ಕರುನಾಡು ಗೆದ್ದ ಖುಷಿಯಲ್ಲಿ ಖರ್ಗೆ ನಾಯಕತ್ವದಲ್ಲಿ ನಾಲ್ಕು ರಾಜ್ಯಗಳತ್ತ ಕಾಂಗ್ರೆಸ್ ದಂಡಯಾತ್ರೆ!
ನವದೆಹಲಿ, ಮೇ. 21: ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಯ ಗೆಲುವಿನ ಖುಷಿಯಲ್ಲಿರುವ ಕಾಂಗ್ರೆಸ್, ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುನ್ನ ತನ್ನ ಮತದಾರರ ನೆಲೆಯನ್ನು ಕ್ರೋಢೀಕರಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ಮತ್ತೆ ಚುನಾವಣೆಗೆ ಸಿದ್ಧವಾಗಿರುವ ಇತರ ರಾಜ್ಯಗಳತ್ತ ಗಮನ ಹರಿಸುತ್ತಿದೆ.
ಮುಂದಿನ ವರ್ಷ ನಡೆಯಲಿರುವ ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಮೇ 24 ರಂದು ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ನಾಯಕರ ಸಭೆಯನ್ನು ಕರೆಯಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಒಂದು ವಾರದ ಜಟಾಪಟಿಯ ನಂತರ ಕರ್ನಾಟಕದಲ್ಲಿ ಭಾರೀ ಗೆಲುವಿನ ಸಂಭ್ರಮಾಚರಣೆಗಳು ನಡೆದಿವೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಒಪ್ಪಂದದ ನಂತರ ಕಾಂಗ್ರೆಸ್ ಅಂತಿಮವಾಗಿ ಸರ್ಕಾರ ರಚನೆ ಮಾಡಿದೆ. ಸಿದ್ದರಾಮಯ್ಯ ಸಿಎಂ ಆಗಿ, ಡಿಕೆ ಶಿವಕುಮಾರ್ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇತ್ತ, ರಾಜಸ್ಥಾನದಲ್ಲಿಯೂ ಪಕ್ಷಕ್ಕೆ ಈಗ ಅಂತಹದ್ದೇ ಮತ್ತೊಂದು ಜಟಾಪಟಿ ಎದುರಾಗಿದೆ. ಸಚಿನ್ ಪೈಲಟ್ ಅವರು ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ಹೈಕಮಾಂಡ್‌ಗೆ ಸ್ಪಷ್ಟಪಡಿಸಲು ತಮ್ಮದೇ ಸರ್ಕಾರದ ಮೇಲೆ ಭಾರೀ ಒತ್ತಡ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೊಹ್ಲೋಟ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಸುಖಜಿಂದರ್ ಸಿಂಗ್ ರಾಂಧವಾಪಕ್ಷದಲ್ಲಿ ಭಿನ್ನಮತೀಯರನ್ನು ಉಚ್ಚಾಟಿಸುವುದಿಲ್ಲ ಎಂದು ಹೇಳಿದ್ದಾರೆ.
2020 ರಲ್ಲಿ 15 ತಿಂಗಳ ಕಮಲ್ ನಾಥ್ ಸರ್ಕಾರದ ಪತನಕ್ಕೆ ಕಾರಣವಾದ ಬಂಡಾಯಗಾರ ಜ್ಯೋತಿರಾದಿತ್ಯ ಸಿಂಧಿಯಾ 22 ಪಕ್ಷದ ಶಾಸಕರೊಂದಿಗೆ ಹೊರನಡೆದ ನಂತರ ಕಾಂಗ್ರೆಸ್ ಭಾರೀ ನಷ್ಟವನ್ನು ಅನುಭವಿಸಿದ ಮಧ್ಯಪ್ರದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ. ಹೆಚ್ಚಿನ ಜ್ಯೋತಿರಾದಿತ್ಯ ಸಿಂಧಿಯಾ ನಿಷ್ಠ ಶಾಸಕರು ಬಿಜೆಪಿಯಿಂದ ಆರಾಮವಾಗಿ ಮರು ಆಯ್ಕೆಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ ಬಿಜೆಪಿಯು ಭಾರಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿರುವ ಕಾರಣ ಕಾಂಗ್ರೆಸ್ ಅದನ್ನು ತನ್ನತ್ತ ತಿರುಗಿಸಿಕೊಂಡು ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ.

ತೆಲಂಗಾಣದಲ್ಲಿ, 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸ ಪ್ರಯತ್ನವನ್ನು ಭಾರತ್ ರಾಷ್ಟ್ರ ಸಮಿತಿ ಒಪ್ಪುತ್ತಿಲ್ಲ. ಈ ಒಗ್ಗಟ್ಟಿನ ಮಹಾ ವಿರೋಧದ ಯೋಜನೆಗಳನ್ನು ಸಂಕೀರ್ಣಗೊಳಿಸಿ, ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿಯನ್ನು ಕಾಂಗ್ರೆಸ್ ಎದುರಿಸಬೇಕಿದೆ.
ಇನ್ನು, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಬೃಹತ್ ಪಾದಯಾತ್ರೆ "ಭಾರತ್ ಜೋಡೋ ಯಾತ್ರೆ" ಯನ್ನು ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಆಶಿಸುತ್ತಿದೆ. ಈ ಯಾತ್ರೆಯು ತನ್ನ ಬ್ಯಾಂಕ್ ಅನ್ನು ಪುನಃ ಶಕ್ತಿಯುತಗೊಳಿಸಿದೆ ಎಂದು ಹೇಳಲಾಗುತ್ತಿದ್ದು, ಕರ್ನಾಟಕದ ಗೆಲುವಿಗೆ ಭಾರತ್ ಜೋಡೋ ಯಾತ್ರೆಗೆ ಕೊಡುಗೆ ನೀಡಿದೆ ಎಂದು ಸಾರ್ವಜನಿಕವಾಗಿ ಪಕ್ಷವು ತಿಳಿಸಿದೆ.












Click it and Unblock the Notifications