಮೂಲಗಳಿಂದ ಮಾಹಿತಿ. ಸದ್ಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಅಮಿತ್. ಗುಜರಾತ್ ಮೂಲಕ ರಾಜ್ಯಸಭಾ ಸದಸ್ಯರಾದ ನಂತರ ರಕ್ಷಣಾ ಇಲಾಖೆ ಸಚಿವರಾಗಿ ನೇಮಕವಾಗುವ ಸಾಧ್ಯತೆ.
ನವದೆಹಲಿ, ಆಗಸ್ಟ್ 1: ಹಲವಾರು ದಿನಗಳಿಂದ ಖಾಲಿ ಇರುವ ರಕ್ಷಣಾ ಸಚಿವರ ಹುದ್ದೆಗೆ ಈಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ತಂದು ಕೂರಿಸಲು ಮೋದಿ ಹಾಗೂ ಬಿಜೆಪಿಯ ಥಿಂಕ್ ಟ್ಯಾಂಕ್ ಆಲೋಚಿಸಿವೆಯೇ?
ಬಿಜೆಪಿಯ ನಂಬಲರ್ಹ ಮೂಲಗಳನ್ನು ನಂಬುವುದಾದರೆ ಇದು ಸರಿ! ಹೌದು. ರಾಜ್ಯಸಭಾ ಸದಸ್ಯರಾಗುವ ಮೂಲಕ ಸಂಸತ್ ಪ್ರವೇಶಿಸಲು ವೇದಿಕೆ ಸಜ್ಜು ಮಾಡಿಕೊಂಡಿರುವ ಅಮಿತ್ ಶಾ, ಸಂಸದರಾಗಿ ಚುನಾಯಿತರಾದ ಕೂಡಲೇ ಅವರಿಗೆ ರಕ್ಷಣಾ ಸಚಿವರ ಹುದ್ದೆಯೇರಲಿದ್ದಾರೆಂದು ಹೇಳಲಾಗಿದೆ.

ಈ ಹಿಂದೆ, ರಕ್ಷಣಾ ಇಲಾಖೆಯನ್ನು ಈ ಹಿಂದೆ ಮನೋಹರ್ ಪರಿಕ್ಕರ್ ನಿಭಾಯಿಸುತ್ತಿದ್ದರು. ಆದರೆ ಅವರು ಗೋವಾದ ಮುಖ್ಯಮಂತ್ರಿಯಾದ ನಂತರ, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ರಕ್ಷಣಾ ಖಾತೆಯನ್ನು ನಿಭಾಯಿಸುತ್ತಿದ್ದಾರೆ.
ಆರ್ಥಿಕ ಇಲಾಖೆ ಜತೆಗೆ ರಕ್ಷಣಾ ಇಲಾಖೆಯನ್ನೂ ನಿಭಾಯಿಸುತ್ತಿರುವುದರಿಂದ ಜೇಟ್ಲಿಯವರಿಗೆ ಹೆಚ್ಚು ಹೊರೆಯಾಗುತ್ತಿದೆ. ಹೀಗಾಗಿಯೇ, ಕೇಂದ್ರ ಮಂತ್ರಿ ಮಂಡಲ ಪುನಾರಚನೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ.
ಗಡಿಯಲ್ಲಿ ಚೀನಾ, ಪಾಕಿಸ್ತಾನಗಳೆರಡೂ ಭಾರತಕ್ಕೆ ತಲೆನೋವಾಗಿರುವ ಈ ವೇಳೆಯಲ್ಲಿ ರಕ್ಷಣಾ ಸಚಿವರಾಗಿ ಶಾ ಬಂದರೆ, ಈ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾರೆಂಬ ಕುತೂಹಲ ಈಗ ಎಲ್ಲರಲ್ಲಿ ಮನೆ ಮಾಡಿದೆ.












Click it and Unblock the Notifications