ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಭೇಟಿಗೂ ಮುನ್ನ ಪುದುಚೇರಿ ಕ್ಯಾಬಿನೆಟ್ ವಿಸರ್ಜನೆಯತ್ತ!

|
Google Oneindia Kannada News

ಪುದುಚೇರಿ, ಫೆ.16: ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗಿರುವ ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭೇಟಿ ನೀಡುತ್ತಿದ್ದಾರೆ. ರಾಹುಲ್ ಭೇಟಿಗೂ ಮುನ್ನ ನಾಲ್ವರು ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಪುದುಚೇರಿ ಕ್ಯಾಬಿನೆಟ್ ವಿಸರ್ಜನೆಯಾಗುವ ಹಾದಿಯಲ್ಲಿದೆ.

ಮಂಗಳವಾರದಂದು ಕಾಂಗ್ರೆಸ್ ಶಾಸಕ ಎ ಜಾನ್ ಕುಮಾರ್ ಅವರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹಾಲಿ ಕಾಂಗ್ರೆಸ್ ಆಡಳಿತದಿಂದ ಬೇಸತ್ತು ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ. ಕಾಮರಾಜ್ ನಗರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಜಾನ್ ಕುಮಾರ್ ಅವರು ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದು, ರಾಹುಲ್ ಗಾಂಧಿ ಆಗಮನಕ್ಕೂ ಮುನ್ನವೆ ರಾಜೀನಾಮೆ ನೀಡಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಪುದುಚೇರಿ ವಿಧಾನಸಭೆ ಬಲಾಬಲದಲ್ಲಿ ಕಾಂಗ್ರೆಸ್ ಬಲ 30 ರಿಂದ 10ಕ್ಕೆ ಕುಸಿದಿದೆ. ಪುದುಚೇರಿ ಆರೋಗ್ಯ ಸಚಿವ ಮಲ್ಲಾಡಿ ಕೃಷ್ಣರಾವ್ ಅವರು ಕ್ಯಾಬಿನೆಟ್ ತೊರೆದಿದ್ದಾರೆ. ಇವರಿಗೂ ಮುನ್ನ ಲೋಕೋಪಯೋಗಿ ಸಚಿವ ಎ ನಮಶಿವಯಂ ರಾಜೀನಾಮೆ ಸಲ್ಲಿಸಿದ್ದರು. ಅವರನ್ನು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಯಾಗಿದ್ದಾರೆಂದು ಅಮಾನತು ಮಾಡಲಾಯಿತು.

Ahead of Rahul Gandhis visit, 4 cong MLAs resign in Puducherry- cabinet may be dissolved

ಫೆಬ್ರವರಿ 17ರಿಂದ ವಯನಾಡು ಸಂಸದ ರಾಹುಲ್ ಗಾಂಧಿ ಅವರು ಪುದುಚೇರಿಯಲ್ಲಿ ಚುನಾವಣಾ ರಣಕಹಳೆ ಊದಲಿದ್ದಾರೆ. ಸೊಲಾಯಿ ನಗರ, ಮುಥಿಯಾಲ್ ಪೇಟ್ ವಿಧಾನಸಭಾ ಕ್ಷೇತ್ರದ ಮೀನುಗಾರರೊಡನೆ ಸಂವಾದ ನಡೆಸಲಿದ್ದಾರೆ. ಭಾರತೀದಾಸನ್ ಸರ್ಕಾರಿ ಮಹಿಳಾ ಕಾಲೇಜ್ ವಿದ್ಯಾರ್ಥಿನಿಯರ ಜೊತೆ ಸಂವಾದ ಕಾರ್ಯಕ್ರಮವು ನಿಗದಿಯಾಗಿದೆ.

ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಜೊತೆಗೆ ಪುದುಚೇರಿಯ ವಿಧಾನಸಭೆಗೂ ಚುನಾವಣೆ ಏಪ್ರಿಲ್ -ಮೇ ತಿಂಗಳಲ್ಲಿ ನಡೆಯಲಿದೆ. ಡಿಎಂಕೆ ಜೊತೆ ಮೈತ್ರಿಯೊಂದಿಗೆ ಪುದುಚೇರಿಯಲ್ಲಿ ವಿ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದ್ಯ ಅಸ್ತಿತ್ವದಲ್ಲಿದೆ.

English summary
It looks like trouble has nowhere to go apart from Congress as a party MLA tendered his resignation ahead of the Assembly elections in the Union territory Puducherry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X