ಸುಷ್ಮಾ ವಾರ್ನಿಂಗ್: ಅಮೆಜಾನ್ ನಿಂದ ಭಾರತ ವಿರೋಧಿ ಕಾಲೊರಸು ಹಿಂದಕ್ಕೆ

Posted By:
Subscribe to Oneindia Kannada

ನವದೆಹಲಿ, ಜನವರಿ 12: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಎಚ್ಚರಿಕೆಯ ಹಿನ್ನೆಲೆಯಲ್ಲಿ ಖ್ಯಾತ ಆನ್ ಲೈನ್ ಮಾರಾಟ ಕಂಪನಿಯಾದ ಅಮೆಜಾನ್ ಕಂಪನಿಯು ತನ್ನ ಕೆನಡಾ ಆವೃತ್ತಿಯ ಜಾಲತಾಣದಲ್ಲಿ ಮಾರಾಟಕ್ಕಿಟ್ಟಿದ್ದ ಭಾರತ ರಾಷ್ಟ್ರಧ್ವಜದ ಚಿತ್ರವಿದ್ದ ಕಾಲೊರಸುಗಳನ್ನು(ಡೋರ್ ಮ್ಯಾಟ್) ಹಿಂಪಡೆದಿದೆ.

ಇದೀಗ, ಯಾವುದೇ ಗ್ರಾಹಕರು ಆ ಡೋರ್ ಮ್ಯಾಟ್ ಗಳನ್ನು ಹಿಂಪಡೆಯಲು ಕ್ಲಿಕ್ ಮಾಡಿದರೆ, ಅಲ್ಲಿ ಪೇಜ್ ಎರರ್ ಎಂಬ ಸಂದೇಶ ಮೂಡುತ್ತದೆ.

ಭಾರತೀಯ ಧ್ವಜದ ಕಾಲೊರಸುಗಳನ್ನು ಅಮೆಜಾನ್ ಕಂಪನಿಯು ಮಾರಾಟ ಮಾಡುತ್ತಿರುವ ವಿಚಾರವನ್ನು ಕೆನಡಾದ ಪ್ರಜೆಯೊಬ್ಬರು ಟ್ವೀಟರ್ ನಲ್ಲಿ ಫೋಟೋ ಸಹಿತ ಹಾಕಿದ್ದರು.[ಅಮೆಜಾನ್ ವಿರುದ್ಧ ಸುಷ್ಮಾ ಸ್ವರಾಜ್ ಕೆಂಡಾಮಂಡಲ]

amazon

ಇದಕ್ಕೆ ತಕ್ಷಣವೇ ಸ್ಪಂದಿಸಿದ್ದ ಸುಷ್ಮಾ ಸ್ವರಾಜ್, ಟ್ವಿಟರ್ ನಲ್ಲಿ ಅಮೆಜಾನ್ ವಿರುದ್ಧ ಕಿಡಿಕಾರಿದ್ದರಲ್ಲದೆ, "ಭಾರತಕ್ಕೆ ಅಪಮಾನವೆಸಗುವ ಇಂಥ ಪರಿಕರಗಳನ್ನು ತಕ್ಷಣವೇ ಹಿಂಪಡೆಯದಿದ್ದರೆ ಅಮೆಜಾನ್ ಸಿಬ್ಬಂದಿಗೆ ಇನ್ನೆಂದೂ ಭಾರತ ವೀಸಾ ನೀಡುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದರು.['ಕನ್ನಡಕ್ಕೆ ಐದು ಪೈಸೆ ಕಿಮ್ಮತ್ತು ನೀಡದ ಅಮೆಜಾನ್ ಗೆ ಧಿಕ್ಕಾರ'!]

ಮತ್ತೊಂದು ಟ್ವೀಟ್ ನಲ್ಲಿ ಸುಷ್ಮಾ ಅವರು, ಕೆನಡಾದ ಭಾರತೀಯ ಹೈ ಕಮೀಷನ್ ಕಚೇರಿಗೂ ಸೂಚನೆ ನೀಡಿ, ಅಮೆಜಾನ್ ನ ಈ ನಡೆ ವಿರುದ್ಧ ಅಲ್ಲಿನ ಉನ್ನತ ಅಧಿಕಾರಿಗಳಿಗೆ ದೂರು ನೀಡಲು ಆಗ್ರಹಿಸಿದ್ದರು.

ವಿದೇಶಾಂಗ ಸಚಿವರು ಗರಂ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಮೆಜಾನ್, ತ್ರಿವರ್ಣ ಧ್ವಜದ ಕಾಲೊರೆಸು ಮಾರಾಟ ರದ್ದುಗೊಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
After external affairs minister Sushma Swaraj lashed out at the e-tailer on Wednesday and threatened to rescind visas of officials of the e-commerce giant amazon, the company rolled back the sale of door mats which resembles indian national flag.
Please Wait while comments are loading...