ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.12 ರಿಂದ ಅಖಿಲ ಭಾರತ ಬ್ಯಾಂಕ್ ಮುಷ್ಕರ

By Mahesh
|
Google Oneindia Kannada News

ಬೆಂಗಳೂರು, ಅ.29: ವೇತನ ಪರಿಷ್ಕರಣೆಗೆ ಆಗ್ರಹಿಸಿ ನ.12ರಿಂದ ಅಖಿಲ ಭಾರತ ಬ್ಯಾಂಕ್ ಮುಷ್ಕರ ಹಮ್ಮಿಕೊಳ್ಳಲಾಗಿದೆ. ವಲಯವಾರು ಮುಷ್ಕರಕ್ಕೆ ಬೇರೆ ಬೇರೆ ದಿನಾಂಕಗಳನ್ನು ನಿಗದಿ ಪಡಿಸಲಾಗಿದೆ ಎಂದು ಬ್ಯಾಂಕ್ ನೌಕರರ ಸಂಘ ಪ್ರಕಟಿಸಿದೆ.

ಬಂದ್ ದಿನದಂದು ಬ್ಯಾಂಕ್, ಎಟಿಎಂಗಳು ಕಾರ್ಯ ನಿರ್ವಹಿಸುವುದಿಲ್ಲ, ಇದರಿಂದ ಗ್ರಾಹಕರಿಗೆ ಆಗುವ ತೊಂದರೆಗಳಿಗೆ ವಿಷಾದಿಸುತ್ತೇವೆ. ಆದರೆ ತೊಂದರೆಗೆ ನಾವು ಕಾರಣರಲ್ಲ, ಸರ್ಕಾರವೇ ಕಾರಣ ಎಂದು ಅಖಿಲ ಭಾರತ ಬ್ಯಾಂಕ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸಿ.ಎಚ್ ವೆಂಕಟಾಚಲಂ ಹೇಳಿದ್ದಾರೆ.

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಸಂಚಾಲಕ ವಸಂತ ರೈ ಮಾತನಾಡಿ, ವೇತನ ಪರಿಷ್ಕರಣೆಗೊಳಿಸುವಂತೆ ನಾವು ಹಲವು ಬಾರಿ ಮುಷ್ಕರ ನಡೆಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಅನಿವಾರ್ಯವಾಗಿ ಎರಡು ಹಂತದಲ್ಲಿ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದಿದ್ದಾರೆ. 31.10.2012ರಿಂದ ವೇತನ ಪರಿಷ್ಕರಣೆಯಾಗಬೇಕಿದೆ ಎಂದು ಹೇಳಿದ ಅವರು ಡಿ.2 ರಿಂದ 5ರವರೆಗೆ ವಲಯವಾರು ಮುಷ್ಕರವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

All India Bank employees to go on strike on Nov 12

ಡಿ.2 ರಂದು ದಕ್ಷಿಣ ವಲಯ: ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಲಕ್ಷದ್ವೀಪ, ಪುದುಚೇರಿ.
ಡಿ.3 ರಂದು ಉತ್ತರ ವಲಯ: ಛತ್ತೀಸ್‍ಗಡ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಮಧ್ಯಪ್ರದೇಶ, ನವದೆಹಲಿ, ಪಂಜಾಬ್, ಉತ್ತರಪ್ರದೇಶ, ಉತ್ತರಾಂಚಲ, ರಾಜಸ್ಥಾನ, ಚಂಡೀಗಡ.

ಡಿ.4ರಂದು ಪೂರ್ವವಲಯ: ಬಿಹಾರ, ಜಾರ್ಖಂಡ್, ಸಿಕ್ಕಿಂ, ಪಶ್ಚಿಮ ಬಂಗಾಲ, ಈಶಾನ್ಯ ರಾಜ್ಯಗಳು.
ಡಿ.5 ರಂದು ಪಶ್ಚಿಮ ವಲಯ: ಗೋವಾ, ಗುಜರಾತ್, ಮಹಾರಾಷ್ಟ್ರ, ದಿಯು-ದಾಮನ್ ವಲಯಗಳಲ್ಲಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ.

2011-12ರಲ್ಲಿ ವೇತನದಲ್ಲಿ ಶೇ17.5ರಷ್ಟು ಮಾತ್ರ ಏರಿಕೆ ನೀಡಲಾಗಿತ್ತು ನಂತರದ ವರ್ಷದಲ್ಲಿ ಶೇ 11.5 ರಷ್ಟು ಸಂಬಳ ಏರಿಕೆ ಕಂಡಿತ್ತು ಇದಾದ ಮೇಲೆ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ವೇತನ ಪರಿಷ್ಕರಣೆ ಮಾಡಿಲ್ಲ ಎಂದು ನೌಕರರ ಸಂಘ ದೂರಿದೆ.(ಪಿಟಿಐ)

English summary
Banking services and ATM networks across the country are likely to be affected on November 12 as the United Forum of Bank Unions, an umbrella organisation comprising various employee bodies, has planned to go on a day's strike pressing for wage revision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X