ಭಾರತಕ್ಕೆ ವಂಚಿಸಿದವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ: ಜೇಟ್ಲಿ
Recommended Video

ನವದೆಹಲಿ, ಫೆಬ್ರುವರಿ 1: ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದ ಆರೋಪಿಗಳಿಬ್ಬರನ್ನು ಭಾರತಕ್ಕೆ ಗಡಿಪಾರು ಮಾಡಿದ್ದಕ್ಕಾಗಿ ಮೋದಿ ಸರ್ಕಾರವನ್ನು ಶ್ಲಾಘಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ಭಾರತಕ್ಕೆ ಮೋಸ ಮಾಡುವವರು ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಅಡಗಿಕೊಳ್ಳಲು ಮತ್ತು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅರುಣ್ ಜೇಟ್ಲಿ, ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದ ಆರೋಪಿಗಳಾದ ರಾಜೀವ್ ಸಕ್ಸೇನಾ ಮತ್ತು ದೀಪಕ್ ತಲ್ವಾರ್ ಅವರ ಗಡಿಪಾರು ವಿಚಾರಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.
'ಯುಪಿಎ ಅಸ್ಥಿಪಂಜರ ಈಗ ಉರುಳಾಡುತ್ತಿದೆ. ಎಲ್ಲ ರಕ್ಷಣಾ ಖರೀದಿಗಳಿಗೂ ಮಧ್ಯವರ್ತಿಗಳು ಏಕೆ ಬೇಕು?' ಎಂದು ಅವರು ಪ್ರಶ್ನಿಸಿದ್ದಾರೆ.

'ಭಾರತವನ್ನು ವಂಚಿಸಿದ ಯಾರೂ ಜಗತ್ತಿನ ಯಾವ ಮೂಲೆಯಲ್ಲಿಯೂ ಅಡಗಿಕೊಳ್ಳಲು ಮತ್ತು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಾರತದ ರಾಜತಾಂತ್ರಿಕ ಶಕ್ತಿ ಮತ್ತು ಹೆಚ್ಚು ನಾಗರಿಕ ಅಂತಾರಾಷ್ಟ್ರೀಯ ಪ್ರಕ್ರಿಯೆಗಳು ಅವರನ್ನು ಪತ್ತೆಹಚ್ಚುತ್ತವೆ' ಎಂದಿದ್ದಾರೆ.
'ಪ್ರಧಾನಿಯು ಪ್ರಾಮಾಣಿಕವಾಗಿದ್ದರೆ ಆಡಳಿತದಲ್ಲಿ ಅವರು ಪ್ರಾಮಾಣಿಕತೆಯ ಸಂಸ್ಕೃತಿಯನ್ನು ಅಳವಡಿಸಿದರೆ ಭಾರತವನ್ನು ವಂಚಿಸಿದ ಯಾವ ವ್ಯಕ್ತಿಯೂ ತಪ್ಪಿಸಿಕೊಳ್ಳಲಾರ' ಎಂದು ಟ್ವೀಟ್ ಮಾಡಿದ್ದಾರೆ.
No one who cheats INDIA can hide anywhere in the world and escape. INDIA’s Diplomatic strength and more civilized International procedures will get better of him.
— Arun Jaitley (@arunjaitley) January 31, 2019
ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅತಿ ಗಣ್ಯರ ಹೆಲಿಕಾಪ್ಟರ್ ಖರೀದಿಯ ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದಲ್ಲಿ ಪ್ರಮುಖ ಆರೋಪಿಗಳಾದ ಉದ್ಯಮಿ ರಾಜೀವ್ ಸಕ್ಸೇನಾ ಮತ್ತು ಮಧ್ಯವರ್ತಿ ದೀಪಕ್ ತಲ್ವಾರ್‌ನನ್ನು ಬಂಧಿಸಿದ್ದ ದುಬೈ ಪೊಲೀಸರು ಗುರುವಾರ ಬೆಳಿಗ್ಗೆ ಭಾರತಕ್ಕೆ ಗಡಿಪಾರು ಮಾಡಿದ್ದರು.












Click it and Unblock the Notifications