ಇದು ಕಿಸ್ ಆಫ್ ಲವ್ ಅಲ್ಲ, ಕಿಸ್ ಇನ್ ದಿ ಸ್ಟ್ರೀಟ್!
ತಿರುವನಂತಪುರ, ಡಿ. 6: ಕಿಸ್ ಆಫ್ ಲವ್ ಗೆ ಪರ ವಿರೋಧಗಳು ವ್ಯಕ್ತವಾಗುತ್ತಿರಯವ ಬೆನ್ನಲ್ಲೇ 'ಕಿಸ್ ಇನ್ ದಿ ಸ್ಟ್ರೀಟ್' ಎಂಬ ಹೊಸ ಫೇಸ್ ಬುಕ್ ಸಮೂಹವೊಂದು ಹುಟ್ಟಿಕೊಂಡಿದೆ. ಅಲ್ಲದೇ ಕೇರಳದ ಕೋಝಿಕೋಡ್ನಲ್ಲಿ ಡಿಸೆಂಬರ್ 7 ರಂದು ಕಿಸ್ ಇನ್ ದಿ ಸ್ಟ್ರೀಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಿಸ್ ಆಫ್ ಲವ್ ಗೂ ಕಿಸ್ ಇನ್ ದಿ ಸ್ಟ್ರಿಟ್ ಗೂ ಅಂತಹ ಮಹತ್ತರ ವ್ಯತ್ಯಾಸವೇನಿಲ್ಲ. ನೈತಿಕ ಪೊಲೀಸ್ ಗಿರಿ ವಿರೋಧಿಸಿಯೇ ಎರಡು ಪ್ರತಿಭಟನೆಗಳು ಹುಟ್ಟಿಕೊಂಡಿವೆ. ಆದರೆ ಸಂಪ್ರದಾಯವಾದಿಗಳಿಂದ ವಿರೋಧ ವ್ಯಕ್ತವಾಗುತ್ತದೆ ಅಥವಾ ಕಾನೂನು ತೊಡಕಿದೆ ಎಂಬ ಸಂಗತಿ ಗೊತ್ತಿದ್ದರೂ ಇಂಥ ಆಚರಣೆಗಳು ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿರುವುದಕ್ಕೆ ಕಾರಣಗಳು ಗೊತ್ತಾಗುತ್ತಿಲ್ಲ.[ಬೆಂಗಳೂರು: ಭಾನುವಾರದ ಕಿಸ್ ಆಫ್ ಲವ್ 'ಠುಸ್']

ನೂರಾರು ಮಂದಿ ಕಿಸ್ ಇನ್ ದಿ ಸ್ಟ್ರೀಟ್ ಪೇಜ್ ನ್ನು ಲೈಕ್ ಮಾಡಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ ಎಂದು ತಿಳಿಸಿದ್ದಾರೆ. ಹಿಂದೆ ಕೊಚ್ಚಿ, ಮದ್ರಾಸ್ ಮತ್ತು ಹೈದ್ರಾಬಾದ್ ನಲ್ಲಿ ಕಿಸ್ ಆಫ್ ಲವ್ ಆಯೋಜಿಸಿದ್ದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಉಂಟಾಗಿತ್ತು.[ಮುತ್ತು ಕೊಟ್ರೆ ಏನಾಗ್ತದೆ? ಕಿಸ್ ಅಂದ್ರೆ ಏನು?]
ಬೆಂಗಳೂರಿನಲ್ಲಿ ಕಿಸ್ ಠುಸ್
ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಿಸ್ ಆಫ್ ಲವ್ ನಿಂದ ಆಯೋಜಕರು ಹಿಂದೆ ಸರಿದ ಕಾರಣ ನಡೆಯಲಿಲ್ಲ. ಪೊಲೀಸ್ ಆಯುಕ್ತರು ಕೇಳಿದ್ದ ದಾಖಲೆಗಳನ್ನು ನೀಡುವಲ್ಲಿ ಆಯೋಜಕರು ವಿಫಲರಾಗಿದ್ದರು. ಅಲ್ಲದೇ ಅನೇಕ ಸಂಘಟನೆಗಳು, ರಾಜಕೀಯ ಪಕ್ಷಗಳ ವಿರೋಧ ವ್ಯಕ್ತವಾಗಿತ್ತು.












Click it and Unblock the Notifications