10 ಕೋಟಿ ನಗದಿನೊಂದಿಗೆ ಏರ್ಪೋರ್ಟಲ್ಲಿ ಸಿಕ್ಕಿ ಬಿದ್ದ ಅಫ್ಘನ್ ಪ್ರಜೆ

ಕೊಚ್ಚಿ, ಜೂನ್ 14: ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ನಗದು ಕೊಂಡೊಯ್ಯುತ್ತಿದ್ದ ಅಫ್ಘಾನಿಸ್ತಾನದ ಪ್ರಜೆಯನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

33 ವರ್ಷದ ಯೂಸುಫ್ ಮೊಹಮ್ಮದ್ ಸಿದ್ಧಿಕಿ ಬಂಧಿತನಾಗಿದ್ದು ಈತನ ಬಳಿಯಲ್ಲಿದ್ದ ಹೆಚ್ಚಿನ ನಗದು ಅಮೆರಿಕಾ ಡಾಲರ್ ಗಳಾಗಿವೆ. ಜೊತೆಗೆ ಸೌದಿ ಅರೇಬಿಯಾದ ರಿಯಾಲ್ ಗಳೂ ಇದ್ದವು. ಇವುಗಳ ಮೌಲ್ಯ ಭಾರತದ ರೂಪಾಯಿಗಳಲ್ಲಿ 10 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ.

ಬುಧವಾರ ಬೆಳಿಗ್ಗೆ 4.30ಕ್ಕೆ ಆತ ಕೊಚ್ಚಿಯಲ್ಲಿ ಎಮಿರೇಟಸ್ ವಿಮಾನ ಹತ್ತಬೇಕಾಗಿತ್ತು. ಈ ಸಂದರ್ಭ ಭದ್ರತಾ ತಪಾಸಣೆ ವೇಳೆ ಆತನ ಬಳಿ ಈ ಹಣ ಪತ್ತೆಯಾಗಿದೆ.

Afghan held with foreign notes worth Rs 10 cr at Kochi airport

ಆತನ ಬ್ಯಾಗ್ ಗಳನ್ನು ಎಕ್ಸ್ ರೇ ತಪಾಸಣೆ ಮಾಡುವಾಗ ಅದರಲ್ಲಿ ಈ ಹಣ ಪತ್ತೆಯಾಗಿತ್ತು. ಇದು ದೇಶದ ವಿಮಾನ ನಿಲ್ದಾಣಗಳಲ್ಲಿ ಪತ್ತೆಯಾದ ಅತೀ ದೊಡ್ಡ ನಗದು ಕಳ್ಳಸಾಗಣೆ ಪ್ರಕರಣ ಎನ್ನಲಾಗಿದೆ.

Afghan held with foreign notes worth Rs 10 cr at Kochi airport

ಈತ ದೆಹಲಿಯಿಂದ ಕೊಚ್ಚಿ ಮಾರ್ಗವಾಗಿ ದುಬೈಗೆ ತೆರಳಲು ಏರ್ ಇಂಡಿಯಾ ವಿಮಾನದಲ್ಲಿ ಕೊಚ್ಚಿಗೆ ಬಂದಿಳಿದಿದ್ದ. ಈ ಸಂದರ್ಭ ಆತನ ಬ್ಯಾಗ್ ಪರಿಶೀಲನೆಗೆ ಒಳಪಡಿಸಿದಾಗ ಅದರಲ್ಲಿ ಈ ಹಣ ಪತ್ತೆಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+