ಉತ್ತರಪ್ರದೇಶ ಅಸೆಂಬ್ಲಿ ಚುನಾವಣಾ ಸಮೀಕ್ಷೆ: ಸರ್ವಂ ಅತಂತ್ರಮಯಂ

Posted By:
Subscribe to Oneindia Kannada

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಜನರ ನಾಡಿಮಿಡಿತ ಯಾವ ಪಕ್ಷದ ಪರವಾಗಿದೆ ಎಂದು ಎಬಿಪಿ ನ್ಯೂಸ್ ಮತ್ತು ಲೋಕನೀತಿ ಮತ್ತೊಂದು ಸುತ್ತಿನ ಜನಾಭಿಪ್ರಾಯ ಸಂಗ್ರಹಿಸಿದೆ.

ಸಮೀಕ್ಷೆಯ ಪ್ರಕಾರ ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಎಸ್ಪಿ ಮತ್ತು ಬಿಎಸ್ಪಿ ನಡುವೆ ಹೆಚ್ಚುಕಮ್ಮಿ ಸಮಬಲದ ಪೈಪೋಟಿ ನಡೆಯಲಿದೆ. ಆದರೆ, ಕಾಂಗ್ರೆಸ್ ಪಕ್ಷದ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬರುತ್ತಿಲ್ಲ.(ಆರೆಸ್ಸೆಸ್ ನಡೆಸಿದ ಆಂತರಿಕ ಸಮೀಕ್ಷೆ)

ಜುಲೈ 24 ಮತ್ತು 25ರ ಅವಧಿಯಲ್ಲಿ ಎಬಿಪಿ ನ್ಯೂಸ್, ಸಿಸಿರೋ ನಡೆಸಿದ್ದ ಸಮೀಕ್ಷೆಗೂ ಮತ್ತು ಇತ್ತೀಚಿನ ಸಮೀಕ್ಷೆಗೆ ಹೋಲಿಸಿದರೆ, ಬಿಜೆಪಿ ಗಳಿಸಬಹುದಾದ ಮತಎಣಿಕೆಯ ಪ್ರಮಾಣದಲ್ಲಿ ಇಳಿಮುಖವಾಗಿದೆ.

ಎಬಿಪಿ, ಲೋಕನೀತಿ - ಸಿಎಸ್ಡಿಎಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಗಮನಿಸಬೇಕಾದ ಅಂಶವೇನಂದರೆ, ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಅವರ ಸೇವೆಯನ್ನು ಪಡೆದುಕೊಂಡಿದ್ದರೂ ಕಾಂಗ್ರೆಸ್‌ ಹತ್ತಕ್ಕಿಂತ ಕಮ್ಮಿ ಸ್ಥಾನಗಳಿಸಲಿದೆ.

ಪಕ್ಷಾಂತರ ಸಮಸ್ಯೆಯಿಂದ ಬಳಲುತ್ತಿರುವ ಮಾಯಾವತಿ ನೇತೃತ್ವದ ಬಿಎಸ್ಪಿಗೆ, ದೇಶದ ಕೆಲವೆಡೆ ನಡೆಯುತ್ತಿರುವ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಮತವಾಗಿ ಪರಿಣಮಿಸುವ ಸಾಧ್ಯತೆಯಿದೆ. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಉತ್ತರ ಪ್ರದೇಶ ಅಸೆಂಬ್ಲಿಯ ಒಟ್ಟು ಸ್ಥಾನಗಳು - 403.

ಉತ್ತರ ಪ್ರದೇಶ ಅಸೆಂಬ್ಲಿಯ ಒಟ್ಟು ಸ್ಥಾನಗಳು - 403.

ಯಾರು ಸರಕಾರ ರಚಿಸಲಿದ್ದಾರೆ
ಬಿಜೆಪಿ: ಶೇ. 32
ಎಸ್ಪಿ: ಶೇ. 26
ಬಿಎಸ್ಪಿ : ಶೇ. 24
ಕಾಂಗ್ರೆಸ್ : ಶೇ. 7
ಅತಂತ್ರ : ಶೇ. 4
ಈಗ ಹೇಳಲು ಸಾಧ್ಯವಿಲ್ಲ : ಶೇ. 7

ಶೇಕಡಾವರು ಯಾರಿಗೆ ಎಷ್ಟು?

ಶೇಕಡಾವರು ಯಾರಿಗೆ ಎಷ್ಟು?

ಬಿಜೆಪಿ : ಶೇ. 27
ಎಸ್ಪಿ : ಶೇ. 30
ಬಿಎಸ್ಪಿ : ಶೇ. 26
ಕಾಂಗ್ರೆಸ್ : ಶೇ. 5
ಇತರರು : ಶೇ. 12

ಯಾರಿಗೆ ಎಷ್ಟು ಸ್ಥಾನ?

ಯಾರಿಗೆ ಎಷ್ಟು ಸ್ಥಾನ?

ಬಿಜೆಪಿ : 124-134
ಎಸ್ಪಿ : 141-151
ಬಿಎಸ್ಪಿ : 103 -113
ಕಾಂಗ್ರೆಸ್ : 4 - 10
ಇತರರು : 6 - 12

ಪ್ರಿಯಾಂಕ ಗಾಂಧಿ

ಪ್ರಿಯಾಂಕ ಗಾಂಧಿ

ಪ್ರಿಯಾಂಕ ಗಾಂಧಿ ಆಗಮನದಿಂದ ಕಾಂಗ್ರೆಸ್ಸಿಗೆ ಲಾಭವಾಗಲಿದೆಯೇ?
ಹೌದು : ಶೇ. 19
ಇಲ್ಲ : ಶೇ. 51
ಈಗ ಹೇಳಲು ಸಾಧ್ಯವಿಲ್ಲ : ಶೇ. 30

ಪಕ್ಷಗಳ ಈಗಿನ ಬಲಾಬಲ

ಪಕ್ಷಗಳ ಈಗಿನ ಬಲಾಬಲ

ಬಿಜೆಪಿ : 42
ಎಸ್ಪಿ : 228
ಬಿಎಸ್ಪಿ : 80
ಕಾಂಗ್ರೆಸ್ : 29
ಇತರರು : 24

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ABP News-Lokniti CSDS Opinion Poll, UP heading towards Hung assembly. BJP to play a key role in forming the government.
Please Wait while comments are loading...