ಹೊತ್ತಿ ಉರಿದ ವೋಲ್ವೊ ಬಸ್: 8 ಮಂದಿ ಸಜೀವ ದಹನ
ಅಹಮದಾಬಾದ್,
ಜ.29: ಮತ್ತೊಂದು ವೋಲ್ವೊ ಬಸ್
ದುರಂತ.
ಈ
ಬಾರಿ
ಅಹಮದಾಬಾದ್
ಬಳಿ.
ಮಂಗಳವಾರ
ಮಧ್ಯ
ರಾತ್ರಿ
1
ಗಂಟೆಯಲ್ಲಿ
ಮುಂಬೈ-ಅಹಮದಾಬಾದ್
ರಾಷ್ಟ್ರೀಯ
ಹೆದ್ದಾರಿಯಲ್ಲಿ
ಡೀಸೆಲ್
ಟ್ಯಾಂಕರಿಗೆ
ಡಿಕ್ಕಿ
ಹೊಡೆದ
ಲಕ್ಷುರಿ
ಎಸಿ
ಬಸ್
ಧಗಧಗನೆ
ಹೊತ್ತಿ
ಉರಿದಿದೆ.
ತತ್ಪರಿಣಾಮ
8
ಬಸ್
ಪ್ರಯಾಣಿಕರು
ಸಜೀವವಾಗಿ
ಮೃತಪಟ್ಟಿದ್ದಾರೆ.
id="toptextpromo">
id='are-slot-1'
class='oiad
oi-axt
oiadv'>
id='top-searched-articles'>
ಅಪಘಾತಕ್ಕೀಡಾದ ಬಸ್ಸು ಪುಣೆಯ Purple Travels ಖಾಸಗಿ ಸಂಸ್ಥೆಗೆ ಸೇರಿದ ವೋಲ್ವೊ ಬಸ್ಸಾಗಿದೆ. ಡೀಸೆಲ್ ಟ್ಯಾಂಕರ್ ಸರಕಾರಿ ಸ್ವಾಮ್ಯದ BPCL ಕಂಪನಿಗೆ ಸೇರಿದ್ದಾಗಿದೆ. ಮೃತ ದುರ್ದೈವಿಗಳೆಲ್ಲ ಬಸ್ಸಿನಲ್ಲಿದ್ದವರು ಎಂದು ತಿಳಿದುಬಂದಿದೆ.
ದುರ್ಘಟನೆಯಲ್ಲಿ
14 ಮಂದಿ ತೀವ್ರಗಾಗಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಮನೋರ್ ಬಳಿ ಕುಡೆ ಗ್ರಾಮದ ಸಮೀಪ ಈ ಅಪಘಾತ ನಡೆದಿದ್ದು, ಬಸ್ಸು ಪುಣೆಯಿಂದ ಅಹಮದಾಬಾದಿಗೆ ತೆರಳುತ್ತಿತ್ತು. ಅಪಘಾತದ ನಂತರ ಸುಮಾರು ನಾಲ್ಕು ಗಂಟೆಯಿಂದ ಹೈವೇಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.











Click it and Unblock the Notifications