ಭಾರತದಲ್ಲಿ ಆಲ್ಕೊಹಾಲ್ ಸೇವಿಸುವ ಪುರುಷ ಸಂಖ್ಯೆ ಶೇ.7ರಷ್ಟು ಕಡಿಮೆ- NFHS-5 ವರದಿ
2015 ರಿಂದ ಭಾರತದಲ್ಲಿ ಪುರುಷರಲ್ಲಿ ಆಲ್ಕೊಹಾಲ್ ಸೇವನೆಯು ಶೇ.7 ರಷ್ಟು ಕಡಿಮೆಯಾಗಿದೆ ಎಂದು NFHS-5 ವರದಿ ತಿಳಿಸಿದೆ.
ಪುರುಷರಲ್ಲಿ ಆಲ್ಕೋಹಾಲ್ ಸೇವನೆಯು ಯಾವಾಗಲೂ ಹೆಚ್ಚಾಗಿರುತ್ತದೆ ಎಂದು ತಿಳಿದಿದ್ದರೂ, 2019-2021 ಗಾಗಿ ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ದೇಶದಲ್ಲಿ ಪುರುಷರಲ್ಲಿ ಆಲ್ಕೊಹಾಲ್ ಸೇವನೆಯು ರಷ್ಟು7ರಷ್ಟು ಕಡಿಮೆಯಾಗಿದೆ. ಜೊತೆಗೆ ಶೇ.22ರಷ್ಟು ಪುರುಷರಿಗೆ ಹೋಲಿಸಿದರೆ 15-49 ವರ್ಷ ವಯಸ್ಸಿನ ಶೇ.1ರಷ್ಟು ಮಹಿಳೆಯರು ಮಾತ್ರ ಮದ್ಯಪಾನ ಮಾಡುತ್ತಾರೆ ಎಂದು ಕಂಡುಹಿಡಿದಿದೆ. ಒಟ್ಟಾರೆ ಬಳಕೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದೆ ಎಂದು ವರದಿ ಹೇಳಿದೆ.
ಕರ್ನಾಟಕದಲ್ಲಿ ಶೇ.0.3ರಷ್ಟು ಮಹಿಳೆಯರು ಮದ್ಯ ಸೇವಿಸುತ್ತಾರೆ. ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ. ಜೊತೆಗೆ ಶೇ.23.1ರಷ್ಟು ಪುರುಷರು ಮದ್ಯ ಸೇವಿಸುತ್ತಾರೆ. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಮದ್ಯ ಸೇವಿಸುವ ಮಹಿಳೆಯರ ಶೇಕಡಾವಾರು ಪ್ರಮಾಣವು ಅರುಣಾಚಲ ಪ್ರದೇಶದಲ್ಲಿ (18%), ಸಿಕ್ಕಿಂ (15%) ನಲ್ಲಿ ಅತಿ ಹೆಚ್ಚು ಆಗಿದೆ. ಪುರುಷರಲ್ಲಿ ಆಲ್ಕೊಹಾಲ್ ಸೇವನೆಯು ಗೋವಾದಲ್ಲಿ (59%), ಅರುಣಾಚಲ ಪ್ರದೇಶ (57%), ಮತ್ತು ತೆಲಂಗಾಣ (50%) ದಲ್ಲಿ ಅತಿ ಹೆಚ್ಚು ಆಗಿದೆ. ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಲಕ್ಷದ್ವೀಪದಲ್ಲಿ (1%) ಕಡಿಮೆಯಾಗಿದೆ.

ಮದ್ಯಪಾನ ಮಾಡುವ ಮಹಿಳೆಯರಲ್ಲಿ ಶೇ.17ರಷ್ಟು ಜನರು ಅದನ್ನು ಪ್ರತಿದಿನ ಸೇವಿಸುತ್ತಾರೆ ಮತ್ತು ಶೇ.37ರಷ್ಟು ಜನರು ವಾರಕ್ಕೊಮ್ಮೆ ಕುಡಿಯುತ್ತಾರೆ. ಪುರುಷರಲ್ಲಿ ಶೇ.15ರಷ್ಟು ಜನರು ಪ್ರತಿದಿನ ಸೇವಿಸಿದರೆ, ಶೇ.43ರಷ್ಟು ಜನರು ವಾರಕ್ಕೊಮ್ಮೆ ಕುಡಿಯುತ್ತಾರೆ ಮತ್ತು ಶೇ.42ರಷ್ಟು ಜನರು ವಾರಕ್ಕೊಮ್ಮೆಯೂ ಕಡಿಮೆ ಕುಡಿಯುತ್ತಾರೆ.
ಇತರ ಯಾವುದೇ ಜಾತಿ/ಪಂಗಡದ ಗುಂಪುಗಳಿಗಿಂತ ಪರಿಶಿಷ್ಟ ಪಂಗಡಗಳ (4%) ಮಹಿಳೆಯರಲ್ಲಿ ಮದ್ಯಪಾನವು ಹೆಚ್ಚು ಸಾಮಾನ್ಯವಾಗಿದೆ. ಕ್ರಿಶ್ಚಿಯನ್ ಪುರುಷರಲ್ಲಿ (36%) ಮತ್ತು "ಇತರ" ಧರ್ಮಗಳಿಗೆ (49%) ಸೇರಿದ ಪುರುಷರಲ್ಲಿ ಸೇವನೆಯು ಸಾಮಾನ್ಯವಾಗಿದೆ. ಇಲ್ಲಿರುವ "ಇತರ" ಧರ್ಮಗಳೆಂದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ/ನವ-ಬೌದ್ಧ ಮತ್ತು ಜೈನ ಸಮುದಾಯಗಳನ್ನು ಹೊರತುಪಡಿಸಿ.

5 ವರ್ಷಕ್ಕಿಂತ ಕಡಿಮೆ ಶಾಲಾ ಶಿಕ್ಷಣ ಹೊಂದಿರುವ ಶೇ.33ರಷ್ಟು ಪುರುಷರಲ್ಲಿ, ಪರಿಶಿಷ್ಟ ಪಂಗಡದವರಲ್ಲಿ ಶೇ.34ರಷ್ಟು ಮತ್ತು 35-49 ವರ್ಷ ವಯಸ್ಸಿನವರಲ್ಲಿ ಶೇ.30 ರಷ್ಟು ಕುಡಿತವು ಕಂಡುಬರುತ್ತದೆ. ಒಟ್ಟಾರೆಯಾಗಿ 2015-2016ರಲ್ಲಿ NFHS-4 ಮತ್ತು 2019-2021ರಲ್ಲಿ NFHS-5 ನಡುವೆ ಮದ್ಯಪಾನ ಮಾಡುವ ಪುರುಷರ ಪ್ರಮಾಣವು 29% ರಿಂದ 22% ಕ್ಕೆ ಕಡಿಮೆಯಾಗಿದೆ. ವರದಿಯ ಪ್ರಕಾರ ಆ ಅವಧಿಯಲ್ಲಿ ಕುಡಿಯುವ ಮಹಿಳೆಯರ ಪ್ರಮಾಣವು ಬದಲಾಗದೆ ಉಳಿದಿದೆ ಎಂದು ತಿಳಿದು ಬರುತ್ತದೆ.
ನಿಮ್ಹಾನ್ಸ್ ಅಧ್ಯಯನ
ನಿಮ್ಹಾನ್ಸ್ ನಿರ್ದೇಶಕಿ ಪ್ರತಿಮಾ ಮೂರ್ತಿ, "ಅತಿಯಾದ ಮದ್ಯಪಾನವು ಡಿಎನ್‌ಎಗೆ ಬದಲಾಯಿಸಲಾಗದ ಬದಲಾವಣೆಗಳನ್ನು ಉಂಟುಮಾಡಬಹುದು ಮತ್ತು ಇನ್ನು ಮುಂದೆ ಸೇವಿಸದಿದ್ದರೂ ಬದಲಾವಣೆಗಳು ಮುಂದುವರಿಯಬಹುದು ಎಂದು ಎನ್‌ಎಫ್‌ಎಚ್‌ಎಸ್-5 ಅದ್ಯಾಯನದ ಭಾಗವಾಗಿ ಹೇಳಿದ್ದಾರೆ. ಕುಡಿತ ಕಡಿತಗೊಳ್ಳುವುದಕ್ಕೆ ವರದಿಯು 2019-2021ರಲ್ಲಿ ಇರುವುದರಿಂದ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಲಭ್ಯವಿಲ್ಲದಿರುವುದು ಸಹ ಕಾರಣ. ಹೀಗಾಗಿ ಅದು ಮುಂದುವರೆಯುವ ಸಾಧ್ಯತೆ ಇದೆ. ಇದು ಇನ್ನೂ ಹೆಚ್ಚೂ ಕೂಡ ಆಗಬಹುದು," ಎಂದಿದ್ದಾರೆ.

ಅಮೇರಿಕನ್ ಜರ್ನಲ್ ಆಫ್ ಮೆಡಿಕಲ್ ಜೆನೆಟಿಕ್ಸ್‌ನಲ್ಲಿ ಕಳೆದ ವರ್ಷ ಪ್ರಕಟವಾದ ನಿಮ್ಹಾನ್ಸ್ ಅಧ್ಯಯನವು, "ಚಿಕ್ಕ ವಯಸ್ಸಿನಲ್ಲೇ ಮದ್ಯಪಾನವನ್ನು ಪ್ರಾರಂಭಿಸುವುದು ಕಂಡುಬರುತ್ತದೆ. ಕುಡಿಯಲು ಪ್ರಾರಂಭಿಸುವುದರಿಂದ ಮೆದುಳು ಸೇರಿದಂತೆ ಅನೇಕ ಜೀನ್‌ಗಳನ್ನು ದೈಹಿಕವಾಗಿ ಬದಲಾಯಿಸಬಹುದು. ಇದು ಮಿದುಳಿನ ಬೆಳವಣಿಗೆ ಮತ್ತು ಪಕ್ವತೆಯ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಬಹುದು, ಅದು ನಂತರದ ವಯಸ್ಕ ಜೀವನಕ್ಕೆ ಮುಂದುವರಿಯಬಹುದು," ಡಾ. ಮೂರ್ತಿ ದಿ ಹಿಂದೂಗೆ ತಿಳಿಸಿದ್ದಾರೆ.
ಮಾರಾಟದಲ್ಲಿ ಹೆಚ್ಚಳ
ನಿಮ್ಹಾನ್ಸ್‌ನ ಅಡಿಕ್ಷನ್ ಮೆಡಿಸಿನ್ ಕೇಂದ್ರದ ಮುಖ್ಯಸ್ಥರಾಗಿರುವ ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕ ವಿವೇಕ್ ಬೆನಗಲ್, "ಒಟ್ಟಾರೆ ಬಳಕೆಯಲ್ಲಿನ ಕಡಿತವು ಸ್ವಾಗತಾರ್ಹ ಬದಲಾವಣೆಯಾಗಿದೆ. ಆದಾಗ್ಯೂ, ಮದ್ಯದ ಮಾರಾಟ ಮತ್ತು ಉತ್ಪಾದನೆಯಲ್ಲಿ ಸ್ಥಿರವಾದ ಹೆಚ್ಚಳದ ದೃಷ್ಟಿಕೋನದಲ್ಲಿ ಇದನ್ನು ನೋಡಬೇಕಾಗಿದೆ," ಎಂದು ಹೇಳಿದರು.
"ಕುಡಿತವನ್ನು ಗಮನಿಸಿದ ಅವಧಿಯಲ್ಲಿ ಆಲ್ಕೋಹಾಲ್ ಉತ್ಪಾದನೆ ಮತ್ತು ಮಾರಾಟದಲ್ಲಿ ಸ್ಥಿರವಾದ ಹೆಚ್ಚಳದೊಂದಿಗೆ ಸಂಶೋಧನೆಗಳನ್ನು ಸಮತೋಲನ ಗೊಳಿಸಬೇಕಾಗುತ್ತದೆ. NFHS-5 ಸಂಶೋಧನೆಗಳನ್ನು ಬೆಂಬಲಿಸುವ ಹೊಸ ಅಧ್ಯಯನಗಳ ಮೂಲಕ ಹೆಚ್ಚಿನ ಡೇಟಾವನ್ನು ಪಡೆಯುವುದು ಅತ್ಯಗತ್ಯ. ಮದ್ಯ ಸೇವನೆಯು ಕಡಿಮೆಯಾದರೆ, ಮದ್ಯಸಾರಕ್ಕೆ ಕಾರಣವಾಗುವ ಸಾಮಾಜಿಕ ಮತ್ತು ಆರೋಗ್ಯ ವೆಚ್ಚಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ" ಎಂದು ಡಾ. ಬೆನಗಲ್ ಗಮನಸೆಳೆದರು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications