Madhavan: ಮಕ್ಕಳಿಗೆ ಎಲ್ಲವನ್ನೂ ಕಲಿಸಬೇಕಿಲ್ಲ; ಸ್ವಂತ ಯೋಚನೆ, ತಪ್ಪು ಮಾಡುವ ಅವಕಾಶ ಇರಲಿ: ನಟ ಮಾಧವನ್

ಮಕ್ಕಳಿಗೆ ಶಿಕ್ಷಣ ಎನ್ನುವುದು ಬಹಳ ಮುಖ್ಯ. ಆದರೆ ಆ ಶಿಕ್ಷಣ ಹೇಗಿರಬೇಕು ಎನ್ನುವುದು ಮುಖ್ಯವಾಗಿರುತ್ತದೆ. ಮಕ್ಕಳಲ್ಲಿ ಯೋಚನಾ ಲಹರಿಯನ್ನು ಬೆಳೆಸಬೇಕು. ಸಮಸ್ಯೆಗಳು ಎದುರಾದಾಗ ತಾವೇ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಅವರಿಗೆ ಬರಬೇಕು. ಪ್ರತಿಯೊಂದಕ್ಕೂ ಪೋಷಕರು ಜೊತೆ ನಿಲ್ಲುವುದು. ಎಲ್ಲವನ್ನೂ ಅವರೇ ಹೇಳಿಕೊಡುವುದು, ಯಾವ ಕಷ್ಟವೂ ಆಗದಂತೆ ನೋಡಿಕೊಳ್ಳುವುದು ಖಂಡಿತಾ ಶಿಕ್ಷಣವೂ ಅಲ್ಲ, ಮಕ್ಕಳಿಗೆ ಬದುಕಲು ಕಲಿಸುವ ರೀತಿಯೂ ಅಲ್ಲ. ಈ ವಿಚಾರವನ್ನು ಆರ್‌ ಮಾಧವನ್‌ ಒಂದು ವಿಡಿಯೋ ಶೇರ್‌ ಮಾಡುವ ಮೂಲಕ ವಿವರಿಸಿದ್ದಾರೆ.

ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ ಮಕ್ಕಳಿಗೆ ಯಾವುದಾದರೊಂದು ವಿಷಯದ ಬಗ್ಗೆ ಗೊತ್ತಿಲ್ಲ ಎಂದರೆ ಸಾಕು ತಂದೆ ತಾಯಿ ಮಗುವಿಗೆ ಆ ವಿಷಯವನ್ನು ಹೇಳಿಕೊಡಲು ಮುಂದಾಗುತ್ತಾರೆ. ಪೋಷಕರು ಮಾಡುವ ತಪ್ಪು ಇದೇ. ಐಐಟಿ-ದೆಹಲಿಯ ಪಿಎಚ್‌ಡಿ ಪದವೀಧರೆ ಸುಗತ ಮಿತ್ರಾ ಅವರು 1999 ರಲ್ಲಿ ನಡೆಸಿದ ಪ್ರಯೋಗವನ್ನು ಆರ್ ಮಾಧವನ್ ಹೈಲೈಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕಿಂಚಿತ್ತೂ ಅರಿವೇ ಇಲ್ಲದ ವಿಷಯವನ್ನು ಕಂಪ್ಯೂಟರ್‌ಗಳನ್ನು ಬಳಸುವ ಮೂಲಕ ಮಕ್ಕಳು ಹೇಗೆ ಕಲಿತುಕೊಂಡಿದ್ದಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ. ಪೋಷಕರು ಪ್ರತೀ ಹಂತದಲ್ಲಿ ಮಕ್ಕಳ ಜೊತೆ ನಿಲ್ಲುವ ಅಗತ್ಯ ಇರುವುದಿಲ್ಲ. ಕೆಲವೊಮ್ಮೆ ಅವರು ಹಿಂದೆ ಸರಿಯಲೇಬೇಕು. ಸ್ವತಂತ್ರವಾಗಿ ಕೆಲವು ವಿಚಾರಗಳನ್ನು ಅನ್ವೇಷಿಸಲು ಮಕ್ಕಳಿಗೆ ಅವಕಾಶ ನೀಡಲೇ ಬೇಕು ಎನ್ನುವುದನ್ನು ಸೂಚಿಸುತ್ತದೆ.

Madhavan

ಆರ್ ಮಾಧವನ್ ಅವರು ಸುಗತ ಮಿತ್ರ ಅವರ 1999 ರ ಪ್ರಯೋಗವನ್ನು ಹಂಚಿಕೊಂಡಿದ್ದಾರೆ. ಮಕ್ಕಳು ಯಶಸ್ವಿಯಾಗಿ ಬೆಳೆಯುತ್ತಾರೆ, ಆದರೆ ಪೋಷಕರು ಇದಕ್ಕೆ ವಿರುದ್ಧವಾಗಿ ಹೇಗೆ ನಡೆದುಕೊಳ್ಳುತ್ತಿದ್ದಾರೆ ಎನ್ನುವ ಹೇಳಿಕೆಯೊಂದಿಗೆ ಪ್ರಾರಂಭವಾಗುವ ವೀಡಿಯೊವನ್ನು ಆರ್ ಮಾಧವನ್ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಶೇರ್‌ ಮಾಡಿದ್ದಾರೆ. ಮಕ್ಕಳ ಮನಶ್ಶಾಸ್ತ್ರಜ್ಞೆ ನತಾಶಾ ಫೆರ್ನಾಂಡಿಸ್ ಷಾ ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದರು. 1999 ರಲ್ಲಿ ಸುಗತ ಮಿತ್ರ ಅವರು ನಡೆಸಿದ ಹೋಲ್‌ ಇನ್‌ ದಿ ವಾಲ್‌ ಪ್ರಯೋಗದ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಐಐಟಿ-ದೆಹಲಿಯಿಂದ ಪಿಎಚ್‌ಡಿ ಪದವಿ ಪಡೆದ ಮಿತ್ರ, ದೆಹಲಿಯ ಕೊಳೆಗೇರಿಯೊಂದರಲ್ಲಿ ಇಟ್ಟಿಗೆ ಗೋಡೆಯಲ್ಲಿ ಕೊರೆದ ರಂಧ್ರದಲ್ಲಿ ಕಂಪ್ಯೂಟರ್ ಅನ್ನು ಇರಿಸಿದ್ದರು. ಆ ಕಂಪ್ಯೂಟರ್ ಅನ್ನು ಹೈ-ಸ್ಪೀಡ್ ಇಂಟರ್ನೆಟ್‌ಗೆ ಕನೆಕ್ಟ್‌ ಮಾಡಲಾಗಿತ್ತು. ನಂತರ ಮಕ್ಕಳನ್ನು ಅಲ್ಲಿ ಬಿಡಲಾಯಿತು. ಆ ಮಕ್ಕಳಿಗೆ ಇಂಗ್ಲಿಷ್ ಗೊತ್ತಿರಲಿಲ್ಲ. ಆದರೆ ಕೆಲವೇ ವಾರಗಳಲ್ಲಿ ಆ ಮಕ್ಕಳು ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದು, ಆಟಗಳನ್ನು ಆಡುವುದು ಸೇರಿದಂತೆ ಕಂಪ್ಯೂಟರ್ ಅನ್ನು ಹೇಗೆ ಬಳಸುವುದು ಎನ್ನುವುದನ್ನು ಅವರಷ್ಟಕ್ಕೇ ಕಲಿತರು.

ಡಿಎನ್‌ಎ ಬಗ್ಗೆಯೂ ಕಲಿಯ ಮಕ್ಕಳು

ಮಿತ್ರ ನಂತರ ಈ ಪ್ರಯೋಗವನ್ನು ಹೆಚ್ಚು ಸಂಕೀರ್ಣವಾಗಿಸುವ ನಿರ್ಧಾರಕ್ಕೆ ಬರುತ್ತಾರೆ. ನತಾಶಾ ಫರ್ನಾಂಡಿಸ್ ಷಾ ಹಂಚಿಕೊಂಡ ವೀಡಿಯೊದ ಪ್ರಕಾರ, ಅವರು ಭಾರತದ ಹಳ್ಳಿಯಲ್ಲಿ ಈ ಪ್ರಯೋಗವನ್ನು ಪುನರಾವರ್ತಿಸಿದರು. ಈ ಬಾರಿ, ಕಂಪ್ಯೂಟರ್‌ಗಳಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಡಿಎನ್‌ಎ ಬಗ್ಗೆ ಮಾಹಿತಿಗಳನ್ನು ಮೊದಲೇ ನೀಡಲಾಗಿತ್ತು. ಆದರೆ ಈ ಬಾರಿ ಕೂಡಾ ಎಲ್ಲವನ್ನೂ ಇಂಗ್ಲಿಷ್‌ನಲ್ಲಿಯೇ ಬರೆಯಲಾಗಿತ್ತು.

ಈ ವಿಷಯದಲ್ಲಿ ಮಕ್ಕಳಿಗೆ ಯಾವುದೇ ಔಪಚಾರಿಕ ಬೋಧನೆ ನೀಡಿಲ್ಲದಿದ್ದರೂ ಪರೀಕ್ಷೆಗಳಲ್ಲಿ ಮಾತ್ರ 30% ಅಂಕಗಳನ್ನು ಗಳಿಸುತ್ತಾರೆ. ಆದರೆ ಡಿಎನ್‌ಎ ಬಗ್ಗೆ ತಾವೇ ಸ್ವತಂತ್ರವಾಗಿ ಕಲಿಯುವಷ್ಟು ಯಶಸ್ವಿಯಾಗುತ್ತಾರೆ. ಈ ರಿಸಲ್ಟ್‌ ಮಿತ್ರಾ ಅವರನ್ನು ಆಶ್ಚರ್ಯಗೊಳಿಸಿತು. ಈ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಬೆಂಬಲ ಸಿಕ್ಕಿದರೆ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲರು ಎನ್ನುವುದು ಅವರ ನಂಬಿಕೆಯಾಗಿತ್ತು.

ಪ್ರೋತ್ಸಾಹದ ಮಾತುಗಳೇ ಸಾಕು ಬೆಳವಣಿಗೆಗೆ

ನಂತರ ಮಿತ್ರಾ ಆ ಮಕ್ಕಳ ಜೊತೆಗೆ ಇರಲು ಒಬ್ಬ ಸ್ಥಳೀಯ ಮಹಿಳೆಯನ್ನು ನೇಮಿಸುತ್ತಾರೆ. ಆ ಮಕ್ಕಳಿಗೆ ವಿಷಯವನ್ನು ಕಲಿಸುವುದು ಅಥವಾ ಅವರಿಗೆ ಉತ್ತರ ಹೇಳಿಕೊಡುವುದು ಈ ಮಹಿಳೆಯ ಕೆಲಸ ಆಗಿರಲಿಲ್ಲ. ಬದಲಿಗೆ ಮಕ್ಕಳ ಬೆನ್ನಿಗೆ ನಿಂತು ಅವರನ್ನು ಬೆಂಬಲಿಸುವುದಷ್ಟೇ ಅವರು ಮಾಡಬೇಕಾಗಿದ್ದ ಕೆಲಸ. ಎರಡು ತಿಂಗಳೊಳಗೆ, ಮಕ್ಕಳು ತಮ್ಮ ಪರೀಕ್ಷೆಗಳಲ್ಲಿ 50% ಅಂಕಗಳನ್ನು ಗಳಿಸಿದರು.

ತಪ್ಪುಗಳಿಂದಲೇ ಕಲಿಯಬೇಕು

ಮಕ್ಕಳಿಗೆ ಎಲ್ಲವನ್ನೂ ಕಲಿಸುವ ಅಗತ್ಯವಿಲ್ಲ ಎನ್ನುವುದನ್ನು ಆರ್ ಮಾಧವನ್ ಶೇರ್‌ ಮಾಡಿರುವ ವೀಡಿಯೊದಲ್ಲಿ ಒತ್ತಿ ಹೇಳಲಾಗಿದೆ. ಇದರ ಬದಲಿಗೆ ಮೂಲ ಸೌಕರ್ಯಗಳನ್ನು, ಪರಿಕರಗಳನ್ನು ಒದಗಿಸಿ ಕೊಡಬೇಕು. ಅವರನ್ನು ಯೋಚಿಸಲು ಬಿಡಬೇಕು. ಪ್ರೋತ್ಸಾಹದ ಮಾತುಗಳನ್ನು ಆಡಬೇಕು. ಇಷ್ಟಿದ್ದರೆ ಮಕ್ಕಳು ಸಮಸ್ಯೆಯನ್ನು ಗೆದ್ದು ಬರುತ್ತಾರೆ. ಸಮಸ್ಯೆ ಎದುರಾದ ಕೂಡಲೇ ಪರಿಹಾರವನ್ನು ತಂದು ಮಕ್ಕಳ ಮುಂದೆ ಇಡುವುದು ಜಾಣತನವಲ್ಲ. ಮಕ್ಕಳಿಗೆ ಪ್ರಯೋಗ ಮಾಡಲು, ಪ್ರಯತ್ನ ಮಾಡಲು ಅವಕಾಶ ನೀಡಬೇಕು. ತಪ್ಪುಗಳನ್ನು ಮಾಡಲು ಬಿಡಬೇಕು. ಆ ತಪ್ಪುಗಳಿಗೆ ಉತ್ತರಗಳನ್ನು ಸ್ವತಃ ಹುಡುಕಲು ಅವಕಾಶ ಒದಗಿಸಬೇಕು.

ಆರ್ ಮಾಧವನ್ ಹಂಚಿಕೊಂಡಿರುವ ಈ ಪ್ರಯೋಗವು ಪೋಷಕರು ಮತ್ತು ಶಿಕ್ಷಣದ ಬಗ್ಗೆ ಬೇರೆಯದ್ದೇ ವಿಧಾನವನ್ನು ತೋರಿಸುತ್ತದೆ. ಮಕ್ಕಳು ಸ್ವಾಭಾವಿಕವಾಗಿಯೇ ಕುತೂಹಲಿಗಳಾಗಿರಬಹುದು. ಅವರಿಗೆ ಸರಿಯಾದ ಸಂಪನ್ಮೂಲಗಳು ಮತ್ತು ಸಾಕಷ್ಟು ಸ್ವಾತಂತ್ರ್ಯವನ್ನು ನೀಡಿದರೆ ಅವರು ನಿರೀಕ್ಷೆಯನ್ನು ಮೀರಿ ಸಾಧನೆ ಮಾಡಬಹುದು. ಇಲ್ಲಿ ಪೋಷಕರಿಗೆ ಹೇಳುವ ಕಿವಿ ಮಾತು ಎಂದರೆ ಆರಾಮವಾಗಿ ಇರಿ. ಮಕ್ಕಳನ್ನು ಪ್ರೋತ್ಸಾಹಿಸಿ ಫ್ರೀ ಆಗಿ ಇರಲು ಬಿಡಿ. ಅವರ ಕೆಲಸ ಸಾಧನೆ ನೋಡಿ ನೀವೇ ಆಶ್ಚರ್ಯಪಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+