ರಾಹುಲ್ ಬಾಬಾ, ನಿಮಗೆ ಇಟಲಿ ಭಾಷೇಲಿ ಉತ್ತರ ನೀಡ್ತಿದ್ದೆ: ಶಾ ವ್ಯಂಗ್ಯ

ರಾಜ್ಸಮಂದ್(ರಾಜಸ್ಥಾನ), ಆಗಸ್ಟ್ 04: "ನನಗೆ ಇಟಲಿ ಭಾಷೆ ಗೊತ್ತಿಲ್ಲ. ಗೊತ್ತಿದ್ದರೆ ಅದರಲ್ಲೇ ರಾಹುಲ್ ಗಾಂಧಿಗೆ ಉತ್ತರ ಕೊಡುತ್ತಿದ್ದೆ" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಸರ್ಕಾರ ರಾಜಸ್ಥಾನದಲ್ಲಿ ಏನೂ ಮಾಡಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ನೆನಪಿಸಿಕೊಂಡ ಅವರು, "ಪ್ರಧಾನಿ ಮೋದಿ ಸರ್ಕಾರ ಮತ್ತು ರಾಜಸ್ಥಾನದಲ್ಲಿರುವ ವಸುಂಧರಾ ರಾಜೆ ಸರ್ಕಾರ ಈ ರಾಜ್ಯಕ್ಕೆ ಏನೆಲ್ಲ ಕೊಟ್ಟಿದೆ ಎಂಬುದು ಜನರಿಗೆ ಗೊತ್ತು. ಬಹುಶಃ ನಾವು ಇಟಾಲಿಯನ್ ಭಾಷೆಯಲ್ಲಿ ಹೇಳಿದ್ದರೆ ರಾಹುಲ್ ಗಾಂಧಿಗೂ ಅರ್ಥವಾಗುತ್ತಿತ್ತೇನೋ!" ಎಂದು ಅವರು ಲೇವಡಿ ಮಾಡಿದ್ದಾರೆ.

ರಾಜಸ್ಥಾನದಲ್ಲಿ ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ '58 ದಿನಗಳ ರಾಜಸ್ಥಾನ ಗೌರವ ಯಾತ್ರೆ'ಯನ್ನು ಇಂದು(ಆಗಸ್ಟ್ 4) ಸಮಾರೋಪ ಗೊಳಿಸಿದ ಅಮಿತ್ ಶಾ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

Amit Shah attacks Rahul Gandhi by his speech in Rajasthan

"ಬಿಜೆಪಿ ಏನು ಮಾಡಿದೆ ಎಂದು ಕಾಂಗ್ರೆಸ್ ಕೇಳುತ್ತದೆ. ಇದುವರೆಗೆ ಮೋದಿ ಸರ್ಕಾರ 116 ಯೋಜನೆಗಳನ್ನು ರಾಜಸ್ಥಾನ ಸರ್ಕಾರಕ್ಕೆ ನೀಡಿದೆ. ರಾಹುಲ್ ಬಾಬಾ ಅವರಿಗೆ ಲೆಕ್ಕ ಗೊತ್ತಿದ್ದರೆ ಲೆಕ್ಕ ಮಾಡಲಿ. ನನಗೆ ಇಟಲಿ ಭಾಷೆ ಗೊತ್ತಿದ್ದರೆ ಅವರಿಗೆ ಅರ್ಥ ಮಾಡಿಸುತ್ತಿದ್ದೆ. ಬಿಜೆಪಿ ಸರ್ಕಾರ ಜನರಿಗೆ ಏನು ಕೊಟ್ಟಿದೆ ಎಂಬುದನ್ನು ಹೇಳುತ್ತಿದ್ದೆ." ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+