Get Updates
Get notified of breaking news, exclusive insights, and must-see stories!

ದೆಹಲಿ: ಗಾಳಿ ಗುಣಮಟ್ಟ ಹದಗೆಡುವ ಸಾಧ್ಯತೆ: ನಿರ್ಮಾಣ, ಕೈಗಾರಿಕಾ ಕೆಲಸಗಳಿಗೆ ನಿರ್ಬಂಧ

ನವದೆಹಲಿ, ಡಿ. 30: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುವ ಸಾಧ್ಯತೆಯಿರುವ ಕಾರಣ ಶುಕ್ರವಾರ ನಿರ್ಮಾಣ, ಕೈಗಾರಿಕಾ ಕೆಲಸಗಳಿಗೆ ನಿರ್ಬಂಧ ಹೇರಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಹದಗೆಡಬಹುದು ಎಂದು ಕೇಂದ್ರದ ವಾಯು ಗುಣಮಟ್ಟ ಸಮಿತಿಯು ಶುಕ್ರವಾರ ಗ್ರೇಡೆಡ್ ಆಕ್ಷನ್ ರೆಸ್ಪಾನ್ಸ್ ಪ್ಲಾನ್ (GRAP) ಯ 3 ನೇ ಹಂತದ ಅಡಿಯಲ್ಲಿ ನಿರ್ಬಂಧಗಳನ್ನು ಜಾರಿಗೆ ತಂದಿದೆ. ದೆಹಲಿ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳಲ್ಲಿನ ಗಾಳಿಯ ಗುಣಮಟ್ಟವನ್ನು 'ತೀವ್ರ' (Severe) ವರ್ಗಕ್ಕೆ ಸೇರಿಸಲಾಗಿದೆ.

ಶುಕ್ರವಾರ ನಡೆದ ಸಭೆಯಲ್ಲಿ, ಕೇಂದ್ರದ ವಾಯು ಗುಣಮಟ್ಟ ಸಮಿತಿಯು ರಾಷ್ಟ್ರ ರಾಜಧಾನಿಯಲ್ಲಿನ ಪರಿಸ್ಥಿತಿ ಮತ್ತು ಹವಾಮಾನ ಇಲಾಖೆ ಮತ್ತು ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕದ ಮುನ್ಸೂಚನೆಗಳನ್ನು ಮೌಲ್ಯಮಾಪನ ಮಾಡಿದೆ.

Air Quality Likely To Worsen in New Delhi: Curbs On Construction and Industrial Work

ಗ್ರೇಡೆಡ್ ಆಕ್ಷನ್ ರೆಸ್ಪಾನ್ಸ್ ಪ್ಲಾನ್‌ನ ಹಂತ 3 ರ ಅಡಿಯಲ್ಲಿ ಎಲ್ಲಾ ನಿರ್ಬಂಧಗಳು, ಕ್ರಮಗಳನ್ನು ತಕ್ಷಣವೇ ಜಾರಿಗೆ ತರಲಾಗುವುದು. ಅಗತ್ಯ ಯೋಜನೆಗಳನ್ನು ಹೊರತುಪಡಿಸಿ ಇಡೀ ದೆಹಲಿ - ಎನ್‌ಸಿಆರ್ ಪ್ರದೇಶದಲ್ಲಿ ನಿರ್ಮಾಣ ಮತ್ತು ಕಟ್ಟಡ ನೆಲಸಮ ಮಾಡುವ ಚಟುವಟಿಕೆಯ ಮೇಲೆ ನಿಷೇಧ ಹೇರಲಾಗಿದೆ.

ಈ ಪ್ರದೇಶಗಗಳಿಗೆ ಅನುಮೋದಿತ ಇಂಧನಗಳ ಪ್ರಮಾಣಿತ ಪಟ್ಟಿಯಲ್ಲಿರುವಂತೆ ಇಂಧನಗಳ ಮೇಲೆ ಕಾರ್ಯನಿರ್ವಹಿಸದ ಕೈಗಾರಿಕಾ ಕಾರ್ಯಾಚರಣೆಗಳ ಮೇಲೆಯೂ ನಿಷೇಧ ಹಾಕಲಾಗಿದೆ.

ಇಟ್ಟಿಗೆ ಗೂಡುಗಳು, ದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಅನುಮೋದಿಸದ ಇಂಧನಗಳನ್ನು ಬಳಸಿ ಕಾರ್ಯನಿರ್ವಹಿಸುವ ಘಟಕಗಳು ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಗುತ್ತದೆ. ಕಲ್ಲು ಕ್ರಷರ್‌ಗಳು, ಗಣಿಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಸಹ ನಿಷೇಧಿಸಲಾಗುವುದು.

ಇನ್ನು, ರಾಜ್ಯ ಸರ್ಕಾರಗಳು ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲೆ ನಿರ್ಬಂಧಗಳನ್ನು ವಿಧಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+