ಕಲ್ಲು ತೂರಾಟದ ಮಧ್ಯೆ ಕಾಶ್ಮೀರದಲ್ಲಿ 3 ಉಗ್ರರ ಹತ್ಯೆ

ಪುಲ್ವಾಮಾ, ಜೂನ್ 22: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಎನ್ಕೌಂಟರ್ ನಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಬುಧವಾರ ರಾತ್ರಿ ಪುಲ್ವಾಮಾದ ಕಕ್ಪೋರಾ ಭಾಗದಲ್ಲಿ ಈ ಎನ್ಕೌಂಟರ್ ನಡೆದಿದೆ.

ಬರೋಬ್ಬರಿ ಎಂಟು ಗಂಟೆಗಳ ಕಾರ್ಯಾಚರಣೆ ನಂತರ ಉಗ್ರರನ್ನು ಹೊಡೆದುರುಳಿಸಲಾಗಿದ್ದು, 3 ಎಕೆ-47 ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ. ಸತ್ತ ಉಗ್ರರು ಲಷ್ಕರ್ ಇ ತಯ್ಯಾಬಾಗೆ ಸೇರಿದವರಾಗಿದ್ದಾರೆ.

Amidst fierce stone pelting, Army guns down 3 terrorists in J&K

ಮೂವರು ಉಗ್ರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದರು. ಇವರನ್ನು ಮೇಲೆ 50 ರಾಷ್ಟ್ರೀಯ ರೈಫಲ್ಸ್, ವಿಶೇಷ ಕಾರ್ಯಾಚರಣಾ ತಂಡ ಮತ್ತು ಸಿಆರ್ ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಿವೆ.

ಇನ್ನು ಎನ್ಕೌಂಟರ್ ಸಂದರ್ಭ ಸ್ಥಳೀಯರು ಕಲ್ಲು ತೂರಾಟ ನಡೆಸಿ ಅಡ್ಡಿಪಡಿಸಿದ ಘಟನೆಯೂ ನಡೆಯಿತು. ಆದರೆ ಭದ್ರತಾ ಸಿಬ್ಬಂದಿ ಇಡೀ ಸ್ಥಳವನ್ನು ಖಾಲಿ ಮಾಡಿ ಉಗ್ರರು ತಪ್ಪಿಸಿಕೊಳ್ಳದಂತೆ ಎಚ್ಚರವಹಿಸಿ ಕಾರ್ಯಾಚರಣೆ ಮುಗಿಸಿದ್ದಾರೆ.

ಕಾರ್ಯಾಚರಣೆ ಮುಗಿಯುತ್ತಿದ್ದಂತೆ ಸ್ಥಳೀಯರು ಮತ್ತೆ ದೊಡ್ಡ ಮಟ್ಟಕ್ಕೆ ಬಂದು ಸೇರಿ ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಓರ್ವ ಭದ್ರತಾ ಸಿಬ್ಬಂದಿಗೆ ಗಾಯವಾಗಿದೆ. ಅದೃಷ್ಟಾವಶಾತ್ ಬೇರಾವುದೇ ಅನಾಹುತಗಳು ಸಂಭವಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+