ಮಾಜಿ ಮುಖ್ಯಮಂತ್ರಿ ಸೇರಿ 242 ಜನರನ್ನು ಬಲಿ ಪಡೆದ ಭೀಕರ ವಿಮಾನ ದುರಂತ... Ahmedabad Plane Crash
ಭಾರತೀಯರಿಗೆ ಇಂದಿನ ದಿನ ಕರಾಳ ದಿನ... ಜೂನ್ 12 ಇನ್ನು ಮುಂದೆ ಕರಾಳ ನೆನಪುಗಳನ್ನು ಕಣ್ಣ ಮುಂದೆ ತರಿಸಲಿದೆ. ಯಾಕಂದ್ರೆ 242 ಜನರು ಪ್ರಯಾಣ ಮಾಡುತ್ತಿದ್ದ ಏರ್ ಇಂಡಿಯಾ ವಿಮಾನ ಭೀಕರ ದುರಂತಕ್ಕೆ ತುತ್ತಾಗಿದೆ. ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ಏರ್ಪೋರ್ಟ್ ಸಮೀಪದಲ್ಲೇ ಏರ್ ಇಂಡಿಯಾ ವಿಮಾನ ಭೀಕರ ಅಪಘಾತಕ್ಕೆ ಛಿದ್ರ & ಛಿದ್ರವಾಗಿ ಹೋಗಿದೆ. ಅಲ್ಲದೆ ಈ ದುರಂತದಲ್ಲಿ ಮಾಜಿ ಮುಖ್ಯಮಂತ್ರಿ ಕೂಡ ಬಲಿಯಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಇದೀಗ ಹೊರಬಿದ್ದಿದೆ.
ಭಾರತದಲ್ಲಿ ಸಂಭವಿಸಿದ ಅತಿ ಘೋರ ವಿಮಾನ ದುರಂತಗಳ ಸಾಲಿಗೆ ಇಂದು ಮತ್ತೊಂದು ದುರಂತ ಸೇರ್ಪಡೆ ಆಗಿದೆ. ಲಂಡನ್ ಕಡೆ ಪ್ರಯಾಣ ಬೆಳೆಸುವ ವಿಮಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಅಗತ್ಯತೆ ಇರುತ್ತದೆ, ಹೀಗಾಗಿ ಸುಮಾರು 58,000 ಲೀಟರ್ ಪೆಟ್ರೋಲ್ ತುಂಬಿಸಲಾಗಿತ್ತು. ಆದರೆ ಇಷ್ಟೊಂದು ಭಾರಿ ಪ್ರಮಾಣದಲ್ಲಿ ವೈಟ್ ಪೆಟ್ರೋಲ್ ಅಥವಾ ಶ್ವೇತ ಇಂಧನ ತುಂಬಿಸಿದ್ದ ಏರ್ ಇಂಡಿಯಾದ ಲಂಡನ್ ವಿಮಾನ ಕೆಳಗೆ ಬಿದ್ದು ಬ್ಲಾಸ್ಟ್ ಆಗಿದೆ. ಇದೇ ವಿಮಾನದಲ್ಲಿಯೇ ಗುಜರಾತ್ ರಾಜ್ಯದ ಮಾಜಿ ಮುಖ್ಯಮಂತ್ರಿ ಕೂಡ ಪ್ರಯಾಣ ಮಾಡುತ್ತಿದ್ದರು.

ಮಾಜಿ ಮುಖ್ಯಮಂತ್ರಿ ಸೇರಿ 242 ಜನ...
ವಿಮಾನ ಪ್ರಯಾಣ ಅಪಾಯಕಾರಿ ಅನ್ನೋ ಆರೋಪವು ಪದೇ ಪದೇ ಕೇಳಿ ಬರುತ್ತಲೇ ಇರುತ್ತದೆ. ಆದರೆ, ಅತಿ ವೇಗವಾಗಿ & ಬೇಗ ಹೋಗಲು ವಿಮಾನ ಪ್ರಯಾಣವನ್ನೇ ಜನರು ಬಳಕೆ ಮಾಡುತ್ತಾರೆ. ಅದರಲ್ಲೂ ಶ್ರೀಮಂತರು ವಿಮಾನ ಪ್ರಯಾಣಕ್ಕೆ ಒತ್ತು ನೀಡುತ್ತಾರೆ. ಅದೇ ರೀತಿಯಾಗಿ ಗುಜರಾತ್ ರಾಜ್ಯದ ಮಾಜಿ ಮುಖ್ಯಮಂತ್ರಿ ವಿಜಯ್ ರುಪಾನಿ ಕೂಡ ಇಂದು ತಮ್ಮ ಮಗಳನ್ನು ನೋಡಲು ಲಂಡನ್ ವಿಮಾನ ಹತ್ತಿದ್ದರು. ಆದರೆ ಈ ಸಮಯದಲ್ಲಿ ಘೋರ ದುರಂತ ಸಂಭವಿಸಿದ್ದು, ಟೇಕ್ ಆಫ್ ಆದ ಕೆಲವೇ ಕೆಲವು ಸಮಯದಲ್ಲಿ ಏರ್ ಇಂಡಿಯಾದ ಲಂಡನ್ ವಿಮಾನ ನೆಲಕ್ಕೆ ಅಪ್ಪಳಿಸಿದೆ.
ಏನಿದು ಘೋರ ದುರಂತ ದೇವರೇ...
ವಿಮಾನದಲ್ಲಿ ಇದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯದ ಮಾಜಿ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು ಕೂಡ ದುರಂತಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಈ ಭೀಕರ ದುರಂತ ಕಂಡು ಇಡೀ ಜಗತ್ತಿಗೆ ಜಗತ್ತೇ ನಲುಗಿ ಹೋಗುವಂತೆ ಆಗಿದೆ. ಯಾಕಂದ್ರೆ ಅತಿದೊಡ್ಡ ವಿಮಾನ, ವೈದ್ಯಕೀಯ ಕಾಲೇಜಿನ ಮೇಲೆ ಬಿದ್ದ ಹಿನ್ನೆಲೆ ಹತ್ತಾರು ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಜೀವ ಬಿಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಎಲ್ಲಾ ಸ್ಪಷ್ಟನೆಗಳಿಗೆ ಇನ್ನಷ್ಟೇ ಕಾದು ನೋಡಬೇಕಿದೆ, ಆದರೆ ಇಂತಹದ್ದೊಂದು ದುರಂತದ ಕಹಿ ನೆನಪನ್ನು ಇಡೀ ಭಾರತ & ಶತಕೋಟಿ ಭಾರತೀಯರು ಎಂದಿಗೂ ಮರೆಯುವುದಿಲ್ಲ ಅನ್ನೋದು ಕಟು ಸತ್ಯ...












Click it and Unblock the Notifications