ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗ ಕಲಿಸಿದ 'ಅಪರಾಧ'ಕ್ಕೆ ಮುಸ್ಲಿಂ ಮಹಿಳೆಗೆ ಜೀವಬೆದರಿಕೆ ಕರೆ!

|
Google Oneindia Kannada News

ನವದೆಹಲಿ, ನವೆಂಬರ್ 13: ಮುಸ್ಲಿಂ ಯೋಗಶಿಕ್ಷಕಿಯೊಬ್ಬರು ಯೋಗ ಕಲಿಸಿದ್ದಕ್ಕಾಗಿ ಅವರಿಗೆ ಕೊಲೆ ಬೆದರಿಕೆ ಕರೆಗಳು ಬಂದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ವಾರಾಣಸಿಯಲ್ಲಿ ಆರತಿ ಮಾಡಿದ್ದಕ್ಕೆ ಮುಸ್ಲಿಂ ಮಹಿಳೆಯರಿಗೆ ಫತ್ವಾ!ವಾರಾಣಸಿಯಲ್ಲಿ ಆರತಿ ಮಾಡಿದ್ದಕ್ಕೆ ಮುಸ್ಲಿಂ ಮಹಿಳೆಯರಿಗೆ ಫತ್ವಾ!

ರಫೀಯಾ ನಾಜ್ ಎಂಬ ಯೋಗ ಶಿಕ್ಷಕಿ ಮಾಡಿದ ಅಪರಾಧವೆಂದರೆ 'ಯೋಗ ಕಲಿಸಿದ್ದು!' ಅದಕ್ಕೆಂದೇ ಆಕೆಯ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಅಷ್ಟೇ ಅಲ್ಲ, ಮತ್ತೆ ಯೋಗ ಕಲಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ.

Act against those threatening Muslim Yoga teacher: Politicians

"ತನ್ನ ಮೇಲೆ ಕಳೆದ ಮೂರು ವರ್ಷದಿಂದ ಫತ್ವಾ ಹೊರಡಿಸಲಾಗುತ್ತಿದೆ. ನನ್ನ ಮನೆಯ ಮೇಲೆ ಕಲ್ಲೆಸೆಯುವ ಘಟನೆಯೂ ನಡೆಯುತ್ತಿದೆ. ಇತ್ತೀಚೆಗೆ ಕೊಲೆ ಬೆದರಿಕೆ ಕರೆಗಳೂ ಬರುತ್ತಿವೆ" ಎಂದು ಅವರು ಅಲವತ್ತುಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ನೂಪುರ್ ಶರ್ಮಾ, 'ಇದು ನಿಜಕ್ಕೂ ದುರದೃಷ್ಟದ ಸಂಗತಿ. ಹಾಡು ಹಾಡಿದ್ದಕ್ಕೆ, ಚಲನಚಿತ್ರದಲ್ಲಿ ಅಭಿನಯಿಸಿದ್ದಕ್ಕೆ, ಇದೀಗ ಯೋಗ ಕಲಿಸಿದ್ದಕ್ಕೂ ಮಹಿಳೆಯರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಇದು ಸ್ವತಂತ್ರ ರಾಷ್ಟ್ರ. ಭಾರತೀಯ ಸಂವಿಧಾನದಲ್ಲಿ ಮಹಿಳೆಯರಿಗೂ ಸಮಾನ ಹಕ್ಕಿದೆ. ಇಂಥ ಘಟನೆಗಳನ್ನು ನಾವು ಸಹಿಸುವುದಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ತಾನೇ ದೀಪಾವಳಿಯ ಪ್ರಯುಕ್ತ ವಾರಣಾಸಿಯಲ್ಲಿ ಆರತಿ ಮಾಡಿದ್ದಕ್ಕಾಗಿ ಮುಸ್ಲಿಂ ಮಹಿಳೆಯ ವಿರುದ್ಧ ಫತ್ವಾ ಹೊರಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
Cutting across party lines, politicians on Saturday called for ction to be taken against those issuing death threats to a Muslim Yogateacher in Jharkhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X