ಹೊಲ್ಲಾಂಡೆ ಜೊತೆ ಬನಾರಸಿ ಸೀರೆಯುಟ್ಟ ಐಶ್ವರ್ಯಾ ರೈ ಪೋಸ್

Posted By:
Subscribe to Oneindia Kannada

ನವದೆಹಲಿ, ಜ. 27: ಕೆಂಪು ಬಣ್ಣದ ಬನಾರಸಿ ಸೀರೆಯುಟ್ಟು ನಡೆದು ಬಂದ ಒಂದು ಕಾಲದ ಜಗದೇಕ ಸುಂದರಿ ನೋಡಿದ ಫ್ರೆಂಚ್ ಅಧ್ಯಕ್ಷ ಹೊಲ್ಲಾಂಡೆ ಅವರು ವಾಹ್ 'ಬೆಲ್ಲಾ ಡೊನ್ನಾ' (Beautiful women) ಎಂದು ಉದ್ಗರಿಸಿದ್ದರೂ ಅಚ್ಚರಿ ಪಡಬೇಕಾಗಿರಲಿಲ್ಲ. ಭಾರತ ಹಾಗೂ ಫ್ರೆಂಚ್ ಸಂಸ್ಕೃತಿಯ ಸಮಾಗಮ ಔತಣಕೂಟದಲ್ಲಿ ಐಶ್ವರ್ಯ ರೈ ಕಂಡವರು ಬೆರಗಾಗಿದ್ದು ಹೀಗೆ...

ಫ್ರೆಂಚ್ ಅಧ್ಯಕ್ಷ ಹೊಲ್ಲಾಂಡೆ ಅವರ ಜೊತೆ ಐಶ್ವರ್ಯಾ ರೈ ಬಚ್ಚನ್ ಅವರು ಸಿನಿಮಾ, ಕೇನ್ಸ್ ಉತ್ಸವ, ಉಭಯ ದೇಶಗಳ ಸಂಸ್ಕೃತಿ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ಇಬ್ಬರು ಅನೇಕ ವಿಷಯಗಳನ್ನು ಹಂಚಿಕೊಂಡರು. ಔತಣಕೂಟಕ್ಕೆ ಬನ್ನಿ ಎಂದು ಫ್ರೆಂಚ್ ಶಿಷ್ಟಾಚಾರದಂತೆ ಐಶ್ವರ್ಯಾರನ್ನು ಅಧ್ಯಕ್ಷರು ಗೌರವಪೂರ್ವಕವಾಗಿ ಕರೆದೊಯ್ದರು.[ಹೊಲ್ಲಾಂಡೆ ಪ್ರವಾಸ: ಮೊದಲ ದಿನದ ರಸ ನಿಮಿಷಗಳು]

ಫ್ರಾನ್ಸ್ ದೇಶದ ಅತ್ಯುನ್ನತ ನಾಗರಿಕ ಗೌರವ 'ನೈಟ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್' ಪ್ರಶಸ್ತಿಯನ್ನು ಐಶ್ವರ್ಯಾ ರೈ ಬಚ್ಚನ್ ಪಡೆದಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಹೀಗಾಗಿ ಫ್ರಾನ್ಸ್ ದೇಶದ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವ ಐಶ್ವರ್ಯಾ ಅವರು ಉಭಯ ದೇಶದ ಸಾಂಸ್ಕೃತಿಕ ಹಾಗೂ ಸಿನಿಮಾ ರಾಯಭಾರಿಯಾಗಿ ಕಾಣಿಸಿಕೊಂಡರು. ಅಲ್ಲದೆ, ಫ್ರೆಂಚ್ ಕಾಸ್ಮೆಟಿಕ್ ಕಂಪನಿ ಲಾ ಓರಿಯಲ್ ಪ್ಯಾರಿಸ್ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದಾರೆ.

ರಿಪಬ್ಲಿಡ್ ಡೇ ಅತಿಥಿ ಜೊತೆ ಔತಣಕೂಟ

ರಿಪಬ್ಲಿಡ್ ಡೇ ಅತಿಥಿ ಜೊತೆ ಔತಣಕೂಟ

ರಿಪಬ್ಲಿಡ್ ಡೇ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದ ಫ್ರೆಂಚ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲಾಂಡೆ ಅವರು ಮೂರು ದಿನಗಳ ಪ್ರವಾಸ ಮುಗಿಸಿ ಹಿಂತಿರುಗುವುದಕ್ಕೂ ಮುನ್ನ ಔತಣಕೂಟ ಏರ್ಪಡಿಸಲಾಗಿತ್ತು.

ಕೆಂಪು ಬಣ್ಣದ ಬನಾರಸಿ ಸೀರೆಯುಟ್ಟಿದ್ದ ಐಶ್ವರ್ಯಾ

ಕೆಂಪು ಬಣ್ಣದ ಬನಾರಸಿ ಸೀರೆಯುಟ್ಟಿದ್ದ ಐಶ್ವರ್ಯಾ

ಕೆಂಪು ಬಣ್ಣದ ಬನಾರಸಿ ಸೀರೆಯುಟ್ಟಿದ್ದ ನಟಿ ಐಶ್ವರ್ಯಾ ರೈ ಅವರು ಭಾರತ ಹಾಗೂ ಫ್ರಾನ್ಸ್ ನಡುವಿನ ಸಾಂಸ್ಕೃತಿಕ ರಾಯಭಾರಿಯಾಗಿ ಔತಣಕೂಟದಲ್ಲಿ ಕಾಣಿಸಿಕೊಂಡರು.

ಅನೇಕ ವಿಷಯಗಳನ್ನು ಹಂಚಿಕೊಂಡರು

ಅನೇಕ ವಿಷಯಗಳನ್ನು ಹಂಚಿಕೊಂಡರು

ಫ್ರೆಂಚ್ ಅಧ್ಯಕ್ಷ ಹೊಲ್ಲಾಂಡೆ ಅವರ ಜೊತೆ ಐಶ್ವರ್ಯಾ ರೈ ಬಚ್ಚನ್ ಅವರು ಸಿನಿಮಾ, ಕೇನ್ಸ್ ಉತ್ಸವ, ಉಭಯ ದೇಶಗಳ ಸಂಸ್ಕೃತಿ ಹೀಗೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು.

ಹೊಲ್ಲಾಂಡೆ ಔತಣಕೂಟದಲ್ಲಿ ಅತಿಥಿಗಳು

ಹೊಲ್ಲಾಂಡೆ ಔತಣಕೂಟದಲ್ಲಿ ಅತಿಥಿಗಳು

ನಟಿ ಐಶ್ವರ್ಯಾ ರೈ ಬಚ್ಚನ್ ಅಲ್ಲದೆ, ಶೆವಲಿಯರ್ ದಸ್ ಆರ್ಟ್ಸ್ ಎಟ್ ದಸ್ ಲೆಟರ್ಸ್ ಫ್ರಾನ್ಸಿನ ಪ್ರತಿಷ್ಠಿತ ಪ್ರಶಸ್ತಿ ವಿಜೇತೆ ಭಾರತದ ಫ್ಯಾಷನ್ ಡಿಸೈನರ್ ರಿತು ಬೇರಿ ಅವರು ಪ್ರಮುಖ ಅತಿಥಿಯಾಗಿದ್ದರು. ಉಳಿದಂತೆ ಫ್ಯಾಷನ್ ವಿನ್ಯಾಸಗಾರ ಮನೀಷ್ ಅರೋರಾ ಸೇರಿದಂತೆ ಅನೇಕ ಉದ್ಯಮಿಗಳು ಗಣ್ಯರು ಉಪಸ್ಥಿತರಿದ್ದರು.

ಡಿಸೈನರ್ಸ್ ಸ್ವಾತಿ ಹಾಗೂ ಸುನೈನಾ

ಡಿಸೈನರ್ಸ್ ಸ್ವಾತಿ ಹಾಗೂ ಸುನೈನಾ

ಐಶ್ವರ್ಯಾ ರೈ ಅವರು ತಮ್ಮ ಬನಾರಸಿ ಸೀರೆ ವಿನ್ಯಾಸಗಾರ್ತಿಯರಾದ ಸ್ವಾತಿ ಹಾಗೂ ಸುನೈನಾ ಅವರು ಹಾಡಿ ಹೊಗಳಿದರು. ಮಲ್ಬರಿ ರೇಷ್ಮೆ ಹಾಗೂ ಜರಿ ಹಾಗೂ ಬೆಳ್ಳಿ ಮಿಶ್ರಿತ ಚಿನ್ನದ ದಾರಗಳಿರುವ ಈ ಸೀರೆಗೆ ನೈಸರ್ಗಿಕ ಡೈ ಬಳಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Doning a red Banarsi saree, beauty queen and actor Aishwarya Rai looked nothing less than bella donna. Representing the Indian culture and vibrancy, the actress said she had a very "hospitable" experience with the French President Francois Hollande. And they struck a chord immediately.
Please Wait while comments are loading...