ಮೋದಿ, ಸಲ್ಮಾನ್ ವಿರುದ್ದ ವಿಷ ಕಕ್ಕಿದ ಅಸಾವುದ್ದೀನ್ ಓವೈಸಿ

ಹೈದರಾಬಾದ್, ಜ 24: ಹಿಂದೂಗಳು, ಹಿಂದೂಗಳ ಭಾವನೆ ಮತ್ತು ಸಂಪ್ರದಾಯಗಳ ಬಗ್ಗೆ ಹೈದರಾಬಾದ್ ಸಂಸದ ಅಸಾವುದ್ದೀನ್ ಓವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ಓವೈಸಿ ಈ ಹಿಂದೆ ಕೂಡಾ ವಿಷಕಾರುವ ಭಾಷಣವನ್ನು ಮಾಡಿದ್ದರು. ಈಗ ಮತ್ತೆ ಅಸಾವುದ್ದೀನ್ ಓವೈಸಿ ಮತ್ತೊಂದು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು 'ಹರಾಮಿ' ಎಂದು ಸಂಭೋದಿಸಿರುವ ಓವೈಸಿ, ಮೋದಿ, ಮೋದಿಯನ್ನು ಬೆಂಬಲಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಯೋಗಗುರು ಬಾಬಾ ರಾಮ್ ದೇವ್ ಅವರ ವಿರುದ್ದ ವಾಮಾಗೋಚರವಾಗಿ ಏಕವಚನದಲ್ಲಿ ಹರಿಹಾಯ್ದಿದಿದ್ದಾರೆ.

ಆಲ್ ಇಂಡಿಯಾ ಮಜೀಸ್ - ಇ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸಂಘಟನೆಯ ಅಧ್ಯಕ್ಷರಾಗಿರುವ ಓವೈಸಿ, ದೇಶದಲ್ಲಿರುವ 25 ಕೋಟಿ ಮುಸ್ಲಿಮರು ಎಂದೂ ನರೇಂದ್ರ ಮೋದಿಯನ್ನು ಪ್ರಧಾನಿ ಸ್ಥಾನದಲ್ಲಿ ನೋಡಲು ಬಯಸುವುದಿಲ್ಲ ಮತ್ತು ಆತನ ಪರವಾಗಿ ಮತ ಚಲಾಯಿಸುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. (ಓವೈಸಿಗೆ ತಾಲಿಬಾನ್ ಜತೆ Hotline ಬೇಕಂತೆ)

ಮೋಹನ್ ದಾಸ್ ಕರಂಚಂದ್ ಗಾಂಧಿಯನ್ನು ಮೋಹನ್ ಲಾಲ್ ಕರಂಚಂದ್ ಗಾಂಧಿ, ಶ್ಯಾಂ ಪ್ರಕಾಶ್ ಮುಖರ್ಜಿ ಅವರನ್ನು ಶ್ಯಾಂ ಲಾಲ್ ಮುಖರ್ಜಿ ಎಂದು ಕರೆಯುವ ಮೋದಿಗೆ ದೇಶದ ಪ್ರಧಾನಿಯಾಗುವ ಯೋಗ್ಯತೆ ಇದೆಯೇ ಎಂದು ಓವೈಸಿ ಪ್ರಶ್ನಿಸಿದ್ದಾರೆ.

ಹಳೇ ಹೈದರಾಬಾದ್ ಭಾಗದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಓವೈಸಿ, ನಮ್ಮ ಸಮುದಾಯದ ಒಂದು ಮಗು, ಒಂದು ಹೆಣ್ಣುಮಗು ಮೋದಿಯ ಮುಂದೆ ನಿಂತು ನೀನು ಪಾತಕಿ ಎಂದು ಜರಿಯುವ ದಿನ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ. (ಹಿಂದೂ ಅವಹೇಳನಕಾರಿ ಭಾಷಣ, ಓವೈಸಿ ಮೇಲೆ ಕೇಸ್)

ಭಾಷಣದುದ್ದಕ್ಕೂ ಜಲೀಲ್, ಗಂಧೇ, ಮುಜ್ರಿಕ್ , ಜಾಲಿಂ ಎನ್ನುವ ಉರ್ದು ಪದಗಳನ್ನು ಬಳಸುತ್ತಾ ಓವೈಸಿ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದರು. ಜನರ ಮುಂದೆ ಡ್ಯಾನ್ಸ್ ಮಾಡುವ, ಹಾಡು ಹೇಳುವ ಸಲ್ಮಾನ್ ಖಾನ್ ಅಂಥವನೇ ಆ ಮೋದಿಗೂ ಬೇಕು ಎಂದು ಓವೈಸಿ ತುಂಬಿದ ಸಭೆಯಲ್ಲಿ ಹೇಳಿದ್ದಾರೆ.

ಸಲ್ಮಾನ್ , ರಾಮ್ ದೇವ್ ವಿರುದ್ದ ಓವೈಸಿ ಭಾಷಣದ ತುಣುಕು ಸ್ಲೈಡಿನಲ್ಲಿ

ಸಲ್ಮಾನ್ ಎಂದು ಹೆಸರಿಟ್ಟರೆ ಎಲ್ಲರೂ ಸಲ್ಮಾನ್ ಆಗುವುದಿಲ್ಲ

ಸಲ್ಮಾನ್ ಎಂದು ಹೆಸರಿಟ್ಟರೆ ಎಲ್ಲರೂ ಸಲ್ಮಾನ್ ಆಗುವುದಿಲ್ಲ

ಸಲ್ಮಾನ್ ಎಂದು ಹೆಸರಿಟ್ಟರೆ ಎಲ್ಲರೂ ಸಲ್ಮಾನ್ ಆಗಲು ಸಾಧ್ಯವಿಲ್ಲ. ನಮ್ಮಲ್ಲೂ ಸಲ್ಮಾನ್ ರಶ್ದಿ ಇದ್ದಾರೆ. ಜನರ ಮುಂದೆ ಕುಣಿಯುವ, ಹಾಡುವ ವ್ಯಕ್ತಿ ಮಾತ್ರ ಮೋದಿಯನ್ನು ಹೀರೋ ಅನ್ನಬಲ್ಲ.

ಸಲ್ಮಾನ್ ಚಿತ್ರವನ್ನು ಯಾರೂ ನೋಡಬೇಡಿ

ಸಲ್ಮಾನ್ ಚಿತ್ರವನ್ನು ಯಾರೂ ನೋಡಬೇಡಿ

ಇಂಥವನ ಚಿತ್ರವನ್ನು ಟಿಕೆಟ್ ಕೊಟ್ಟು ವೀಕ್ಷಿಸಬೇಕಾ? ಶುಕ್ರವಾರ (ಜ 24) ಬಿಡುಗಡೆಯಾಗುವ ಇವನ ಅಭಿನಯದ 'ಜೈ ಹೋ' ಚಿತ್ರವನ್ನು ಯಾರೂ ನಮ್ಮ ಭಾಂದವರು ನೋಡಬಾರದು ಎಂದು ಓವೈಸಿ ಫರ್ಮಾನು.

ಸಲ್ಮಾನ್ ಖಾನ್ ಯಾಕೆ ಹುಟ್ಟಿದರೋ

ಸಲ್ಮಾನ್ ಖಾನ್ ಯಾಕೆ ಹುಟ್ಟಿದರೋ

ಗೋಧ್ರಾ ಘಟನೆಯಲ್ಲಿ ಸಾವಿರಾರು ನಮ್ಮ ಸಮುದಾಯದವರು ಸಾವನ್ನಪ್ಪಿದರು. ಅದಕ್ಕೆ ಕಾರಣ ಯಾರೆಂದು ಈ ಜಗತ್ತಿಗೇ ಗೊತ್ತು. ಇಂಥಹ ವ್ಯಕ್ತಿತ್ವದ politicians ಜೊತೆ ಸಲ್ಮಾನ್ ಖಾನ್ ಗುರುತಿಸಿ ಕೊಳ್ಳುತ್ತಾನೆ. ಕೆಲವೊಮ್ಮೆ ನನಗೆ ಅನಿಸುತ್ತೆ, ಇಂಥವರು ಯಾಕೆ ಈ ಭೂಮಿ ಮೇಲೆ ಹುಟ್ಟಿದರೋ ಎಂದು.

ರಾಮ್ ದೇವ್ ಯೋಗ ಗುರು ಅಲ್ಲ

ರಾಮ್ ದೇವ್ ಯೋಗ ಗುರು ಅಲ್ಲ

ಮೂಗು ಬಂದ್ ಮಾಡಿಕೊಂಡು ಶ್ವಾಸ ಮೇಲೆ ಕೆಳಗೆ ಮಾಡುವ ಬಾಬಾ ರಾಮ್ ದೇವ್ ಕೂಡಾ ಆದಾಯ ತೆರಿಗೆಯ ಬಗ್ಗೆ ಮಾತನಾಡುತ್ತಾನೆ. ಆತ ಯೋಗ ಗುರುವಲ್ಲ, ಚಾರ್ಟೆಡ್ ಅಕೌಟೆಂಟ್ ಆಗೋಕೆ ಲಾಯಕ್.

ಹಿಂದೂಗಳೇ ಭಾರತಕ್ಕೆ ನಿಮ್ಮ ಕೊಡುಗೆ ಏನು?

ಹಿಂದೂಗಳೇ ಭಾರತಕ್ಕೆ ನಿಮ್ಮ ಕೊಡುಗೆ ಏನು?


ಬಹುಸಂಖ್ಯಾತರಾದ ನೀವು ಭಾರತಕ್ಕೆ ಏನು ಮಾಡಿದ್ದೀರಿ? ಹಿಂದೂಸ್ತಾನಕ್ಕೆ ನಿಮ್ಮ ಕೊಡುಗೆಯೇನು? ಕೊಡುಗೆ ಏನಿದ್ದರೂ ನಮ್ಮವರದ್ದೇ. ಇಂದು ಭಾರತದಲ್ಲಿರುವುದೆಲ್ಲಾ ನಮ್ಮ ಗುರುತುಗಳು, ನಮ್ಮವರು ಕಟ್ಟಿಸಿದ್ದು. ಎತ್ತರದ ಕುತುಬ್ ಮಿನಾರ್, ಸುಂದರ ತಾಜ್ ಮಹಲ್, ಐತಿಹಾಸಿಕ ಕೆಂಪು ಕೋಟೆ, ಹೈದಾರಾಬಾದಿನ ಚಾರ್ಮಿನಾರ್ ಯಾರು ಕಟ್ಟಿದ್ದು? ಎಲ್ಲವನ್ನೂ ನಮ್ಮವರೇ ಕಟ್ಟಿದ್ದು ಎಂದು ಇವರ ಸಹೋದರ ಅಕ್ಬರುದ್ದೀನ್ ಓವೈಸಿ ಈ ಹಿಂದೆ ಹೇಳಿಕೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+