ನಾಯಿ ಮರಿಗಳಿಗೆ ವಿಷ ಹಾಕಿ ಕೊಂದ: ಬೆಂಕಿ ಹಾಕಿ ಸುಟ್ಟ ರಾಕ್ಷಸ!
ಗೋರಖ್‌ಪುರ: ಮನುಷ್ಯನು ಅಭಿವೃದ್ಧಿ ಹೊಂದಿದಂತೆ ಮಾನವೀಯತೆ ಕೂಡ ಮರೆಯಾಗಿ ಹೋಗುತ್ತಿದೆ. ಅದರಲ್ಲೂ ಮೂಖ ಪ್ರಾಣಿಗಳ ಮೇಲೆ ಪದೇ ಪದೆ ದಾಳಿಗಳು ನಡೆಯುವ, ಮನಕಲಕುವ ಘಟನೆಗಳು ವರದಿ ಆಗುತ್ತಿವೆ. ಉತ್ತರ ಪ್ರದೇಶದಲ್ಲಿ ಇದೇ ರೀತಿ ಬರೋಬ್ಬರಿ 7 ನಾಯಿ ಮರಿಗಳಿಗೆ ವಿಷ ಹಾಕಿದ ರಕ್ಕಸನೊಬ್ಬ, ಮುಗ್ಧ ಮರಿಗಳನ್ನು ಕೊಂದಿದ್ದಾನೆ.
ಹೌದು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಾಯಿಯೊಂದು 7 ನಾಯಿ ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಅಲ್ಲೊಬ್ಬ ಮನುಷ್ಯತ್ವ ಇಲ್ಲದವನ ಕಣ್ಣಿಗೆ ನಾಯಿ ಮರಿಗಳು ಕಂಡವು. ಕೂಡಲೇ ಆತನ ತಲೆಯಲ್ಲಿ ಮನುಷ್ಯತ್ವ ಮೀರಿದ ಆಲೋಚನೆ ಮೂಡಿತ್ತು. ಅಂದಹಾಗೆ ಉತ್ತರ ಪ್ರದೇಶದ ಗೋರಖ್‌ಪುರದ ಸ್ಥಳೀಯ ವ್ಯಾಪಾರಿ ನಾಯಿ ಮತ್ತು ಅದರ ಏಳು ಮರಿಗಳಿಗೆ ವಿಷ ಹಾಕಿ ಕೊಂದಿದ್ದಾನೆ. ನಂತರ ಅವುಗಳ ಮೃತದೇಹವನ್ನು ಸುಟ್ಟು ಹಾಕಿರುವ ಭೀಕರ ಘಟನೆ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಾಯಿ ಕೊಲ್ಲಲು ಕಾರಣ ಏನು?
ಇನ್ನು ನಾಯಿ ಮತ್ತು ಅದರ 7 ಮರಿಗಳಿಗೆ ವಿಷ ಹಾಕಿ ಕೊಂದ ಘಟನೆ ಗೊತ್ತಾಗುತ್ತಿದ್ದಂತೆ ಜನರು ರೊಚ್ಚಿಗೆದ್ದಿದ್ದಾರೆ. ಸ್ಥಳೀಯರು ಈ ಘಟನೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆಯಿಂದ ಜನರು ಕೂಡ ವಿಚಲಿತರಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕೂಡಲೇ ಜಿಲ್ಲಾ ಪೊಲೀಸ್ ಘಟಕಕ್ಕೆ ತೆರಳಿ, ವ್ಯಾಪಾರಿ ಗುರುಮುಖ್ ಗಂಗಾರಾಮ್ ವಿರುದ್ಧ ಐಪಿಸಿ ಸೆಕ್ಷನ್ 428 ಮತ್ತು 429 ಅಡಿ ಕೇಸು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 428 ಮತ್ತು 429 ಪ್ರಕಾರ ಕೊಲೆ ಹಾಗೂ ವಿಷಪ್ರಾಶನದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದ್ರೆ ಈ ಘಟನೆಗೆ ಕಾರಣ ಏನು ಎಂಬುದನ್ನು ತಿಳಿದು ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
गोरखपुर में 6 डॅाग्स को जहर एवं पेट्रोल डाल कर मार डालने वाले व्यापारी के खिलाफ पशु क्रूरता अधिनियम में मुकदमा दर्ज कर कठोर कार्रवाई की जाए @gorakhpurpolice @dgpup @Heritage_fn @CZA_Delhi @peta pic.twitter.com/supbpzTqER
— Rajeev Datt Panday (@DattRajeev) July 19, 2023
ಬಿಸ್ಕೆಟ್ ಒಳಗೆ ವಿಷ ಹಾಕಿದ್ದ!
ತನಿಖೆ ನಡೆಸಿರುವ ಅಧಿಕಾರಿಗಳ ಪ್ರಕಾರ, ಆರೋಪಿ ಗಂಗಾರಾಮ್ ಇಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದಾರೆ. ಕಳೆದ ಶುಕ್ರವಾರ ಇದೇ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ನಾಯಿ ಒಟ್ಟು 7 ನಾಯಿ ಮರಿಗಳಿಗೆ ಜನ್ಮ ನೀಡಿತ್ತು. ಆಗಲೇ ಅವನ ತಲೆಯಲ್ಲಿ ನಾಯಿ ಮತ್ತು ಅದರ ಮರಿಗಳನ್ನು ಹತ್ಯೆ ಮಾಡುವ ಕೆಟ್ಟ ಆಲೋಚನೆ ಹೊಳೆದಿತ್ತು. ಮೃತ ನಾಯಿ ಹಾಗೂ ಮರಿಗಳಿಗೆ ವಿಷ ಬೆರೆಸಿದ್ದ ಬಿಸ್ಕೆಟ್ ಹಾಕಿದ್ದಾನೆ ಆರೋಪಿ. ಬಿಸ್ಕೆಟ್ ತಿಂದ ನಾಯಿ ಮತ್ತು ಮರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯ ಸಂಪೂರ್ಣ ದೃಶ್ಯವು ರೆಕಾರ್ಡ್ ಆಗಿದೆ. ಅಲ್ಲದೆ ನಾಯಿಗಳನ್ನ ಕೊಂದ ಆರೋಪಿ ಅವುಗಳ ದೇಹಕ್ಕೆ ಬೆಂಕಿ ಕೂಡ ಹಚ್ಚಿದ್ದಾನಂತೆ.
#gorakhpurpolice#PoliceAction#PsCantt क्षेत्रान्तर्गत स्थित सिनेमा रोड पर सनप्लाजा होटल के सामने श्वान शावको के साथ घटित घटना के संबंध में #spcitygkp द्वारा दी गई वीडियो बाइट-#UPPolice pic.twitter.com/UDYDr9lR9Y
— Gorakhpur Police (@gorakhpurpolice) July 20, 2023
ಒಟ್ನಲ್ಲಿ ಮಾನವೀಯತೆ ಮರೆತು ಭೀಕರ ಕೃತ್ಯ ನಡೆಸಿದವನ ವಿರುದ್ಧ ಸ್ಥಳೀಯರು ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ ಗಂಗಾರಾಮ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಘಟನೆ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಭಾರಿ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಏನೂ ಅರಿಯದ ಮುಗ್ಧ ನಾಯಿ ಮರಿಗಳ ಹತ್ಯೆಯ ಬಗ್ಗೆ ಜನರು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ. ಹಾಗೇ ಆರೋಪಿ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಮುಂದೆ ಈ ಪ್ರಕರಣ ಯಾವ ರೀತಿ ತಿರುವು ಪಡೆಯುತ್ತೆ, ತಪ್ಪು ಮಾಡಿದ ವ್ಯಕ್ತಿಗೆ ನಿಜವಾಗೂ ಶಿಕ್ಷೆ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications