ಅಂಧ ಮಕ್ಕಳ ಜತೆ 90ನೇ ಹುಟ್ಟು ಹಬ್ಬ ಆಚರಿಸಿಕೊಂಡ ಎಲ್.ಕೆ ಅಡ್ವಾಣಿ

Subscribe to Oneindia Kannada

ನವದೆಹಲಿ, ನವೆಂಬರ್ 8: ಇಂದು 90ನೇ ವಸಂತಕ್ಕೆ ಕಾಲಿಟ್ಟ ಬಿಜೆಪಿಯ ಭೀಷ್ಮ ಎಲ್.ಕೆ ಅಡ್ವಾಣಿ ಅಂಧ ಮಕ್ಕಳ ಜತೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು.

ಇಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಕೇಂದ್ರ ಸಚಿವರು, ಗಣ್ಯರು ಎಲ್.ಕೆ ಅಡ್ವಾಣಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಹುಟ್ಟುಹಬ್ಬದ ಶುಭಾಷಯ ಕೋರಿದರು.

ಅಡ್ವಾಣಿಗೆ ತೊಂಬತ್ತು: ಶುಭಕೋರಿದ ಪ್ರಧಾನಿ ಮೋದಿ

ಅಡ್ವಾಣಿ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, "ಗೌರವಾನ್ವಿತ ಅಡ್ವಾಣಿಯವರಿಗೆ ಹುಟ್ಟುಹಬ್ಬದ ಶುಭಾಷಯಗಳು. ಅವರ ಉತ್ತಮ ಆರೋಗ್ಯ ಮತ್ತು ದೀರ್ಘ ಜೀವನಕ್ಕೆ ಪ್ರಾರ್ಥನೆ ಮಾಡುತ್ತೇನೆ," ಎಂದಿದ್ದಾರೆ.

ವಿಶೇಷ ಚೇತನರ ಅತಿಥಿಗಳು

ವಿಶೇಷ ಚೇತನರ ಅತಿಥಿಗಳು

ತಮ್ಮ ಹುಟ್ಟುಹಬ್ಬದ ದಿನ ನಿವಾಸಕ್ಕೆ ವಿಶೇಷ ಚೇತನ ಮಕ್ಕಳನ್ನು ವಿಶೇಷ ಅತಿಥಿಗಳಾಗಿ ಎಲ್.ಕೆ ಅಡ್ವಾಣಿ ಆಹ್ವಾನಿಸಿದ್ದರು.

ತಾವೇ ಉಪಹಾರ ಬಡಿಸಿದ ಅಡ್ವಾಣಿ

ತಾವೇ ಉಪಹಾರ ಬಡಿಸಿದ ಅಡ್ವಾಣಿ

ಅಂಧ ಮಕ್ಕಳಿಗೆ ಸ್ವತಃ ಅಡ್ವಾಣಿ ತಮ್ಮ ಕೈಯಾರೆ ತಿನಿಸುಗಳನ್ನು ಬಡಿಸಿ ತಾವೂ ಅವರ ಜತೆಯಲ್ಲಿ ಉಪಹಾರ ಸೇವಿಸಿದರು. ಅಡ್ವಾಣಿಯವರ ಮನೆಯ ಮುಂಭಾಗದ ಹುಲ್ಲುಹಾಸಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

90 ಮಕ್ಕಳ ಉಪಸ್ಥಿತಿ

90 ಮಕ್ಕಳ ಉಪಸ್ಥಿತಿ

ದೆಹಲಿಯ ಲೋಧಿ ರಸ್ತೆಯ ಅಂಧರ ಶಾಲೆಯ 90 ಮಕ್ಕಳು ಅಡ್ವಾಣಿ ಹುಟ್ಟುಹಬ್ಬಕ್ಕೆ ಸಾಕ್ಷಿಯಾದರು. ಉಪಹಾರದ ನಂತರ ಶಾಲಾ ಮಕ್ಕಳಿಗೆ ಬ್ಯಾಗುಗಳನ್ನು ಹಸ್ತಾಂತರಿಸಲಾಯಿತು.

ಕೈತುತ್ತು ತಿನ್ನಿಸಿದ ಅಡ್ವಾಣಿ

ಕೈತುತ್ತು ತಿನ್ನಿಸಿದ ಅಡ್ವಾಣಿ

ಅಂಧ ಹುಡುಗನೊಬ್ಬನಿಗೆ ಅಡ್ವಾಣಿ ತುತ್ತು ತಿನ್ನಿಸುತ್ತಿರುವ ಚಿತ್ರ ಗಮನ ಸೆಳೆಯುವಂತಿದೆ. ಮಾಗಿದ ರಾಜಕಾರಣಿಯ ಅಂತಃಕರಣ ಈ ಮೂಲಕ ಚಿತ್ರದಲ್ಲಿ ಸೆರೆಯಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP veteran L K Advani today celebrated his 90th birthday with visually challenged children, even as a host of top party ministers greeted him at his residence here.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ