ಉಗ್ರರು ಅಪಹರಿಸಿದ್ದ ಭಾರತೀಯ ಯೋಧನ ಮೃತದೇಹ ಪತ್ತೆ

ಶ್ರೀನಗರ, ಜೂನ್ 15: ರಮ್ಜಾನ್ ಕದನ ವಿರಾಮವನ್ನು ಉಲ್ಲಂಘಿಸಿ, ಭಾರತೀಯ ಯೋಧ ಔರಂಗಝೇಬ್ ಎಂಬುವವರನ್ನು ಪುಲ್ವಾಮಾದಲ್ಲಿ ಉಗ್ರರು ಅಪಹರಿಸಿದ್ದರು. ಗುರುವಾರ ರಾತ್ರಿ ವೇಳೆಗೆ ಅಪಹೃತ ಸೈನಿಕ ಔರಂಗ ಜೇಬ್ ಅವರ ರಕ್ತಸಿಕ್ತ ದೇಹವು, ಪುಲ್ವಾಮಾದ ಗುಸೂ ಪ್ರದೇಶದಲ್ಲಿ ಪತ್ತೆಯಾಗಿದೆ.

ಪೂಂಚ್ ನ ನಿವಾಸಿಯಾಗಿದ್ದ ಔರಂಗಝೇಬ್ ಅವರು ಗುರುವಾರ ಬೆಳಗ್ಗೆ ಈದ್ ಹಬ್ಬದ ಪ್ರಯುಕ್ತ ರಜೆಯಲ್ಲಿ ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಹೊಂಚು ಹಾಕಿ ಕಾದು ಕುಳಿತ್ತಿದ್ದ ಉಗ್ರರು, ಮಾರ್ಗ ಮಧ್ಯದಲ್ಲಿ ಪುಲ್ವಾಮಾದ ಕಲಂಪೋರಾದ ಸಮೀಪ ಔರಂಗಝೇಬ್ ರನ್ನು ಅಪಹರಿಸಿದ್ದರು.

Abducted Indaian soldier Aurangzeb found dead in Pulwama

ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫಾಂಟ್ರಿಗೆ ಸೇರಿದ್ದ ಔರಂಗಝೇಬ್, ಶೋಪಿಯಾನ್‌ನ ಶಾದಿಮಾರ್ಗ್‌ನ 44 ರಾಷ್ಟ್ರೀಯ ರೈಫಲ್ಸ್‌ನ ಶಿಬಿರದಲ್ಲಿ ನಿಯುಕ್ತಿಗೊಂಡಿದ್ದರು.

ಉಗ್ರ ಸಮೀರ್ ಟೈಗರ್ ಹತ್ಯಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಔರಂಗಝೇಬ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಉಗ್ರರು ಈ ರೀತಿ ಹೀನಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಎರಡು ದಿನಗಳಲ್ಲಿ ಬಂಡಿಪೋರಾ ಮತ್ತು ಶೋಪಿಯಾನ್ ಲ್ಲೂ ಎನ್ಕೌಂಟರ್ ಗಳೂ ನಡೆದಿವೆ. ಇದರ ಜೊತೆಗೆ ಭಾರತದ ಗಡಿಯೊಳಕ್ಕೆ ನುಸುಳುವ ಹಲವು ವಿಫಲ ಯತ್ನಗಳನ್ನೂ ಭಯೋತ್ಪಾದಕರು ನಡೆಸಿದ್ದಾರೆ. ಹೀಗೆ ರಮ್ಜಾನ್ ಮಾಸದಲ್ಲಿ ಭಾರತೀಯ ಸೇನೆ ಕದನ ವಿರಾಮ ಘೋಷಿಸಿದರೂ ಉಗ್ರರು ಮಾತ್ರ ತಣ್ಣಗಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+