ಬ್ರ್ಯಾಂಡ್ ವ್ಯಾಮೋಹ ಬಿಟ್ಟು ಓಪನ್ ಸೀಕ್ರೆಟ್ ಸಾಮ್ರಾಜ್ಯ ಕಟ್ಟಿದ ಅಹಾನಾ ಗೌತಮ್: ಇದು ಜೀರೋದಿಂದ ಹೀರೊ ಆದ ಯುವತಿಯ ಕಥೆ

ಬೆಂಗಳೂರು: ಜೀವನದಲ್ಲಿ ಯಶಸ್ಸು ಗಳಿಸಲು ಕೇವಲ ದೊಡ್ಡ ಪದವಿಗಳಿದ್ದರೆ ಸಾಲದು, ಬದಲಿಗೆ ಎದುರಾಗುವ ಸವಾಲುಗಳನ್ನ ಮೆಟ್ಟಿ ನಿಂತು ಗುರಿ ಮುಟ್ಟುವ ಛಲ ಇರಬೇಕು. ಈ ಮಾತಿಗೆ ಒಂದು ಒಳ್ಳೆಯ ಉದಾಹರಣೆ ಕೊಡುವುದಾದ್ರೆ ಖ್ಯಾತ ಯುವ ಉದ್ಯಮಿ ಆಹಾನ ಗೌತಮ್ ಅವರು ಸೂಕ್ತ ಎನ್ನಬಹುದು.

ಹೌದು, ಅವರು ಇತ್ತೀಚೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಾಗೂ ಸಂದರ್ಶನವೊಂದರಲ್ಲಿ ತಾವು ಜೀರೋದಿಂದ 'ಓಪನ್ ಸೀಕ್ರೆಟ್' ಎಂಬ ಸ್ಟಾರ್ಟ್ಅಪ್ ಕಟ್ಟಿದ ಸ್ಫೂರ್ತಿದಾಯಕ ಕಥೆಯನ್ನ ಹಂಚಿಕೊಂಡಿದ್ದಾರೆ. ಪ್ರತಿಷ್ಠಿತ ಸಂಸ್ಥೆಗಳ ಬ್ರ್ಯಾಂಡ್ ಹೆಸರನ್ನ ಬಿಟ್ಟು, ಯಾವುದೇ ಹಮ್ಮುಬಿಮ್ಮು ಇಲ್ಲದೆ ಒಬ್ಬ ಸಾಮಾನ್ಯ ಉದ್ಯಮಿಯಾಗಿ ಬೆಳೆದ ಅವರ ಈ ಪಯಣ ಅನೇಕ ಯುವ ಉದ್ಯಮಿಗಳಿಗೆ ದಾರಿದೀಪವಾಗಿದೆ.

Ahana Gautam Open Secret Leaving P amp amp G and HBS Logos Behind to Build a Startup from Ground Zero

ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಮತ್ತು ಬ್ರ್ಯಾಂಡ್ ವ್ಯಾಮೋಹ

ಆಹಾನ ಗೌತಮ್ ಅವರು ಪ್ರತಿಷ್ಠಿತ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ (HBS) ಹಾಗೂ ಪಿ&ಜಿ (P&G) ನಂತಹ ವಿಶ್ವವಿಖ್ಯಾತ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಹಿನ್ನೆಲೆ ಹೊಂದಿದ್ದಾರೆ. ಈ ದೊಡ್ಡ ಸಂಸ್ಥೆಗಳ ಹೆಸರು ಅವರ ಹೆಸರಿನೊಂದಿಗೆ ಸೇರಿಕೊಂಡಾಗ ಸಮಾಜದಲ್ಲಿ ಸಿಗುವ ಮರ್ಯಾದೆಯೇ ಬೇರೆ ಎಂದು ಅವರು ವಿವರಿಸಿದ್ದಾರೆ.

ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿದ್ದಾಗ, hbs.edu ಎಂಬ ಇಮೇಲ್ ಐಡಿ ಬಹಳ ಪ್ರಭಾವಶಾಲಿಯಾಗಿತ್ತು. ಆ ಇಮೇಲ್ ಬಳಸಿ ಯಾರಿಗಾದರೂ ಸಂದೇಶ ಕಳುಹಿಸಿದರೆ, ಖಂಡಿತವಾಗಿಯೂ ಎದುರಿನವರಿಂದ ತಕ್ಷಣವೇ ಮರು ಉತ್ತರ ಬರುತ್ತಿತ್ತು ಎಂದು ಆಹಾನ ಹೇಳುತ್ತಾರೆ. ಈ ಬ್ರ್ಯಾಂಡ್ ಲೋಗೋಗಳು ನಮ್ಮೆಲ್ಲಾ ಕೆಲಸಗಳನ್ನ ಬಹಳ ಸುಲಭ ಮಾಡುತ್ತವೆ, ನಮಗಾಗಿ ಹೊಸ ಅವಕಾಶಗಳು ತೆರೆಯುತ್ತವೆ ಮತ್ತು ನಮ್ಮ ಕರೆಗಳನ್ನ ಜನರು ಗೌರವದಿಂದ ಸ್ವೀಕರಿಸುವಂತೆ ಮಾಡುತ್ತವೆ ಎಂಬುದು ಅವರ ಮಾತಿನ ಅರ್ಥವಾಗಿತ್ತು. ಆದರೆ, ಇದು ಅವರಿಗೆ ಬೇಕಾಗಿರಲಿಲ್ಲ ಮತ್ತು ಇದು ಅವರ ನಿಜವಾದ ಗುರುತಾಗಿರಲಿಲ್ಲ.

ಓಪನ್ ಸೀಕ್ರೆಟ್‌ನ ಆರಂಭ ಮತ್ತು ಸವಾಲು

ತಮ್ಮದೇ ಆದ ಸ್ವಂತ ಉದ್ಯಮ ಕಟ್ಟುವ ದೊಡ್ಡ ಕನಸು ಕಂಡ ಆಹಾನ ಅವರು, 'ಓಪನ್ ಸೀಕ್ರೆಟ್' ಎಂಬ ಹೊಸ ಬ್ರ್ಯಾಂಡ್ ಅನ್ನ ಆರಂಭಿಸಿದರು. ಈ ವೇಳೆ ಅವರು ಸುಮಾರು ಒಂಬತ್ತು ತಿಂಗಳ ಕಾಲ ಅಡುಗೆಮನೆಯಲ್ಲಿಯೇ ಕಠಿಣ ಶ್ರಮವಹಿಸಿ ಕಳೆದರು. ಬರೋಬ್ಬರಿ 1,000 ಕುಕೀಗಳನ್ನ ಅವರೇ ಖುದ್ದಾಗಿ ತಯಾರಿಸಿದರು. ಆ ಸಮಯದಲ್ಲಿ ಅವರಿಗೆ ಯಾವುದೇ ಹುದ್ದೆಯ ಹೆಸರಿರಲಿಲ್ಲ.

ಒಬ್ಬ ಸಂಸ್ಥಾಪಕಿಯಾಗಿ ಹೊಸದಾಗಿಈ ಉದ್ಯಮ ಆರಂಭಿಸಿದಾಗ, ಅವರು ಯಾರೆಂದು ಯಾರಿಗೂ ತಿಳಿದಿರಲಿಲ್ಲ ಹಾಗೂ ಯಾರೂ ಕೂಡ ಅವರೊಂದಿಗೆ ಮಾತನಾಡಲು ಸಿದ್ಧರಿರಲಿಲ್ಲ. ಹೊಸ ಸ್ಟಾರ್ಟ್ಅಪ್ ಆದ್ದರಿಂದ ಉತ್ಪಾದಕರು, ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಕೂಡ ಅವರನ್ನ ಸಂಪರ್ಕಿಸಲು ಯಾವುದೇ ಆಸಕ್ತಿ ತೋರಲಿಲ್ಲ ಎಂದು ಅವರು ವಿವರಿಸಿದ್ದಾರೆ.

ಈ ಸಮಯದಲ್ಲಿ ಅಹನಾ ನಾವು ದೊಡ್ಡ ಮತ್ತು ಪ್ರೀಮಿಯಂ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ ಅಹಂಕಾರವನ್ನ ಬಿಟ್ಟು, ಶೂನ್ಯದಿಂದ ಕೆಲಸ ಪ್ರಾರಂಭಿಸುವುದು ಅವರ ಪಾಲಿಗೆ ಅತ್ಯಂತ ಪ್ರಮುಖವಾದ ಬದಲಾವಣೆಯಾಗಿತ್ತು.

ಬ್ಯುಸಿನೆಸ್ ಸವಾಲುಗಳು

ಸ್ಟಾರ್ಟ್ಅಪ್ ಆರಂಭಿಸುವಾಗ ಹಣ ಅಥವಾ ಸಮಯದ ಕೊರತೆಗಿಂತ, ನಮ್ಮ ಹೆಸರಿನೊಂದಿಗಿದ್ದ ಆ ದೊಡ್ಡ ಬ್ರ್ಯಾಂಡ್ ಲೋಗೋದ 'ಅಹಂ' ಅನ್ನ ಸಂಪೂರ್ಣವಾಗಿ ಸಾಯಿಸುವುದು ಅತ್ಯಂತ ಕಷ್ಟಕರವಾದ ಕೆಲಸ ಎಂದು ಆಹಾನ ಹೇಳುತ್ತಾರೆ.

ಹೊಸದಾಗಿ ಉದ್ಯಮ ಕಟ್ಟಲು ನಾವು ಹೊಂದಿರುವ ಎಲ್ಲಾ ಸವಲತ್ತುಗಳನ್ನ ಹಾಗೂ ಐಷಾರಾಮಿ ಜೀವನವನ್ನ ಬಿಟ್ಟುಕೊಟ್ಟು, ಶೂನ್ಯದಿಂದ ಆರಂಭಿಸಬೇಕು. ಈ ಕಠಿಣ ಪ್ರಕ್ರಿಯೆಗೆ ಎರಡು ವಿರುದ್ಧವಾದ ಗುಣಗಳ ಅಗತ್ಯವಿದೆ. ಒಂದು ಸಂಪೂರ್ಣ ಆತ್ಮವಿಶ್ವಾಸ ಮತ್ತು ಮತ್ತೊಂದು ಜೀರೋ ಇಗೋ ಗುಣ.

ಕೆಲವೊಮ್ಮೆ ಈ ಪಯಣ ಬಹಳ ನಿರಾಶಾದಾಯಕವಾಗಿರಬಹುದು. ಆದರೆ ಇದು ನಮ್ಮ ವ್ಯಕ್ತಿತ್ವವನ್ನ ಅತ್ಯಂತ ಗಟ್ಟಿಯಾಗಿ ರೂಪಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ನಮ್ಮ ರೆಸ್ಯೂಮೆಯ ಮೇಲಿರುವ ಲೋಗೋ ಎಂದಿಗೂ ನಮ್ಮ ನಿಜವಾದ ಮೌಲ್ಯವನ್ನ ನಿರ್ಧರಿಸುವುದಿಲ್ಲ.

ಬದಲಾಗಿ, ನಾವು ಯಾರು ಮತ್ತು ನಾವು ಶೂನ್ಯದಿಂದ ಎದ್ದುಬಂದು ಮತ್ತೆ ಮತ್ತೆ ಯಶಸ್ಸು ಗಳಿಸುತ್ತೇವೆಯೇ ಎಂಬುದೇ ನಮ್ಮ ನಿಜವಾದ ಮೌಲ್ಯ ಎಂಬುದು ಆಹಾನ ಅವರ ಮಾತು. ತಮ್ಮ ಈ ಯಶಸ್ಸಿನ ದಾರಿಯಲ್ಲಿ ಎದುರಾದ ಅಪಮಾನ, ನಿರ್ಲಕ್ಷ್ಯ ಮತ್ತು ಕಷ್ಟಗಳನ್ನ ಅವರು ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ. ಮತ್ತೊಮ್ಮೆ ಎಲ್ಲವನ್ನೂ ಶೂನ್ಯದಿಂದ ಆರಂಭಿಸಬೇಕಾಗಿ ಬಂದರೂ ತಾನು ಹಿಂದೆ ಸರಿಯುವುದಿಲ್ಲ ಎಂದು ಅವರು ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+