ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರ್ಯಾಣದಲ್ಲಿ ಸರ್ಕಾರ ರಚನೆ ಸುಳಿವು ಕೊಟ್ಟ ಅಮಿತ್ ಶಾ

|
Google Oneindia Kannada News

Recommended Video

BJP president Amit Shah indicated BJP will form government in Haryan..? | Oneindia Kannada

ನವದೆಹಲಿ, ಅಕ್ಟೋಬರ್ 24 : ಹರ್ಯಾಣದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುವ ನಿರೀಕ್ಷೆ ಇದೆ. ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಸುಳಿವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೀಡಿದರು.

ಗುರುವಾರ ಹರ್ಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಚುನಾವಣಾ ಆಯೋಗದ ಮಾಹಿತಿಯಂತೆ ಸಂಜೆ 7.30ಕ್ಕೆ ಬಿಜೆಪಿ 33, ಕಾಂಗ್ರೆಸ್ 29, ಜೆಜೆಪಿ 10, ಐಎನ್‌ಎಲ್‌ಡಿ 1, 7 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಹರ್ಯಾಣ ಚುನಾವಣೆ ಹೊತ್ತಲ್ಲಿ ಕಣ್ಣಿಗೆ ಬಿದ್ದ ಈ 12 ರ ಪತ್ರಕರ್ತ! ಹರ್ಯಾಣ ಚುನಾವಣೆ ಹೊತ್ತಲ್ಲಿ ಕಣ್ಣಿಗೆ ಬಿದ್ದ ಈ 12 ರ ಪತ್ರಕರ್ತ!

ಬಿಜೆಪಿ ಅಧ್ಯಕ್ಷ ಅಮಿತ್ ಶಾ 90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿ 40 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಹುಮತ ಸಾಬೀತು ಪಡಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ 46.

ಮಹಾರಾಷ್ಟ್ರ, ಹರ್ಯಾಣ ಫಲಿತಾಂಶ 2019: ಗೆದ್ದವರು, ಸೋತವರು ಮಹಾರಾಷ್ಟ್ರ, ಹರ್ಯಾಣ ಫಲಿತಾಂಶ 2019: ಗೆದ್ದವರು, ಸೋತವರು

Amit Shah

ಬಿಜೆಪಿ 40 ಸೀಟುಗಳನ್ನು ಗೆಲ್ಲುವ ವಿಶ್ವಾಸದಲ್ಲಿ ಅಮಿತ್ ಶಾ ಇದ್ದಾರೆ. ಬಹುಮತ ಸಾಬೀತು ಮಾಡಲು 6 ಸೀಟುಗಳ ಕೊರತೆ ಉಂಟಾಗಲಿದೆ. 7 ಪಕ್ಷೇತರರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಇವರಲ್ಲಿ ನಾಲ್ವರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ಈ ಕುರಿತು ಮಾತುಕತೆ ಆರಂಭವಾಗಿದೆ.

ಹರ್ಯಾಣ ಚುನಾವಣೆ; ಎಬಿಪಿ-ಸಿವೋಟರ್ ಸಮೀಕ್ಷೆ ಫಲಿತಾಂಶ ಹರ್ಯಾಣ ಚುನಾವಣೆ; ಎಬಿಪಿ-ಸಿವೋಟರ್ ಸಮೀಕ್ಷೆ ಫಲಿತಾಂಶ

"ನರೇಂದ್ರ ಮೋದಿ ಅವರ ಸರ್ಕಾರದ ಸಹಕಾರದಿಂದ ಮನೋಹರ್ ಲಾಲ್ ಕಟ್ಟರ್ ಹರ್ಯಾಣದ ಅಭಿವೃದ್ಧಿಗಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಬಿಜೆಪಿಯನ್ನು ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಸಹಕಾರ ನೀಡಿದ ಎಲ್ಲಾ ಜನರಿಗೆ ಧನ್ಯವಾದಗಳು" ಎಂದು ಅಮಿತ್ ಶಾ ಹೇಳಿದರು.

ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿಯ ರಾಜ್ಯಾಧ್ಯಕ್ಷ ಸುಭಾಷ್ ಬಾರಾಲಗೆ ಅಮಿತ್ ಶಾ ಧನ್ಯವಾದ ಸಲ್ಲಿಸಿದರು. ಪಕ್ಷೇತರರ ಬೆಂಬಲ ಪಡೆದು ರಾಜ್ಯದಲ್ಲಿ ಪಕ್ಷ ಅಧಿಕಾರದ ಗದ್ದುಗೆ ಏರಲಿದೆಯೇ? ಕಾದು ನೋಡಬೇಕಿದೆ.

English summary
BJP president Amit Shah indicated that party will stake claim to form the government in Haryana after the assembly election results threw up a hung verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X