ಅಪ್ಪನನ್ನೇ ಗೌರವಿಸದವನು ಇನ್ಯಾರನ್ನು ಗೌರವಿಸೋಕೆ ಸಾಧ್ಯ?: ಮುಲಾಯಂ
ಸ್ವಂತ ತಂದೆಯನ್ನೇ ಗೌರವಿಸದ ಮಗ ಇನ್ಯಾರನ್ನು ಗೌರವಿಸುವುದಕ್ಕೆ ಸಾಧ್ಯ? ಎಂದು ತಮ್ಮ ಮಗ ಅಖಿಲೇಶ್ ಯಾದವ್ ಮೇಲಿನ ಅಸಮಾಧಾನವನ್ನು ಮುಲಾಯಂ ಸಿಂಗ್ ಯಾದವ್ ಸಾರ್ವಜನಿಕವಾಗಿಯೇ ಹೊರಹಾಕಿದ್ದಾರೆ.
ಲಕ್ನೊ, ಏಪ್ರಿಲ್ 1: ಸ್ವಂತ ತಂದೆಯನ್ನೇ ಗೌರವಿಸದ ಮಗ ಇನ್ಯಾರನ್ನು ಗೌರವಿಸುವುದಕ್ಕೆ ಸಾಧ್ಯ? ಎಂದು ತಮ್ಮ ಮಗ ಅಖಿಲೇಶ್ ಯಾದವ್ ಮೇಲಿನ ಅಸಮಾಧಾನವನ್ನು ಮುಲಾಯಂ ಸಿಂಗ್ ಯಾದವ್ ಸಾರ್ವಜನಿಕವಾಗಿಯೇ ಹೊರಹಾಕಿದ್ದಾರೆ.[ಪುತ್ರ ವ್ಯಾಮೋಹ ನಿರಂತರ: ನನ್ನ ಮಗನೇ ರಾಜ್ಯದ ಮುಂದಿನ ಸಿಎಂ]
ಉತ್ತರ ಪ್ರದೇಶದ ಮೈನ್ ಪುರಿ ಎಂಬಲ್ಲಿ ನಡೆದ ಸಮಾಜವಾದಿ ಪಕ್ಷದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅವರು, 'ತಮ್ಮ ಮಗನ ಇತ್ತೀಚಿನ ನಡೆಯ ಮೇಲಿನ ಬೇಸರವನ್ನು ಹೊರಹಾಕಿದರು. ನನ್ನ ಮಗನನ್ನು ಉತ್ತರ ಪ್ರದೇಶದಂಥ ದೊಡ್ಡ ರಾಜ್ಯಕ್ಕೆ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಜೀವಂತವಾಗಿರುವ ಯಾವ ತಂದೆ ತಾನೇ ತನ್ನ ಮಗನಿಗಾಗಿ ಇಂಥ ತ್ಯಾಗ ಮಾಡುತ್ತಾನೆ? ಆದರೆ ನಾನು ಈ ಯಾವುದನ್ನೂ ಲೆಕ್ಕಿಸದೆ ನನ್ನ ಮಗನಿಗಾಗಿ ಆ ಸ್ಥಾನವನ್ನು ಬಿಟ್ಟುಕೊಟ್ಟೆ. ಆದರೆ ಅವನು ಮಾಡಿದ್ದೇನು?' ಎಂದು ನೋವಿನಿಂದ ಹೇಳಿದರು.[ತಾವೂ ಮುಳುಗಿ ಎಸ್ಪಿಯನ್ನೂ ಮುಳುಗಿಸಿದ ರಾಹುಲ್!]

'ನನ್ನ ಮಗನಿಂದ ಬೇಸರವಾದಷ್ಟು ನನಗೆ ಬೇರೆ ಯಾರಿಂದಲೂ ಬೇಸರವಾಗಿಲ್ಲ' ಎಂದು ತಮ್ಮ ಅಳಲನ್ನು ಕಾರ್ಯಕರ್ತರೆದುರು ತೋಡಿಕೊಂಡರು. ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯ ಹೀನಾಯ ಸೋಲಿನಲ್ಲೂ ಕುಟುಂಬದ ಈ ಎಲ್ಲ ನಡೆಯ ಪ್ರಭಾವ ಢಾಳಾಗಿ ಕಾಣುತ್ತಿತ್ತು ಎಂಬುದು ಅವರ ಮಾತಿನಿಂದ ಸ್ಫುಟವಾಗಿರುವುದು ಸತ್ಯ.[ಉತ್ತರ ಪ್ರದೇಶ ಮುಖ್ಯಮಂತ್ರಿ ಪಟ್ಟಕ್ಕೆ ಅಖಿಲೇಶ್ ರಾಜಿನಾಮೆ]












Click it and Unblock the Notifications