ನಟ ವಿಜಯ್ ರಾಜಕೀಯ ರ‍್ಯಾಲಿಗೆ ದಿಢೀರ್ ಆಘಾತ, 2 ಅಭಿಮಾನಿಗಳ ಸಾವಿನಿಂದ ಆತಂಕ... Actor Vijay

ನಟ ವಿಜಯ್ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಹವಾ ಎಬ್ಬಿಸಲು ಸಜ್ಜಾಗಿದ್ದು, ಕೋಟ್ಯಂತರ ಅಭಿಮಾನಿಗಳ ಬೆಂಬಲ ಪಡೆದು ಚುನಾವಣೆ ಗೆದ್ದು ಬೀಗುವ ಹುಮ್ಮಸ್ಸಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸಾಲು ಸಾಲು ರಾಜಕೀಯ ರ‍್ಯಾಲಿ ಆಯೋಜನೆ ಮಾಡುತ್ತಾ, ಬೃಹತ್ ಚುನಾವಣಾ ಸಭೆಗಳನ್ನ ನಡೆಸುತ್ತಿದ್ದಾರೆ ತಮಿಳು ನಟ ವಿಜಯ್. ಹೀಗಿದ್ದಾಗ ದಿಢೀರ್ ತಮಿಳುನಾಡು ರಾಜಕೀಯ ವಲಯದಲ್ಲಿ ಬಿರುಗಾಳಿ ಎದ್ದಿದ್ದು, ಸೇಲಂನಲ್ಲಿ ಇಂದು ನಟ ವಿಜಯ್ ಬೃಹತ್ ರಾಜಕೀಯ ರ‍್ಯಾಲಿ ಆಯೋಜನೆ ಮಾಡಿದ್ದರು. ಹೀಗಿದ್ಧಾಗಲೇ ನಟ ವಿಜಯ್ ರಾಜಕೀಯ ರ‍್ಯಾಲಿಗೆ ದಿಢೀರ್ ಆಘಾತವೇ ಎದುರಾಗಿದೆ.

ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ಸಿನಿಮಾ ನಟ & ನಟಿಯರು ರಾಜಕೀಯಕ್ಕೆ ಎಂಟ್ರಿ ಕೊಡುವುದು & ಅಬ್ಬರಿಸುವುದು ಮಾಮೂಲಿ. ಇದಕ್ಕೆ ಹಲವು ನಟ & ನಟಿಯರು ಉದಾಹರಣೆಯೂ ಆಗಿದ್ದಾರೆ. ಸಿನಿಮಾ ನಟರು ರಾಜಕೀಯಕ್ಕೆ ಬರುವ ಬೆಳವಣಿಗೆ ಹೆಚ್ಚಾಗುತ್ತಿದೆ, ಈಗಾಗಲೇ ನೂರಾರು ನಟರು ಹೀಗೆ ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದು ಸೌಂಡ್ ಕೂಡ ಮಾಡಿದ್ದಾರೆ. ಅದೇ ರೀತಿ ಕರ್ನಾಟಕ ನೆರೆ ರಾಜ್ಯ ತಮಿಳುನಾಡು ರಾಜಕೀಯ ಅಖಾಡದಲ್ಲಿ ನಟ ವಿಜಯ್ ಅಬ್ಬರ ಜೋರಾಗಿದೆ. ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವ ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿ ಆಗುವ ಕನಸು ಕೂಡ ಕಾಣುತ್ತಿದ್ದಾರೆ. ಆದರೆ ನಟ ವಿಜಯ್ ಅವರಿಗೆ ದಿಢೀರ್ ಸಾಲು ಸಾಲು ಆಘಾತ ಎದುರಾಗುತ್ತಿದೆ.

Actor Vijay

ರಾಜಕೀಯ ಸಮಾವೇಶದಲ್ಲಿ ಭೀಕರ ಘಟನೆ

ನಟ ವಿಜಯ್ ಇಂದು ತಮಿಳುನಾಡು ರಾಜ್ಯದ ಸೇಲಂನಲ್ಲಿ ವಿಶೇಷ ರಾಜಕೀಯ ಸಮಾವೇಶ ಆಯೋಜನೆ ಮಾಡಿದ್ದರು. ಕಳೆದ ಬಾರಿ ಇದೇ ರೀತಿ ರಾಜಕೀಯ ಸಮಾವೇಶ ನಡೆಯುವಾಗ ದುರಂತ ಸಂಭವಿಸಿ, ಹಲವರು ಜೀವ ಕಳೆದುಕೊಂಡಿದ್ದರು. ಹೀಗಾಗಿಯೇ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ಇಂದು ಮತ್ತೆ ಅದೆಲ್ಲವನ್ನೂ ಮೀರಿ ಮತ್ತೊಮ್ಮೆ ಮರಣ ಮೃದಂಗ ಮೊಳಗಿ, ಇಬ್ಬರು ಉಸಿರು ಚೆಲ್ಲಿದ್ದಾರೆ ವಿಜಯ್ ಅವರ ರಾಜಕೀಯ ಸಮಾವೇಶದಲ್ಲಿ. ಹಾಗಾದರೆ ಅಸಲಿಗೆ ಈ ಕಾರ್ಯಕ್ರಮದಲ್ಲಿ ಆಗಿದ್ದೇನು? ಮುಂದೆ ಓದಿ.

3 ಗಂಟೆ ಕಾಲ ಬಿಸಿಲಿನಲ್ಲಿ ಒದ್ದಾಟ

37 ವರ್ಷದ ಸೂರಜ್, ಇನ್ನೊಬ್ಬ ವ್ಯಕ್ತಿ ಶವವಾಗಿ ಸಿಕ್ಕಿರುವುದು ಆತಂಕವನ್ನ ಹೆಚ್ಚು ಮಾಡಿದೆ. ಸೂರಜ್ ಮೂರ್ಛೆ ಹೋಗಿದ್ದು ಕೂಡಲೇ ಅವರನ್ನು ಬದುಕಿಸುವ ಪ್ರಯತ್ನ ಸ್ಥಳದಲ್ಲಿ ನಡೆದಿದೆ. ಆದರೂ ಚಿಕಿತ್ಸೆ ಫಲಕಾರಿ ಆಗದೆ ಅವರು ಮೃತಪಟ್ಟಿದ್ದು, ಇದೀಗ ನಟ ವಿಜಯ್ ಅವರ ರಾಜಕೀಯಕ್ಕೆ ದೊಡ್ಡ ಅಡ್ಡಿ ಎದುರಾಗುವ ಎಲ್ಲಾ ರೀತಿಯ ಆತಂಕ ಸೃಷ್ಟಿಯಾಗಿದೆ. ಸೇಲಂನ ಸೀಲನಾಯಕನಪಟ್ಟಿ ಬಳಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದ್ದು, ಹೀಗಿದ್ದರೂ ಸಮಾವೇಶಕ್ಕೆ ಬರುವ ಜನರಿಗೆ ನೀರು ಮತ್ತು ಜ್ಯೂಸ್ ವಿತರಣೆ ಮಾಡಲಾಗಿತ್ತು. ಆದರೆ ಬಿಸಿಲು ಹೆಚ್ಚಾಗಿದ್ದ ಕಾರಣಕ್ಕೆ ಸಾವಿನ ಸುದ್ದಿ ಆಘಾತವನ್ನೇ ನೀಡಿದೆ. ಸತತ 3 ಗಂಟೆಗಳ ಕಾಲ ಸಾವಿರಾರು ಜನರು ಬಿಸಿಲಿನಲ್ಲಿ ನಿಂತು ಭಾಷಣ ಕೇಳಿದ್ದ ಹಿನ್ನೆಲೆ ಇಷ್ಟೆಲ್ಲಾ ಸಮಸ್ಯೆ ಆಗಿದೆ ಎಂದು ಆರೋಪ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+