Banking Time: ಬ್ಯಾಂಕಿಂಗ್ ಅವಧಿಯಲ್ಲಿ ಮಹತ್ವದ ಬದಲಾವಣೆ! ಗ್ರಾಹಕರೇ ಇಲ್ಲಿ ಗಮನಿಸಿ
ಬ್ಯಾಂಕ್ ಉದ್ಯೋಗಿಗಳು ಬೃಹತ್ ಮುಷ್ಕರಕ್ಕೆ ಸಜ್ಜಾಗುತ್ತಿರುವ ಸಮಯದಲ್ಲೇ ಮತ್ತೊಂದು ಆಘಾತ ಎದುರಾಗಿದೆ. ಬ್ಯಾಂಕಿಂಗ್ ಕೆಲಸದ ಸಮಯದಲ್ಲಿ ಭಾರಿ ಬದಲಾವಣೆ ಮಾಡಲು ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಿಗಳು ಮುಂದಾಗಿದ್ದಾರೆ. ಅಕ್ಟೋಬರ್ 1ರಿಂದಲೇ ಈ ಹೊಸ ನಿಯಮ ಜಾರಿಗೆ ತರಲು ಸ್ವತಃ ಬ್ಯಾಂಕಿಂಗ್ ಉದ್ಯೋಗಿಗಳ ಸಂಘಟನೆ ಮುಂದಾಗಿದೆ. ಈ ನಿರ್ಧಾರ ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರಬಹುದು?
ಅಂದಹಾಗೆ ಬ್ಯಾಂಕ್‌ಗಳಲ್ಲಿ ಸಾಕಷ್ಟು ಸಂಖ್ಯೆಯ ಉದ್ಯೋಗಿಗಳನ್ನು ನೇಮಿಸಲು ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಮುಷ್ಕರಕ್ಕೆ ಸಿದ್ಧತೆ ನಡೆಸಿದೆ. ಇದೇ ಸಂದರ್ಭದಲ್ಲಿ ತಮ್ಮ ಮೇಲೆ ಅನಗತ್ಯ ಹೊರೆ ಹಾಕುತ್ತಿರುವುದಾಗಿ ಆರೋಪ ಮಾಡಿರುವ 'ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ' ನಾಳೆಯಿಂದಲೇ ಜಾರಿಗೆ ಬರುವಂತೆ ಬ್ಯಾಂಕಿಂಗ್ ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಹಾಗಾದರೆ ಇನ್ನುಮುಂದೆ ಬ್ಯಾಂಕ್ ಅವಧಿ ಕೂಡ ಬದಲಾಗುತ್ತಾ?

ಬ್ಯಾಂಕ್ ಉದ್ಯೋಗಿಗಳ ಸಂಘ ಹೇಳಿದ್ದೇನು?
ಅಷ್ಟಕ್ಕೂ ದೇಶದ ಬ್ಯಾಂಕ್‌ಗಳಲ್ಲಿ ಉದ್ಯೋಗಿಗಳ ಕೊರತೆ ತೀವ್ರವಾಗಿದ್ದು ಇದರಿಂದ ತಮ್ಮ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂಬ ಆಕ್ರೋಶ ಮೊದಲಿನಿಂದಲೂ ಇತ್ತು. ಹೀಗಾಗಿ ಖಾಲಿ ಇರುವ ಹುದ್ದೆಗಳ ಭರ್ತಿಗೆ, ಬ್ಯಾಂಕ್ ಉದ್ಯೋಗಿಗಳು ಒತ್ತಾಯ ಮಾಡುತ್ತಿದ್ದರು. ಇದೆಲ್ಲಾ ವರ್ಕೌಟ್ ಆಗುತ್ತಿಲ್ಲ ಎಂಬುದನ್ನು ಅರಿತು ರೊಚ್ಚಿಗೆದ್ದಿರುವ ಬ್ಯಾಂಕಿಂಗ್ ನೌಕರರು, ಈಗ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಹೀಗೆ ನಾಳೆಯಿಂದ ನಿಗದಿಗಿಂತ ಹೆಚ್ಚಿನ ಸಮಯ ಬ್ಯಾಂಕ್‌ನಲ್ಲಿ ಕೆಲಸ ಮಾಡಲ್ಲ ಅಂತಾ ಬ್ಯಾಂಕ್ ಉದ್ಯೋಗಿಗಳು ಹಠ ಹಿಡಿದಿದ್ದಾರೆ.
ಬ್ಯಾಂಕಿಂಗ್ ಟೈಮಿಂಗ್ ಬದಲಾವಣೆ?
ಈಗ 'ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ' ನೀಡಿರುವ ಸುತ್ತೋಲೆಯ ಪ್ರಕಾರ, ಅನೇಕ ಬ್ಯಾಂಕ್ ಶಾಖೆಗಳಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಕಾರಣ ನೌಕರರು ಸಾಮಾನ್ಯವಾದ ಕಚೇರಿ ಸಮಯ ಮೀರಿ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆ ಸೂಕ್ತವಾಗಿ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯ ಮಾಡುತ್ತಿದ್ರೂ, ಬ್ಯಾಂಕ್ ಆಡಳಿತ ಮಂಡಳಿಗಳು ಮುಂದೆ ಬರದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ. ಹಾಗೇ ಹೆಚ್ಚಿನ ಕೆಲಸದ ಹೊರೆಯು ಈಗ ಇರುವ ಉದ್ಯೋಗಿಗಳ ಮೇಲೆಯೇ ಬೀಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಬೆಳಗ್ಗೆ 9.45 ರಿಂದ ಸಂಜೆ 4.45!
ಹೀಗೆ ಬ್ಯಾಂಕ್ ನೌಕರರ ಮೇಲೆ ಹೊರೆ ಬೀಳುತ್ತಿರುವ ಕಾರಣ ಬ್ಯಾಂಕ್‌ಗಳಲ್ಲಿ ಈಗ ಖಾಲಿ ಇರುವ ಸ್ಥಾನಗಳ ನೇಮಕಾತಿಗೆ ಒತ್ತಾಯಿಸಿ, ಅಕ್ಟೋಬರ್ 1, 2023 ಅಂದ್ರೆ ನಾಳೆಯಿಂದ ಜಾರಿಗೆ ಬರುವಂತೆ ಬ್ಯಾಂಕ್ ಉದ್ಯೋಗಿಗಳು ಕಚೇರಿಯ ಅವಧಿ ಮೀರಿ ಕೆಲಸ ಮಾಡದಂತೆ ಕರೆ ನೀಡಲಾಗಿದೆ. ಆ ಪ್ರಕಾರ ಎಐಬಿಇಎ ಎಲ್ಲಾ ಸದಸ್ಯರಿಗೆ ನಿಯಮಿತ ಕಚೇರಿ ಸಮಯ ಅಂದ್ರೆ ಬೆಳಗ್ಗೆ 9.45 ರಿಂದ ಸಂಜೆ 4.45 ಮೀರಿ ಕೆಲಸ ಮಾಡದಂತೆ ಕರೆ ನೀಡಲಾಗಿದೆ.
ಗ್ರಾಹಕರ ಮೇಲೆ ಯಾವ ರೀತಿ ಪರಿಣಾಮ?
ಹಾಗೇ ಈ ವಿಚಾರವಾಗಿ ಕೈಗೊಂಡಿರುವ ನಿರ್ಧಾರವನ್ನ ಎಲ್ಲಾ ಸಂಘಗಳು ಎಲ್ಲಾ ಶಾಖೆಗಳ ಎಲ್ಲಾ ಸದಸ್ಯರಿಗೆ ತಿಳಿಸಬೇಕು. ಮತ್ತು ಇದರಿಂದ ಎಲ್ಲಾ ಶಾಖೆಗಳು & ಸದಸ್ಯರು ಈ ನಿರ್ಧಾರ ಕಾರ್ಯಗತಗೊಳಿಸಬೇಕು ಎಂದು ತಿಳಿಸಲಾಗಿದೆ. ಹೀಗೆ ನಾಳೆಯಿಂದ ಅನ್ವಯ ಆಗುವಂತೆ ಬ್ಯಾಂಕಿಂಗ್ ಕೆಲಸದ ಸಮಯದಲ್ಲೂ ನೌಕರರು ದೊಡ್ಡ ಬದಲಾವಣೆಗೆ ಮುಂದಾಗಿದ್ದಾರೆ. ಆದರೆ ಬ್ಯಾಂಕ್ ಅವಧಿಯು ಈಗಿರುವಂತೆ ಮುಂದುವರಿಯಲಿದೆ. ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರದಿದ್ದರೂ ಪರೋಕ್ಷವಾಗಿ ಇದು ಸಮಸ್ಯೆ ಉಂಟು ಮಾಡಲಿದೆ.
ಒಟ್ನಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಪಕ್ಕಾ ಆಗಿದೆ. ಅದರಲ್ಲೂ ಇಷ್ಟು ದಿನ ತಮ್ಮ ಬೇಡಿಕೆ ಈಡೇರಿಸುವಂತೆ ಬ್ಯಾಂಕ್ ಉದ್ಯೋಗಿಗಳು ಮಾಡಿಕೊಂಡ ಮನವಿಯು ವರ್ಕೌಟ್ ಆಗಿಲ್ಲ. ಹೀಗಾಗಿ ಕಠಿಣ ಹಾದಿ ತುಳಿಯಲು ಬ್ಯಾಂಕ್ ನೌಕರರು ಮುಂದಾಗಿದ್ದು ಇದರಿಂದ ಗ್ರಾಹಕರು ಸಮಸ್ಯೆ ಎದುರಿಸುವುದು ಬಹುತೇಕ ಗ್ಯಾರಂಟಿ. ಆದರೆ ಅಷ್ಟರಲ್ಲೇ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರು ಮುಂದೆ ಬರಬೇಕಿದೆ.












Click it and Unblock the Notifications