ಜುಲೈನಲ್ಲಿ ಬಹುಕಾಲದ ಗೆಳೆಯನನ್ನು ಮದುವೆಯಾಗಲಿದ್ದಾರೆ ಶರ್ಮಿಳಾ

ಹೋರಾಟಗಾರ್ತಿ, ಮಣಿಪುರದ ಇರೋಮ್ ಶರ್ಮಿಳಾ ತಮ್ಮ ಬಹುಕಾಲದ ಗೆಳೆಯ, ಬ್ರಿಟಿಷ್ ಮೂಲದ ಡೆಸ್ಮಂಡ್ ಕುಠಿನೋ ಅವರನ್ನು ಜುಲೈನಲ್ಲಿ, ತಮಿಳುನಾಡಿನಲ್ಲಿ ಮದುವೆಯಾಗಲಿದ್ದಾರೆ. ಈ ಬಗ್ಗೆ ಅವರ ಕುಟುಂಬದವರಿಗೇ ಇನ್ನೂ ವಿಷಯ ತಿಳಿಸಿಲ್ಲವಂತೆ

ಇಂಫಾಲ್, ಮೇ 8: ಹೋರಾಟಗಾರ್ತಿ ಇರೋಮ್ ಶರ್ಮಿಳಾ ಚಾನು ತಮ್ಮ ಬಹುಕಾಲದ ಗೆಳೆಯ ಬ್ರಿಟಿಷ್ ಮೂಲದ ಡೆಸ್ಮಂಡ್ ಕುಟಿನ್ಹೋ ಅವರನ್ನು ಜುಲೈನಲ್ಲಿ ಮದುವೆಯಾಗಲಿದ್ದಾರೆ. "ನಾವು ಮದುವೆ ದಿನವನ್ನು ನಿಗದಿ ಮಾಡಿಕೊಂಡಿಲ್ಲ. ಆದರೆ ಜುಲೈ ಕೊನೆಯಲ್ಲಿ, ತಮಿಳುನಾಡಿನಲ್ಲಿ ಅಂತ ಅಂದುಕೊಂಡಿದ್ದೀವಿ" ಎಂದು ಶರ್ಮಿಳಾ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಮಣಿಪುರದಲ್ಲಿ ಜಾರಿಯಲ್ಲಿರುವ ವಿವಾದಿತ ಕಾಯ್ದೆ ವಿರುದ್ಧ ಹದಿನಾರು ವರ್ಷಗಳ ಉಪವಾಸ ಸತ್ಯಾಗ್ರಹ ನಡೆಸಿದ ನಂತರ ಇರೋಮ್ ಶರ್ಮಿಳಾ ಪೀಪಲ್ಸ್ ರಿಸರ್ಜೆನ್ಸ್ ಅಂಡ್ ಜಸ್ಟೀಸ್ ಅಲಯನ್ಸ್ ಎಂಬ ಪಕ್ಷವನ್ನು ಸ್ಥಾಪಿಸಿದ್ದರು. ಆ ನಂತರ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಒಕ್ರಾಂ ಇಬೋಬಿ ಸಿಂಗ್ ವಿರುದ್ಧ ತೌಬಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ತೊಂಬತ್ತು ಚಿಲ್ಲರೆ ಮತಗಳನ್ನು ಪಡೆಯಲಷ್ಟೇ ಸಾಧ್ಯವಾಯಿತು.[ಕೇವಲ 90 ವೋಟು ಪಡೆದ ಶರ್ಮಿಳಾ ರಾಜಕೀಯಕ್ಕೆ ಗುಡ್ ಬೈ]

Activist Irom Sharmila all set to marry her British boyfriend in July

ಹೀನಾಯ ಸೋಲಿನ ನಂತರ ಸ್ವಲ್ಪ ಸಮಯ ಬಿಡುವು ತೆಗೆದುಕೊಂಡ ಅವರು, ದಕ್ಷಿಣ ಭಾರತ ರಾಜ್ಯಗಳ ಪ್ರವಾಸದಲ್ಲಿದ್ದಾರೆ. "ನಾನು ನಾಗರಿಕ ಹೋರಾಟಗಾರ್ತಿಯಾಗಿ ಮುಂದುವರಿಯುತ್ತೇನೆ. ಆದರೆ ರಾಜಕಾರಣಿಯಾಗಿ ಅಲ್ಲ. ಮುಂದೆ ಚುನಾವಣೆಗಳಿಗೆ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದೇನೆ. ನನ್ನ ಮದುವೆ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೇಲೆ ಒತ್ತಡ ಹಾಕಿಸುತ್ತೇನೆ.[ಹಣ, ತೋಳ್ಬಲ ಬಹಿರಂಗವಾಗಿಯೇ ಬಳಕೆ: ಇರೋಮ್ ಶರ್ಮಿಳಾ]

"ವಿವಾದಿತ ಕಾನೂನನ್ನು ಸರಕಾರ ಹಿಂಪಡೆಯುವುದಕ್ಕೆ ಒತ್ತಡ ಹಾಕಿಸುತ್ತೇನೆ" ಎಂದು ಅವರು ಹೇಳಿದ್ದಾರೆ. ಆಕೆ ಮದುವೆಯಾಗುತ್ತಿರುವ ಡೆಸ್ಮಂಡ್ ಕುಟುಂಬದವರು ಮೂಲತಃ ಗೋವಾದವರು. ತಾಂಜೇನಿಯಾದಲ್ಲಿ ಜನಿಸಿದ ಅವರು, ಆ ನಂತರ ಬ್ರಿಟಿಷ್ ನಾಗರಿಕರಾದರು. ಈವರೆಗೆ ನನ್ನ ಕುಟುಂಬಕ್ಕೆ ಈ ವಿಷಯ ತಿಳಿಸಿಲ್ಲ. ಅದರಲ್ಲೂ ನನ್ನ ತಾಯಿಗೆ ತಿಳಿಸಿಲ್ಲ. ಸದ್ಯದಲ್ಲೇ ಆವರಿಗೆ ತಿಳಿಸ್ತೀನಿ" ಎಂದು ಶರ್ಮಿಳಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+