ಬಿಗಿಭದ್ರತೆಯೊಂದಿಗೆ ಅಮರನಾಥ ಯಾತ್ರೆ ಸಜ್ಜಾದ ಭಕ್ತಾದಿಗಳು
Recommended Video

ಜಮ್ಮು, ಜೂನ್ 27: ಹಿಂದುಗಳ ಪವಿತ್ರ ಅಮರನಾಥ ಯಾತ್ರೆಯ ಮೊದಲನೇ ಸುತ್ತು ಇಂದಿನಿಂದ ಆರಂಭವಾಗಲಿದೆ. ಭಕ್ತಾದಿಗಳು ಬಿಗಿ ಭದ್ರತೆಯ ನಡುವೆ ಜಮ್ಮುವಿನ ಭಗವಂತ್ ನಗರ ಶಿಬಿರದಿಂದ ಇಂದು ಯಾತ್ರೆ ಆರಂಭಿಸಲಿದ್ದಾರೆ.
ದೇಶದ ವಿವಿಧೆಡೆಯಿಂದ ಬಂದಿರುವ ಭಕ್ತಾದಿಗಳು ಕಾಶ್ಮೀರದ ಬಲ್ತಾಳ್ ಮತ್ತು ಪಹಲ್ಗಾಮ್ ಶಿಬಿರಕ್ಕೆ ತೆರಳಿ, ನಾಳೆ(ಜೂನ್ 28) ಬೆಳಿಗ್ಗೆಯಿಂದ 3,880 ಮೀ. ಎತ್ತರದ ಅಮರನಾಥ ಗುಹೆಗೆ ಅಧಿಕೃತವಾಗಿ ಯಾತ್ರೆ ಆರಂಭಿಸಲಿದ್ದಾರೆ.
ಅಮರನಾಥ್ ಯಾತ್ರೆಗಾಗಿ ಈಗಾಗಲೇ ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಬಲ್ತಾಲ್ ಬೇಸ್ ಕ್ಯಾಂಪ್ ನಲ್ಲಿನ ಭದ್ರತಾ ವ್ಯವಸ್ಥೆಯನ್ನು ಈಗಾಗಲೇ ರಕ್ಷಣಾ ಸಚಿವೆ ನಿರ್ಮಲಾ ಅಮರನಾಥನ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಬಿಪನ್ ರಾವತ್ ಅವಲೋಕಿಸಿದ್ದಾರೆ.

ಈಗಾಗಲೇ ದೇಶದಾದ್ಯಂತ ಸುಮಾರು 2 ಲಕ್ಷ ಭಕ್ತರು ಯಾತ್ರೆಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ಕಳೆದ ವರ್ಷ ಜುಲೈ 10 ರಂದು ಅಮರನಾಥ ಯಾತ್ರಿಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 9 ಯಾತ್ರಿಗಳು ಅಸುನೀಗಿದ್ದರು. ಈ ನಿಟ್ಟಿನಲ್ಲಿ ಈ ಬಾರಿ ಮತ್ತಷ್ಟು ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.











Click it and Unblock the Notifications