ಮತ್ತೆ ವಿವಾದದ ಸುಳಿಗೆ ಅಮೀರ್ ಖಾನ್; ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ
ನವದೆಹಲಿ, ಅ.12: ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಮತ್ತು ನಟಿ ಕಿಯಾರಾ ಅಡ್ವಾಣಿ ನಟನೆಯ ಬ್ಯಾಂಕ್ ಜಾಹೀರಾತು ವಿವಾದಕ್ಕೆ ಗುರಿಯಾಗಿದೆ. ಜಾಹೀರಾತಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದೆ.
ಬಾಲಿವುಡ್ ನಟ ಅಮೀರ್ ಖಾನ್ ಮತ್ತು ನಟಿ ಕಿಯಾರಾ ಅಡ್ವಾಣಿ ಅವರನ್ನು ಒಳಗೊಂಡ ಬ್ಯಾಂಕ್ ಜಾಹೀರಾತನ್ನು ಕೆಲವರು ಸಾಮಾಜಿಕ ಮಾಧ್ಯಮಗಳಗಳಲ್ಲಿ ಟೀಕಿಸಿದ ನಂತರ ನಟ ಅಮೀರ್ ಖಾನ್ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಜಾಹೀರಾತುಗಳು ಮತ್ತು ಕೃತ್ಯಗಳಿಂದ ದೂರವಿರಬೇಕು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಬುಧವಾರ ಹೇಳಿದ್ದಾರೆ.
ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನರೋತ್ತಮ್ ಮಿಶ್ರಾ, ಅಮೀರ್ ಖಾನ್ ಭಾರತೀಯ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಜಾಹೀರಾತುಗಳನ್ನು ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತಿನಲ್ಲಿ ಹೆಂಡತಿ ಮನೆಗೆ ಬಲಗಾಲಿಟ್ಟು ಹೋಗುವ ಗಂಡ
ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಂತೆ ಮದುವೆಯ ಬಳಿಕ ಪತ್ನಿ ಗಂಡನ ಮನೆಗೆ ಹೊಸಿಲು ಹೊಕ್ಕುವ ಸಂಪ್ರದಾಯವಿದೆ. ಆದರೆ, ಈ ಬ್ಯಾಂಕ್ ಜಾಹೀರಾತಿನಲ್ಲಿ ನವ ವರ ಅಮೀರ್ ಖಾನ್, ನವ ವಧುವಾಗಿರುವ ಕಿಯಾರಾ ಅಡ್ವಾಣಿಗೆ ಮನೆಗೆ ಹೋಗುವ ವೇಳೆ ಮನೆ ಹೊಕ್ಕುವ ಸಂಪ್ರದಾಯ ಆಚರಿಸಲಾಗುತ್ತದೆ. ಇದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಹಲವು ನೆಟ್ಟಿಗರು ಆರೋಪಿಸಿದ್ದಾರೆ.

ಸಾಂಪ್ರದಾಯಿಕ ಪದ್ಧತಿಗೆ ಜಾಹೀರಾತಿನಲ್ಲಿ ಅವಮಾನ; ಆರೋಪ
ಜಾಹೀರಾತಿನಲ್ಲಿ ಅಮೀರ್ ಖಾನ್ ಮತ್ತು ಕಿಯಾರಾ ಅಡ್ವಾಣಿ ತಮ್ಮ ಮದುವೆಯಿಂದ ಹಿಂತಿರುಗುತ್ತಿರುವ ನವವಿವಾಹಿತರಂತೆ ಕಾಣಿಸಿಕೊಂಡಿದ್ದು, 'ಬಿದಾಯಿ' ಸಮಯದಲ್ಲಿ ಇಬ್ಬರೂ ಅಳಲಿಲ್ಲ ಎಂಬ ಬಗ್ಗೆ ಕಾರಿನಲ್ಲಿ ಕುಳಿತು ಚರ್ಚಿಸುತ್ತಿದ್ದಾರೆ.
ವಧುವಿನ ಸಾಂಪ್ರದಾಯಿಕ ಪದ್ಧತಿಗೆ ವಿರುದ್ಧವಾಗಿ ಈ ದಂಪತಿ ವಧುವಿನ ಮನೆಗೆ ತಲುಪುವುದನ್ನು ಮತ್ತು ವರನು ಅತ್ತೆ ಮನೆಯ ಹೊಸಿಲು ಹೊಕ್ಕುವ ಶಾಸ್ತ್ರ ಮಾಡುವುದನ್ನು ಜಾಹೀರಾತು ತೋರಿಸುತ್ತದೆ. ಇದು AU ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಜಾಹೀರಾತಾಗಿದೆ.

ಜಾಹೀರಾತು ತಯಾರಕರನ್ನು ಮೂರ್ಖರು ಎಂದ ನಿರ್ದೇಶಕ
ಕಾಶ್ಮೀರ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ಈ ಜಾಹೀರಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಬ್ಯಾಂಕ್‌ನ ಜಾಹೀರಾತಿನಲ್ಲಿ ಹಿಂದುಗಳ ಸಂಪ್ರದಾಯವನ್ನು ಕುಹಕ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಜಾಹೀರಾತಿನ ವಿಡಿಯೋವನ್ನು ಹಂಚಿಕೊಂಡಿರುವ ವಿವೇಕ್ ಅಗ್ನಿಹೋತ್ರಿ, ಸಾಮಾಜಿಕ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಬದಲಾಯಿಸಲು ಬ್ಯಾಂಕ್‌ಗಳು ಯಾವಾಗ ಜವಾಬ್ದಾರಿ ತೆಗೆದುಕೊಂಡವು? ನನಗೆ ತಿಳಿದಂತೆ ಅವು ಭ್ರಷ್ಟ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬದಲಾಯಿಸುವ ಮೂಲಕ ಕ್ರಿಯಾಶೀಲತೆ ಉಂಟು ಮಾಡಬೇಕು. ಇಂತಹ ಕೆಲಸಗಳನ್ನು ಮಾಡಿ, ಬಳಿಕ ಹಿಂದೂಗಳು ಟ್ರೋಲ್ ಮಾಡುತ್ತಾರೆ ಎಂದು ಹೇಳುತ್ತಾರೆ ಮೂರ್ಖರು ಎಂದಿದ್ದಾರೆ.

ಅಮೀರ್ ಖಾನ್ ಬಗ್ಗೆ ಇಂತಹ ವಿವಾದಗಳು ಬರುತ್ತೇವ ಇವೆ!
ಸಚಿವ ನರೋತ್ತಮ್ ಮಿಶ್ರಾ , "ನಾನು ದೂರನ್ನು ಸ್ವೀಕರಿಸಿದ ನಂತರ ನಟ ಅಮೀರ್ ಖಾನ್ ಅವರ ಖಾಸಗಿ ಬ್ಯಾಂಕ್‌ನ ಜಾಹೀರಾತನ್ನು ನೋಡಿದ್ದೇನೆ. ಭಾರತೀಯ ಸಂಪ್ರದಾಯಗಳು ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅಂತಹ ಜಾಹೀರಾತುಗಳನ್ನು ಮಾಡುವಂತೆ ನಾನು ಅವರನ್ನು ವಿನಂತಿಸುತ್ತೇನೆ" ಎಂದು ಹೇಳಿದ್ದಾರೆ.
"ನಾನು ಇದನ್ನು ಸೂಕ್ತವೆಂದು ಪರಿಗಣಿಸುವುದಿಲ್ಲ. ವಿಶೇಷವಾಗಿ ಅಮೀರ್ ಖಾನ್ ಬಗ್ಗೆ ಭಾರತೀಯ ಸಂಪ್ರದಾಯ, ಪದ್ಧತಿಗಳು ಮತ್ತು ದೇವತೆಗಳ ಬಗ್ಗೆ ಇಂತಹ ವಿವಾದಗಳು ಬರುತ್ತಲೇ ಇರುತ್ತವೆ. ನಿರ್ದಿಷ್ಟ ಧರ್ಮದ ಭಾವನೆಗಳಿಗೆ ಇಂತಹ ಕೃತ್ಯಗಳು ನೋವುಂಟು ಮಾಡುತ್ತದೆ. ಅವರು ಯಾರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ ಎಂದು ನಾನು ನಂಬುತ್ತೇನೆ" ಎಂದು ಹೇಳಿದ್ದಾರೆ.
ಈ ವರ್ಷದ ಆಗಸ್ಟ್‌ನಲ್ಲಿ, ನಟ ಹೃತಿಕ್ ರೋಷನ್ ಒಳಗೊಂಡ Zomato ನ ಜಾಹೀರಾತಿನ ಮೇಲೆ ವಿವಾದ ಉಂಟಾಗಿತ್ತು. ಮಧ್ಯಪ್ರದೇಶದ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನದ ಅರ್ಚಕರು ಈ ಜಾಹೀರಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದರು. ಬಳಿಕ ಜಾಹೀರಾತನ್ನು ವಾಪಸ್ ಪಡೆಯಲಾಯಿತು.












Click it and Unblock the Notifications