ಸರಣಿ ಸಭೆ ನಡೆಸಿದ ಮೋದಿ, ಮೂರು ಸೇನೆಗಳಿಗೆ ಒಂದೇ ಸಂದೇಶ

Recommended Video

      ಮೋದಿ, ಮೂರು ಸೇನೆಗಳಿಗೆ ನೀಡಿದ್ದು ಒಂದೇ ಸಂದೇಶ..!

      ನವದೆಹಲಿ, ಫೆಬ್ರವರಿ 27 : ಪುಲ್ವಮಾ ದಾಳಿ, ಭಾರತದ ವಾಯುಪಡೆಯ ಏರ್ ಸ್ಟ್ರೈಕ್, ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ. ಹಲವಾರು ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸರಣಿ ಸಭೆಗಳನ್ನು ನಡೆಸಿದರು.

      ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿರ್ ಧೋವಲ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಗುಪ್ತಚರ ಇಲಾಖೆ ಅಧಿಕಾರಿಗಳು, ಮೂರು ಸೇನೆಗಳ ಮುಖ್ಯಸ್ಥರ ಜೊತೆ ನರೇಂದ್ರ ಮೋದಿ ಸರಣಿ ಸಭೆಗಳನ್ನು ಮಾಡಿದರು.

      ಎಲ್ಲಾ ಸಭೆಗಳ ತೀರ್ಮಾನ ಒಂದೇ ಆಗಿತ್ತು. ಭೂ, ವಾಯು ಮತ್ತು ನೌಕಾಪಡೆಗೆ ಸಂಪೂರ್ಣ ಸ್ವತಂತ್ರ ನೀಡಲಾಗಿದೆ. ಮುಂದಿನ ನಡೆಗಳ ಬಗ್ಗೆ ಅವರು ತೀರ್ಮಾನವನ್ನು ಕೈಗೊಳ್ಳಬಹುದು. ಸರಿಯಾದ ಸಮಯದಲ್ಲಿ ತಕ್ಕ ಉತ್ತರ ನೀಡಬೇಕು.

      Narendra Modi

      ಬುಧವಾರ ಬೆಳಗ್ಗೆಯಿಂದ ಹಲವಾರು ಬೆಳವಣಿಗೆಗಳು ನಡೆದವು. ಪಾಕಿಸ್ತಾನದ ವಿಮಾನಗಳು ಭಾರತವನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಲು ಮುಂದಾಗಿದ್ದವು. ಪಾಕಿಸ್ತಾನದ ವಿಮಾನಗಳನ್ನು ಹಿಮ್ಮೆಟ್ಟಿಸಲು ಶ್ರೀನಗರದ ವಾಯುನೆಲೆಯಿಂದ 6 ಮಿಗ್ 21 ವಿಮಾನಗಳನ್ನು ಕಳುಹಿಸಲಾಗಿತ್ತು.

      ಆದರೆ, 5 ವಿಮಾನಗಳು ಮಾತ್ರ ವಾಪಸ್ ಆದವು. ಒಂದು ವಿಮಾನ ಕಳೆದುಕೊಳ್ಳಲಾಯಿತು. ಭಾರತದ ವಾಯುಪಡೆಯ ಪೈಲೆಟ್‌ ಅನ್ನು ಪಾಕಿಸ್ತಾನ ವಶಕ್ಕೆ ಪಡೆಯಿತು. ಪಾಕಿಸ್ತಾನದ ಎಫ್ -16 ವಿಮಾನವನ್ನು ಭಾರತ ಹೊಡೆದುರುಳಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+