ಇಂದು ಬ್ಯಾಂಕ್ ಗಳ ಬಾಗಿಲು ತೆರೆದೇ ಇರುತ್ತೆ
ಬೆಂಗಳೂರು, ಜ.7 : ಬ್ಯಾಂಕ್ ನೌಕರರ ಒಕ್ಕೂಟವು ಜ. 7 ರಂದು ದೇಶಾದ್ಯಂತ ಹಮ್ಮಿಕೊಂಡಿದ್ದ ಒಂದು ದಿನದ ಮುಷ್ಕರವನ್ನು ಹಿಂಪಡೆದಿದ್ದು ಬ್ಯಾಂಕ್ ಗಳು ಎಂದಿನಂತೆ ಕೆಲಸ ನಿರ್ವಹಿಸಲಿವೆ.
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ನೌಕರರು ಒಂದು ದಿನ ಮುಷ್ಕರ ಮಾಡಲು ನಿರ್ಧರಿಸಿದ್ದರು, ಆದರೆ ಬೇಡಿಕೆ ಈಡೇರಿಕೆ ಸಂಬಂಧ ಬುಧವಾರವೂ ಮಾತುಕತೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡಲಾಗಿದೆ ಎಂದು ಬ್ಯಾಂಕ್ ಸಂಘಟನೆಗಳ ಕೇಂದ್ರೀಯ ಒಕ್ಕೂಟ ಸಂಚಾಲಕ ಎಂ.ಮುರುಳಿ ತಿಳಿಸಿದ್ದಾರೆ.[ಜ.7ರಂದು ಮತ್ತೆ ಬ್ಯಾಂಕ್ ನೌಕರರ ಮುಷ್ಕರ]

ಶೇ .25ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ಬ್ಯಾಂಕ್ ನೌಕರರ ಬೇಡಿಕೆ. ಬ್ಯಾಂಕ್ ಆಡಳಿತ ಮಂಡಳಿ ಶೇ 11ರವರೆಗೆ ವೇತನ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿವೆ. ಇದನ್ನು ನೌಕರರು ತಿರಸ್ಕರಿಸಿದ್ದು, ವೇತನ ಹೆಚ್ಚಿಸಬೇಕೆಂದು ಪಟ್ಟು ಹಿಡಿದಿದ್ದು ಮಾತುಕತೆಗೆ ಮುಂದಾಗಿದ್ದಾರೆ.
ಈ ಬಾರಿಯೂ ನಮ್ಮ ಬೇಡಿಕೆ ಈಡೇರದಿದ್ದರೇ ಜನವರಿ ಕೊನೆಯ ವಾರದಲ್ಲಿ ಮತ್ತೇ ಮುಷ್ಕರ ಮಾಡಲಾಗುವುದು. ವಾರದ ಕಾಲ ಮುಷ್ಕರ ನಡೆಸಲಾಗುವುದು ಎಂದು ಒಕ್ಕೂಟ ಎಚ್ಚರಿಸಿದೆ.












Click it and Unblock the Notifications