ಹೌದು ಹೆಂಗಸರು ಪುರುಷರಿಗೆ ಸುಖ ನೀಡುವುದನ್ನು ಕಲಿಯಲಿ: ರಾಖಿ ಸಾವಂತ್
ಮುಂಬೈ, ಮಾರ್ಚ್. 11 : ಅಂತಾರಾಷ್ಟ್ರೀಯ ಮಹಿಳಾ ದಿನದಂದು ವಿವಾದಾತ್ಮಕ ಟ್ವೀಟ್ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪರ ಇದೀಗ ಬಾಲಿವುಡ್ ನಟಿ ರಾಖಿ ಸಾವಂತ್ ಬ್ಯಾಟಿಂಗ್ ಮಾಡಿದ್ದಾರೆ.
ಹೆಣ್ಮಕ್ಳ ವಿರುದ್ಧ ವರ್ಮಾ ಅವರ ಟ್ವೀಟ್ ಭಾರೀ ವಿರೋಧ ವ್ಯಕ್ತವಾಗಿದ್ದು ಗೋವಾದಲ್ಲಿ ವರ್ಮಾ ವಿರುದ್ಧ ದೂರು ದಾಖಲಾಗಿದೆ. ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್ ಸಿಪಿ), ವರ್ಮಾ ಕ್ಷಮೆ ಕೇಳದಿದ್ದರೆ ಬೂಟುಗಳಲ್ಲಿ ಹೊಡೆಯುವುದಾಗಿ ಹೇಳಿತ್ತು.
ಹಾಗೂ ಭಾರತೀಯ ಮಜ್ದೂರ್ ಸಂಘಟನೆಯೂ ಕೂಡ ವರ್ಮಾ ವಿರುದ್ಧ ಹರಿಹಾಯ್ದು, ಕ್ಷಮೆಗೆ ಆಗ್ರಹಿಸಿತ್ತಲ್ಲದೆ, ವರ್ಮಾ ಕ್ಷಮೆ ಕೇಳದಿದ್ದರೆ ಅವರ ಚಿತ್ರಗಳನ್ನು ನಿಷೇಧಿಸುವ ಎಚ್ಚರಿಕೆಯನ್ನೂ ನೀಡಿತ್ತು. ಅದಲ್ಲದೆ, ಸನ್ನಿ ಲಿಯೋನ್ ಅವರನ್ನು ಉದಾಹರಣೆಗೆ ತೆಗೆದುಕೊಂಡು ಟ್ವೀಟ್ ಮಾಡಿದ್ದ ವರ್ಮ ಅವರಿಗೆ ಸ್ವತಃ ಸನ್ನಿ ಲಿಯೋನ್ ತಿರುಗೇಟು ನೀಡಿದ್ದರು.[ಕ್ಷಮೆ ಕೇಳದಿದ್ರೆ ಬೂಟುಗಳಲ್ಲಿ ಹೊಡೀತಿವಿ: ಆರ್ ಜಿವಿಗೆ ಎನ್ ಸಿಪಿ ಬೆದರಿಕೆ]
ಇವೆಲ್ಲವುಗಳ ಜಟಾಪಟಿಗಳ ಮಧ್ಯೆ ಬಾಲಿವುಡ್ ನಟಿ ರಾಖಿ ಸಾವಂತ್ ಇದರಲ್ಲಿ ಮೂಗು ತೂರಿಸಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಹಾಗಿದ್ದರೆ, ವರ್ಮಾ ಟ್ವೀಟ್ ಮಾಡಿದ್ದೇನು? ವರ್ಮಾಗೆ ಸನ್ನಿ ಹೇಳಿದ್ದೇನು? ಇದೀಗ ರಾಖಿ ಸಾವಂತ್ ಹೇಳಿದ್ದೇನು? ಮುಂದೆ ಓದಿ.

ರಾಮ್ ಗೋಪಲ್ ವರ್ಮಾ ಟ್ವೀಟ್
'ಜಗತ್ತಿನ ಎಲ್ಲ ಹೆಂಗಸರೂ ಸನ್ನಿ ಲಿಯೋನ್ ಗಿಂತ ಹೆಚ್ಚು ಸುಖ ನೀಡಲಿ' ಎಂಬ ವರ್ಮ ಅವರ ಟ್ವೀಟ್ ದೇಶದಾದ್ಯಂತ ತೀವ್ರ ಆಕ್ರೋಶ ಕಾರಣವಾಗಿದ್ದು ವರ್ಮಾ ವಿರುದ್ಧ ಗೋವಾದಲ್ಲಿ ದೂರು ಸಹ ದಾಖಲಾಗಿತ್ತು. ಬಳಿಕ ತಮ್ಮ ತಪ್ಪಿನ ಅರಿವಾಗಿ ಕ್ಷಮೆಕೋರಿದ್ದರು.

ಸನ್ನಿ ಲಿಯೋನ್ ಬುದ್ಧಿವಾದ
'ಯಾವ ಸಂದರ್ಭದಲ್ಲಿ ಯಾವ ಮಾತುಗಳನ್ನಾಡಬೇಕೋ ಅಂಥದ್ದೇ ಮಾತುಗಳನ್ನಾಡಬೇಕು. ಪದಗಳನ್ನು ಪ್ರಯೋಗಿಸುವಾಗ ಜಾಣ್ಮೆ ತೋರಬೇಕು'' ಎಂದು ಖುದ್ದು ಸನ್ನಿ ಲಿಯೋನ್ ವರ್ಮಾ ಅವರಿಗೆ ತಿರುಗೇಟು ನೀಡಿದ್ದರು.

ವರ್ಮಾ ಪರ ರಾಖಿ ಸಾವಂತ್ ಬ್ಯಾಟಿಂಗ್
'ಸನ್ನಿಲಿಯೋನ್ ರನ್ನು ಹೊಗಳಿರುವುದರಲ್ಲಿ ತಪ್ಪಿಲ್ಲ. ಅವರು ಹೇಳಿರುವುದು ಸರಿಯಾಗಿದೆ. ನಾನು ವರ್ಮಾ ಪರ ಇದ್ದೇನೆ. ನಾನು ಕೂಡ ಎಲ್ಲ ಮಹಿಳೆಯರು ತಮ್ಮ ಪುರುಷರಿಗೆ ಸುಖ ನೀಡುವುದನ್ನು ಕಲಿಯಬೇಕೆಂದು ಹೇಳುತ್ತೇನೆ. ವರ್ಮಾ ಅವರು ಕ್ಷಮೆ ಕೋರುವ ಅಗತ್ಯವಿಲ್ಲ. ಪುರುಷ ತನ್ನ ಹೆಂಡತಿಯ ಜತೆ ಹಲವು ವರ್ಷಗಳ ಕಾಲ ಬದುಕುತ್ತಾನೆ. ಮಹಿಳೆಯೂ ಕೂಡ ಆತನಿಗಾಗಿ ತನ್ನ ಬದುಕನ್ನು ಸಮರ್ಪಿಸಬೇಕು' ಎಂದು ಮಾಧ್ಯಮಗಳ ಮುಂದೆ ಹೇಳುವ ಮೂಲಕ ಹಲವರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ವರ್ಮಾ ವಿರುದ್ಧ ಗೋವಾದಲ್ಲಿ ದೂರು
'ಜಗತ್ತಿನ ಎಲ್ಲ ಹೆಂಗಸರೂ ಸನ್ನಿ ಲಿಯೋನ್ ಗಿಂತ ಹೆಚ್ಚು ಸುಖ ನೀಡಲಿ' ಎಂಬ ವರ್ಮ ಅವರ ಟ್ವೀಟ್ ದೇಶದಾದ್ಯಂತ ತೀವ್ರ ಆಕ್ರೋಶ ಕಾರಣವಾಗಿದ್ದು ವರ್ಮಾ ವಿರುದ್ಧ ಗೋವಾದಲ್ಲಿ ದೂರು ಸಹ ದಾಖಲಾಗಿತ್ತು. ಬಳಿಕ ತಮ್ಮ ತಪ್ಪಿನ ಅರಿವಾಗಿ ಕ್ಷಮೆಕೋರಿದ್ದರು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications