Adidas: ವಿಶ್ವದ ಪ್ರಮುಖ ಅಡಿಡಾಸ್ ಸಂಸ್ಥೆಯಲ್ಲಿ ಭಾರೀ ಉದ್ಯೋಗ ಕಡಿತ: ಗುರಗಾಂವ್ ಟೆಕ್ ಹಬ್ ಉದ್ಯೋಗಿಗಳ ವಜಾ!
ದೇಶದ ಪ್ರಮುಖ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿವೆ. ಈ ರೀತಿ ಕೆಲಸದಿಂದ ಉದ್ಯೋಗಿಗಳನ್ನು ತೆಗುದು ಹಾಕಿದ ಕಂಪನಿಗಳ ಸಾಲಿಗೆ ಪ್ರತಿಷ್ಠಿತ ಅಡಿಡಾಸ್ / Adidas ಕಂಪನಿ ಸೇರಿದೆ. ಅಡಿಡಾಸ್ ಭಾರತದ ಗುರಗಾಂವ್‌ನಲ್ಲಿರುವ ತನ್ನ ಇಂಡಿಯಾ ಟೆಕ್ ಹಬ್‌ನಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿದೆ. ಅಡಿಡಾಸ್ ಕಂಪನಿಯ ಈ ನಿರ್ಧಾರವು 700 ಉದ್ಯೋಗಿಗಳ ಸುಮಾರು ಅರ್ಧದಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಡಿಡಾಸ್ ಅಥ್ಲೆಟಿಕ್ ಉಡುಪು ಮತ್ತು ಪಾದರಕ್ಷೆಗಳ ಕಂಪನಿ ಆಗಿದೆ. ಸೆಪ್ಟೆಂಬರ್ 15ರ ಮಂಗಳವಾರ ಕಂಪನಿಯ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆಯನ್ನು ದೃಢಪಡಿಸಿದೆ.
ಅಡಿಡಾಸ್ ಸಂಸ್ಥೆಯು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವ ವಿಚಾರವನ್ನು ದೃಢಪಡಿಸಿದೆ. ಆದರೆ ಎಷ್ಟು ಜನ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ ಎನ್ನುವುದನ್ನು ದೃಢಪಡಿಸಿಲ್ಲ. ಕಾರ್ಯಪಡೆಯನ್ನು ಕಡಿಮೆ ಮಾಡುವುದು ಪ್ರಕ್ರಿಯೆಗಳನ್ನು ಸರಳಗೊಳಿಸಲು ಮತ್ತು ವೇಗವಾಗಿ ಬದಲಾಗುತ್ತಿರುವ ವ್ಯವಹಾರದ ಅಗತ್ಯಗಳನ್ನು ಪೂರೈಸಲು ತೆಗೆದುಕೊಂಡ ಕಠಿಣ ನಿರ್ಧಾರ ಇದಾಗಿದೆ ಎಂದು ಜರ್ಮನ್ ಕಂಪನಿ ಹೇಳಿದೆ.

ಭಾರತದ ಗುರಗಾಂವ್‌ನಲ್ಲಿ ಅಡಿಡಾಸ್ ಕಂಪನಿಯಿಂದ ಉದ್ಯೋಗಿಗಳ ವಜಾ
ಅಡಿಡಾಸ್ ಸಂಸ್ಥೆಯು ಗುರುರಾಂವ್‌ನಲ್ಲಿ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ. ಸಾಫ್ಟ್ಎಂಜಿನಿಯರ್‌ಗಳು, ಡೇಟಾ ವಿಜ್ಞಾನಿಗಳು ಮತ್ತು ಡೇಟಾ ಎಂಜಿನಿಯರ್‌ಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. 2021 ರಲ್ಲಿ ಪ್ರಾರಂಭವಾದ ಇಂಡಿಯಾ ಟೆಕ್ ಹಬ್ ಕಚೇರಿಯು ಅಡಿಡಾಸ್ ಉತ್ಪನ್ನಗಳಲ್ಲಿ ಕೆಲಸ ಮಾಡಲು ಉನ್ನತ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಪ್ರತಿಭೆಗಳನ್ನು ಆಕರ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಐದು ವರ್ಷಗಳ ನಂತರ ಸಂಸ್ಥೆಯ 300 ರಿಂದ 350 ಉದ್ಯೋಗಿಗಳು ಕೆಲಸದಿಂದ ತೆಗೆದು ಹಾಕಿದೆ.
ಎರಡು ಗುಂಪುಗಳಾಗಿ ವಿಭಜನೆ
ಇನ್ನು ಅಡಿಡಾಸ್ ಸಂಸ್ಥೆಯಲ್ಲಿ ಉದ್ಯೋಗಿಗಳನ್ನು ಎರಡು ಹಂತದಲ್ಲಿ ವಿಭಜನೆ ಮಾಡಲಾಗಿದೆ. ಕಂಪನಿಯ ಪ್ರಮುಖ ಉದ್ಯೋಗಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಗುಂಪಿಗೆ ಸೆಪ್ಟೆಂಬರ್ 15 ರಂದು ತಮ್ಮ ಲೇಆಫ್ (Layoff) ಲೆಟರ್‌ಗಳು ಬಂದಿದ್ದವು. ಅದೇ ದಿನ ನಡೆದ ಸಭೆಯಲ್ಲಿ ಉದ್ಯೋಗಿಗಳಿಗೆ ಉದ್ಯೋಗಿದಿಂದ ತೆಗೆಯುವ ಬಗ್ಗೆ ತಿಳಿಸಲಾಗಿದೆ. ಎರಡನೇ ಗುಂಪನ್ನು ಡಿಸೆಂಬರ್ 15 ರವರೆಗೆ ತಮ್ಮ ಜವಾಬ್ದಾರಿಗಳನ್ನು ಸಹೋದ್ಯೋಗಿಗಳಿಗೆ ಹಸ್ತಾಂತರಿಸಲು ಕೆಲಸ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ಹೇಳಲಾಗಿದೆ.
ಉದ್ಯೋಗಿಗಳ ವಜಾ ದೃಢಪಡಿಸಿದ ಅಡಿಡಾಸ್
ಇನ್ನು ಕಂಪನಿಯು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವುದನ್ನು ದೃಢಪಡಿಸಿದೆ. ನಮ್ಮ ವ್ಯವಹಾರದ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವ ವಿಧಾನವನ್ನು ಬದಲಾಯಿಸುವ ನಿರಂತರ ಪ್ರಯತ್ನದ ಭಾಗವಾಗಿ, ಭಾರತದಲ್ಲಿ ನಮ್ಮ ತಂತ್ರಜ್ಞಾನ ಸಂಸ್ಥೆಯೊಳಗೆ ಹಲವು ವಿಭಾಗಗಳನ್ನು ಕಡಿಮೆ ಮಾಡುವ ಕಠಿಣ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ಈ ಬದಲಾವಣೆಗಳು ನಮ್ಮ ಸಂಸ್ಥೆಯ ವಿಭಾಗಗಳನ್ನು ಸರಳೀಕರಿಸಲು, ನಿರ್ಣಾಯಕ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ವ್ಯವಹಾರ ಮತ್ತು ತಂತ್ರಜ್ಞಾನ ಪರಿಸರದಲ್ಲಿ ದೀರ್ಘಕಾಲೀನ ಯಶಸ್ಸಿನ ಉದ್ದೇಶದಿಂದ ಈ ಮಾದರಿಯನ್ನು ಅನುಸರಿಸಲಾಗಿದೆ ಎಂದು ಸಂಸ್ಥೆ ಹೇಳಿದೆ ಎಂದು ವರದಿಯಾಗಿದೆ.
ಅಡಿಡಾಸ್ ಸಂಸ್ಥೆಗೆ ಉದ್ಯೋಗಿಗಳು ಅನೇಕ ಕೊಡುಗೆ ನೀಡಿದ್ದಾರೆ. ನಾವು ನಮ್ಮ ಸಹೋದ್ಯೋಗಿಗಳಿಗೆ ತುಂಬಾ ಕೃತಜ್ಞರಾಗಿದ್ದೇವೆ. ಈ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಳ್ಳುತ್ತಿರುವ ಉದ್ಯೋಗಿಗಳಿಗೆ ಕಾಳಜಿ, ಗೌರವ ಮತ್ತು ಅಗತ್ಯವಾದ ನೆರವು ನೀಡಲು ನಾವು ಬದ್ಧರಾಗಿದ್ದೇವೆ ಎಂದೂ ಸಂಸ್ಥೆ ಹೇಳಿಕೊಂಡಿದೆ.


Click it and Unblock the Notifications
