Get Updates
Get notified of breaking news, exclusive insights, and must-see stories!

ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಖಾಲಿ: ಅಖಿಲೇಶ್

ಲಖನೌ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷಗಳ ಮಧ್ಯೆ ತಿಕ್ಕಾಟ ಮುಂದುವರಿದೆ. ಈ ನಡುವೆ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್‌ ಯಾದವ್ ನೇರವಾಗಿ ಬಿಜೆಪಿಗೆ ಸವಾಲು ಹಾಕಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ 80 ಸ್ಥಾನದಲ್ಲೂ ಬಿಜೆಪಿ ಉತ್ತರ ಪ್ರದೇಶದಲ್ಲಿ ಸೋಲು ಕಾಣಬೇಕು ಎಂದಿದ್ದಾರೆ.

ಕೇಂದ್ರ ಹಾಗೂ ಉತ್ತರ ಪ್ರದೇಶದ ರಾಜಕೀಯ ಪಕ್ಷಗಳ ನಡುವೆ ತೀವ್ರ ತಿಕ್ಕಾಟ ನಡೆದು, ಒಬ್ಬರಿಗೊಬ್ಬರು ಕೆಂಡ ಕಾರುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಉತ್ತರ ಪ್ರದೇಶದ ಮಾಜಿ ಸಿಎಂ ಬಿಜೆಪಿ ನಾಯಕರಿಗೆ ಸವಾಲು ಎಸೆದಿದ್ದಾರೆ. ದೇಶದಲ್ಲೇ ಅತಿಹೆಚ್ಚು ಲೋಕಸಭೆ ಕ್ಷೇತ್ರವನ್ನ ಹೊಂದಿರುವುದು ಉತ್ತರ ಪ್ರದೇಶ. ಹೀಗಾಗಿ ಇಲ್ಲಿ ಗೆಲ್ಲುವ ಪಕ್ಷಕ್ಕೆ ಕೇಂದ್ರದ ಅಧಿಕಾರವು ಸುಲಭವಾಗುತ್ತೆ. ಆದರೆ ಈಗ ಸಮಾಜವಾದಿ ಪಕ್ಷದ ವರಿಷ್ಠ ಮತ್ತು ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್‌ ಯಾದವ್ ಬಿಜೆಪಿಗೆ ನೇರವಾಗಿ ಸವಾಲು ಹಾಕಿದ್ದಾರೆ. '80 ಕ್ಷೇತ್ರದಲ್ಲೂ ಸೋಲಿಸಿ ಬಿಜೆಪಿ ತೊಲಗಿಸಿ' ಎಂದು ಹೊಸ ಘೋಷಣೆ ಮೊಳಗಿಸಿದ್ದಾರೆ ಅಖಿಲೇಶ್.

Akhilesh Yadav playing new strategy

ಬಿಜೆಪಿ ಸೋಲಿಗೆ ಸಮಾಜವಾದಿ ಶಪಥ!

ಉತ್ತರ ಪ್ರದೇಶದಲ್ಲಿ ಸತತ 2 ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಲೋಕಸಭೆಗೆ ಸಜ್ಜಾಗಲು ವಿಪಕ್ಷಗಳು ಹೊಂದಾಗಿವೆ. ಈ ಹಿನ್ನೆಲೆಯಲ್ಲಿ ಅಖಿಲೇಶ್ ಸ್ಥಳೀಯ ಮಟ್ಟದಲ್ಲಿ ಮಹತ್ವದ ಸಭೆ ನಡೆಸುತ್ತಿದ್ದಾರೆ. '80 ಕ್ಷೇತ್ರಗಳಲ್ಲೂ ಸೋಲಿಸಿ; ಬಿಜೆಪಿ ತೊಲಗಿಸಿ' ಎಂಬ ಹೊಸ ಘೋಷಣೆ ಹೊರಡಿಸಿದ್ದು, '2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬೇಕು' ಎಂದಿದ್ದಾರೆ ಯುಪಿ ಮಾಜಿ ಸಿಎಂ. ಅಲ್ಲದೆ 'ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ' ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ವರ್ಕೌಟ್ ಆಗುತ್ತಾ ವಿಪಕ್ಷಗಳ ತಂತ್ರ?

ಬಿಜೆಪಿ ವಿರುದ್ಧ ಒಂದಾಗಲು ವಿರೋಧ ಪಕ್ಷಗಳು ಸಭೆ ನಡೆಸಲು ಹಲವು ತಿಂಗಳಿಂದಲೂ ಪ್ಲ್ಯಾನ್ ಮಾಡುತ್ತಿವೆ. ಆದರೆ ಅದು ವರ್ಕೌಟ್ ಆಗುತ್ತಲೇ ಇಲ್ಲ. ಹೀಗೆ ಒಂದು ಸಭೆಗಾಗಿ ಈಗ ಪರದಾಡುತ್ತಿರುವ ವಿರೋಧ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೋದಿ ವಿರುದ್ಧ ಗೆಲುವು ಸಾಧಿಸುತ್ತಾವ? ಎಂಬ ಅನುಮಾನ ಎಲ್ಲೆಲ್ಲೂ ಕಾಡ್ತಿದೆ. ಬಿಜೆಪಿ ಕೂಡ ವಿಪಕ್ಷಗಳ ಎಲ್ಲಾ ನಡೆಯನ್ನ ಅತಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಬೇರೆಯದ್ದೇ ರಣತಂತ್ರ ಹೂಡಲು ಸಜ್ಜಾಗಿದ್ದು, ಇದು ಯಾವ ಮಟ್ಟಿಗೆ ವರ್ಕೌಟ್ ಆಗಬಹುದು? ಅನ್ನೋ ಡೌಟ್ ಕೂಡ ಕಾಡುತ್ತಿದೆ.

Akhilesh Yadav playing new strategy

ಮಾಜಿ ದೋಸ್ತಿಗಳ ಜೊತೆ ಮತ್ತೆ ದೋಸ್ತಿ!

ಇಲ್ಲಿ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಒಂದಾಗುತ್ತಿವೆ. ಆದರೆ ಈ ಸಂದರ್ಭದಲ್ಲೇ ಬಿಜೆಪಿ ಕೂಡ ಅಲರ್ಟ್ ಆಗಿದೆ. ಅದರಲ್ಲೂ ಕರ್ನಾಟಕ ವಿಧಾನಸಭೆಯ ಸೋಲು ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದಂತೆ ಕಾಣುತ್ತಿದೆ. ಎಲ್ಲ ಕಾರಣಕ್ಕೆ ವಿಪಕ್ಷಗಳ ಒಗ್ಗಟ್ಟು ಮುರಿಯಲು ಬಿಜೆಪಿ ಯತ್ನಿಸುತ್ತಿದೆ ಅನ್ನೋ ಆರೋಪವೂ ಕೇಳಿಬಂದಿದೆ. ಅಲ್ಲದೆ ಟಿಡಿಪಿ ಹಾಗೂ ಅಕಾಲಿ ದಳದ ಜೊತೆ ಮೈತ್ರಿಗೆ ಮುಂದಾಗಿದೆ ಎಂಬ ಮಾತು ಕೇಳಿಬಂದಿದೆ. ಹೀಗಾಗಿ ಎಲ್ಲಾ ಬೆಳವಣಿಗೆ ಬಗ್ಗೆ ವಿಪಕ್ಷಗಳ ನಾಯಕರು ಅಲರ್ಟ್ ಆಗಿದ್ದು, ಅಖಿಲೇಶ್ ಯಾದವ್ ಈ ಸಂದರ್ಭದಲ್ಲೇ ಬೇರೆಯದ್ದೇ ತಂತ್ರ ಹೂಡಿರುವಂತೆ ಕಾಣುತ್ತಿದೆ.

ಹೀಗೆ ಲೋಕಸಭೆ ಚುನಾವಣೆಗೆ ಮೊದಲೇ ರಾಜಕೀಯ ಅಖಾಡ ರಂಗೇರಿದೆ. ಅತ್ತ ಗೆಲುವು ಸಾಧಿಸಲು ಕೇಂದ್ರ ಸರ್ಕಾರ ರಣತಂತ್ರ ಹೆಣೆಯುತ್ತಿದ್ದರೆ, ಮೋದಿ ಸರ್ಕಾರಕ್ಕೆ ಈ ಬಾರಿ ಸೋಲಿನ ರುಚಿ ತೋರಿಸಬೇಕು ಅನ್ನೋದೆ ವಿರೋಧ ಪಕ್ಷದ ನಾಯಕರ ಚಾಲೆಂಜ್. ಇದೇ ಕಾರಣಕ್ಕೆ ಅವಧಿ ಪೂರ್ವ ಅಂದರೆ ಲೋಕಸಭೆ ಮತದಾನ ಇದೇ ವರ್ಷದಲ್ಲಿ ನಡೆದು, ಫಲಿತಾಂಶ ಕೂಡ ಹೊರಬೀಳುತ್ತದೆ ಎನ್ನಲಾಗಿದೆ. ಹಾಗೇ ಇನ್ನೊಂದು ಕಡೆ ಈ ಮಾತನ್ನ ತಳ್ಳಿ ಹಾಕಲಾಗಿದೆ. ಅದೆಲ್ಲಾ ಏನೇ ಇರಲಿ, 2024ರ ಚುನಾವಣೆ ಅಖಾಡ ಹಿಂದಿನ ಎಲ್ಲಾ ಚುನಾವಣೆಗಿಂತ ರಂಗೇರುವುದು ಮಾತ್ರ ಗ್ಯಾರಂಟಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+